ಇರ್ದೆ ಉಪ್ಪಳಿಗೆ ಸರಕಾರಿ ಪ್ರೌಢಶಾಲೆಯಲ್ಲಿ ಸಂಭ್ರಮ ಶನಿವಾರ

0

ಪುತ್ತೂರು: ಶಿಕ್ಷಣ ಇಲಾಖೆಯ ‘ಸಂಭ್ರಮ ಶನಿವಾರ’ ಉಪಕ್ರಮದಡಿ ಜೂನ್ 20, ಶನಿವಾರದಂದು ಸರಕಾರಿ ಪ್ರೌಢಶಾಲೆ ಇರ್ದೆ ಉಪ್ಪಳಿಗೆಯಲ್ಲಿ ವಿಶೇಷ ಚೇತನ ವ್ಯಕ್ತಿಗಳೊಡನೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಲಾ ಸೃಷ್ಟಿ ಸಾಂಸ್ಕೃತಿಕ ತಂಡದ ವತಿಯಿಂದ ಶೈಕ್ಷಣಿಕ ಜಾದು ಪ್ರದರ್ಶನ ನಡೆಸಲಾಯಿತು. ಯುವ ಜಾದು ಪ್ರತಿಭೆಗಳಾದ ಮಾ. ರೋಷನ್ ಶರೀಫ್, ಮಾ. ಚಾಂದ್ ಶರೀಫ್, ರಾಷ್ಟ್ರೀಯ ಜಾದೂ ಪ್ರಶಸ್ತಿ ವಿಜೇತೆ, ಕಲಾಸೃಷ್ಟಿ ಸಾಂಸ್ಕೃತಿಕ ತಂಡದ ನಿರ್ದೇಶಕಿ ಹಾಗೂ ಉಪನ್ಯಾಸಕಿ ಮುಬೀನಾ ಪರ್ವೀನ್ ತಾಜ್, ಬಹುಮುಖ ಪ್ರತಿಭೆಯ ಯುವ ಸಾಧಕಿ ಶಮಾ ಪರ್ವೀನ್ ತಾಜ್ ಅವರನ್ನೊಳಗೊಂಡ ತಂಡವು ಉತ್ತಮ ಜಾದು ಪ್ರದರ್ಶನ ನೀಡಿ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಿ, ಸಾಧನೆಗೆ ಪ್ರೇರಣೆ ನೀಡಿತು.ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here