ದ ಕ ಖಾಝಿ ನಿಧನ : ಶಾಸಕ ಅಶೋಕ್ ರೈ ಸಂತಾಪ

0

ಪುತ್ತೂರು: ದ ಕ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ರವರ ನಿಧನಕ್ಕೆ ಶಾಸಕ ಆಶೋಕ್ ರೈ ಸಂತಾಪ ಸೂಚಿಸಿದ್ದಾರೆ.


ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸೇವೆ‌ ಸಲ್ಲಿಸುವ ಮೂಲಕ ದ ಕ ಜಿಲ್ಲಾ ಖಾಝಿಯಾಗಿ ಸಮುದಾಯದ ಸೇವೆಗೈದ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಓರ್ವ ಧಾರ್ಮಿಕ ನೇತಾರರಾಗಿದ್ದರೂ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದ ಮಹಾನ್ ಮೇಧಾವಿಯಾಗಿದ್ದರು. ಮೃತರ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಶಾಸಕರು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here