ವಿಟ್ಲ ಪೊಲೀಸ್ ಠಾಣೆಯ ಎ.ಎಸ್.ಐ ಜಯರಾಮ ಕೆ.ಡಿಜಿ, ಐಜಿಪಿ ಶ್ಲಾಘನಾ ಪದಕಕ್ಕೆ ಆಯ್ಕೆ

0

ಪುತ್ತೂರು: 2025-26ನೇ ಸಾಲಿನ ಪ್ರತಿಷ್ಠಿತ ಡಿಜಿ ಮತ್ತು ಐಜಿಪಿ ಕಮಾಂಡೇಷನ್ ಡಿಸ್ಕ್ ಪ್ರಶಸ್ತಿಗೆ ರಾಜ್ಯದ 200 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದ್ದು, ದಕ್ಷಿಣ ಕನ್ನಡದ ಮೂವರ ಪೈಕಿ ವಿಟ್ಲ ಪೊಲೀಸ್ ಠಾಣೆಯ ಎ.ಎಸ್.ಐ ಜಯರಾಮ ಕೆ ಅವರು ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.


ವಾರಂಟ್, ಎಲ್‌ಪಿಸಿಯಲ್ಲಿ ರಾಜ್ಯ ಮತ್ತು ಅಂತರಾಜ್ಯದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿರುವಲ್ಲಿ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ, ದಕ್ಷತೆ ಹಾಗೂ ಜನಸ್ನೇಹಿ ಸೇವೆಯ ಮೂಲಕ ಪೊಲೀಸ್ ಇಲಾಖೆಯಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿರುವ ಜಯರಾಮ ಕೆ ಅವರ ಸಾಧನೆಯನ್ನು ಪರಿಗಣಿಸಿ ರಾಜ್ಯ ಪೊಲೀಸ್ ಇಲಾಖೆಯು ಈ ಗೌರವವನ್ನು ನೀಡಿ ಸನ್ಮಾನಿಸಲಿದೆ. ಈ ಹಿಂದೆಯೂ ದ.ಕ.ಜಿಲ್ಲಾ ಎಸ್ಪಿಯವರ ಕಡೆಯಿಂದ ವಾರಂಟ್ ವಿಶೇಷ ತನಿಖೆಗಾಗಿ ಮೂರು ಭಾರಿ ಪ್ರಶಂಶನಾ ಪತ್ರ ಪಡೆದುಕೊಂಡಿರುವ ಅವರು ಉಪ್ಪಿನಂಗಡಿ, ಮಂಗಳೂರು ಸಂಚಾರ ಪೊಲೀಸ್, ಅಬಕಾರಿ, ವಿಶೇಷದಳ, ಬಂಟ್ವಾಳ ಗ್ರಾಮಾಂತರ, ಪುತ್ತೂರು, ಸುಳ್ಯ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ವಿಟ್ಲದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಕುಳಗ್ರಾಮದ ಇಡ್ಕಿದುವಿನಲ್ಲಿ ವಾಸ್ತವ್ಯ ಹೊಂದಿದ್ದಾರೆ.

LEAVE A REPLY

Please enter your comment!
Please enter your name here