ಹಿರೆಬಂಡಾಡಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿಮಂಡಲ ರಚನೆ: ಮುಖ್ಯಮಂತ್ರಿ: ಧೃತಿ, ಉಪ ಮುಖ್ಯಮಂತ್ರಿ: ಪ್ರದ್ವಿನ್

0

ಪುತ್ತೂರು: ಹಿರೇಬಂಡಾಡಿ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿಮಂಡಲದ ರಚನೆಗಾಗಿ ಇತ್ತೀಚೆಗೆ ಚುನಾವಣೆ ನಡೆಯಿತು.

ಪ್ರಜಾಪ್ರಭುತ್ವದ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಉದ್ದೇಶದಿಂದ ನಡೆದ ಈ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡರು. ಚುನಾವಣೆಯ ಫಲಿತಾಂಶದಂತೆ, ಶಾಲಾ ಮುಖ್ಯಮಂತ್ರಿಯಾಗಿ ೭ನೇ ತರಗತಿಯ ಕುಮಾರಿ ಧೃತಿ ಮತ್ತು ಉಪಮುಖ್ಯಮಂತ್ರಿಯಾಗಿ 6ನೇ ತರಗತಿಯ ಪ್ರಧ್ವಿನ್ ಆಯ್ಕೆಯಾದರು.ನೂತನ ಮಂತ್ರಿಮಂಡಲದ ಇತರೆ ಸದಸ್ಯರುಗಳಾಗಿ ಗೃಹ ಸಚಿವರು: ಕೃತಿಕ್, ಕೌಶಲ್, ಮನ್ವಿತ್, ವಿ. ರಕ್ಷಿತ್, ಸಾತ್ವಿಕ್, ನೀರಾವರಿ ಸಚಿವರು: ಸಚೇತನ್, ಅಖಿಲೇಶ್, ನಿಶಾಲ್, ಸ್ವಚ್ಛತಾ ಸಚಿವರು: ತನ್ವಿ, ನಿಶ್ಮಿತ, ಆಸಿಫಾ,
ಶಿಸ್ತು ಸಚಿವರು: ಧೃತಿ, ದೀಪ್ತಿ.ವಾರ್ತಾ ಸಚಿವರು: ನಿಶಿಕ್, ಸಾನ್ವಿತ್, ಆಹಾರ ಸಚಿವರು: ಗಹನ, ಭೂಮಿಕಾ.ಕ್ರೀಡಾ ಸಚಿವರು: ತರುಣ್, ಸಾನ್ವಿಕ್, ಸಂಪತ್, ಗ್ರಂಥಾಲಯ ಸಚಿವರು: ಧೃತಿ ಹೇಮಿಶ.ಆರೋಗ್ಯ ಸಚಿವರು: ಅಕ್ಷ, ಧನುಶ್ರೀ.ವಿದ್ಯಾ ಸಚಿವರು: ಅವನಿ, ಸಾನ್ವಿಕ್, ವರ್ಷಿಣಿರವರುಗಳು ಆಯ್ಕೆಯಾದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಬಾಬು ಟಿ. ಮತ್ತು ಜಗದೀಶ್ ಎಂ.ಸಿ. ಹಾಗೂ ಶಾಲೆಯ ಸಮಸ್ತ ಶಿಕ್ಷಕ ವೃಂದದವರು ಉಪಸ್ಥಿತರಿದ್ದು, ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here