






ಪುತ್ತೂರು:ವಿದ್ಯುತ್ ಎನ್ನುವುದು ಸಾರ್ವಜನಿಕರು ಹಣ ಕೊಟ್ಟು ಪಡೆಯುವ ಒಂದು ಸೇವೆ.ಖಾಸಗೀಕರಣವನ್ನು ಕೇವಲ ವಿರೋಧಿಸುವುದಲ್ಲ,ಮೊದಲು ಗ್ರಾಹಕರಿಗೆ ನೀಡುವ ಸೇವೆಯನ್ನು ಉತ್ತಮಪಡಿಸಲು ಪ್ರಯತ್ನಿಸಿ.ಜನರ ಫೋನ್ ಕರೆಗಳನ್ನು ಸ್ವೀಕರಿಸುವುದನ್ನು ಕಲಿಯಿರಿ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಮೆಸ್ಕಾಂ ಅಽಕಾರಿಗಳು ಹಾಗೂ ನೌಕರರಿಗೆ ಸಂದೇಶ ನೀಡಿದ್ದಾರೆ.


ಮೆಸ್ಕಾಂನ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಶಾಸಕ ಅಶೋಕ್ ರೈ, ಖಾಸಗಿ ಮತ್ತು ಸರ್ಕಾರಿ ವ್ಯವಸ್ಥೆಗಳ ನಡುವಿನ ವ್ಯತ್ಯಾಸವನ್ನು ಉದಾಹರಿಸಿ,ಖಾಸಗಿ ಕಟ್ಟಡಗಳು ಎಷ್ಟು ಸುಸಜ್ಜಿತವಾಗಿರುತ್ತವೆ,ಅದೇ ಸರ್ಕಾರಿ ಕಟ್ಟಡಗಳು ಹೇಗಿರುತ್ತವೆ ಎಂಬುದನ್ನು ಗಮನಿಸಿ.ಸರ್ಕಾರ ಎಂದರೆ ಯಾರೋ ಹಣ ಕೊಡುತ್ತಾರೆ,ಹೇಗಿದ್ದರೂ ನಡೆಯುತ್ತದೆ ಎನ್ನುವ ಉದಾಸೀನ ಮನೋಭಾವ ನೌಕರರಲ್ಲಿದೆ.ಮೊದಲು ಈ ಮನಸ್ಥಿತಿಯಿಂದ ಸಿಬ್ಬಂದಿಗಳು ಹೊರಬರಬೇಕು.ಉತ್ತಮ ಸೇವೆ ನೀಡಿದರೆ ಖಾಸಗೀಕರಣದ ಪ್ರಶ್ನೆಯೇ ಬರುವುದಿಲ್ಲ.ಖಾಸಗಿ ಕಂಪನಿಗಳು ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವುದರಿಂದಲೇ ಜನರು ಅವರತ್ತ ಆಕರ್ಷಿತರಾಗುತ್ತಾರೆ.ಇವತ್ತು ಸಾರ್ವಜನಿಕರು ಅಂಗಡಿಗೆ ಹೋಗಿ ಸಾಮಾನು ಖರೀದಿಸುವಷ್ಟೇ ಸರಳವಾಗಿ ವಿದ್ಯುತ್ ಸಂಪರ್ಕ ಸಿಗಬೇಕು.ಆದರೆ, ಒಂದು ಸಣ್ಣ ವಿದ್ಯುತ್ ಕನೆಕ್ಷನ್ ಪಡೆಯಲು ಜನಸಾಮಾನ್ಯರಿಗೆ 25 ಅನಾವಶ್ಯಕ ಕಾನೂನುಗಳನ್ನು ಮುಂದಿಡಲಾಗುತ್ತದೆ.ಮೊದಲು ಇಂತಹ ಕಿರಿಕಿರಿ ನಿಯಮಗಳಿಂದ ಹೊರಬನ್ನಿ.ಕೆಲವು ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಕೈಕೊಟ್ಟು ಮೂರು ದಿನಗಳಾದರೂ ಸಮಸ್ಯೆ ಬಗೆಹರಿಯುವುದಿಲ್ಲ.ಸಿಬ್ಬಂದಿಗಳಿಗೆ ಫೋನ್ ಮಾಡಿದರೆ ಕರೆಯನ್ನು ಸ್ವೀಕರಿಸುವುದಿಲ್ಲ.ನಾವೇ ಎಷ್ಟೋ ಬಾರಿ ಬಿಝಿಯಿದ್ದಾಗ ಕಾಲ್ ಸ್ವೀಕರಿಸಲು ಸಾಧ್ಯವಾಗದಿದ್ದರೆ, ಆಮೇಲೆ ಮಿಸ್ ಕಾಲ್ ನೋಡಿ ಮರಳಿ ಫೋನ್ ಮಾಡುತ್ತೇವೆ.ಅದೇ ರೀತಿ ನೀವೂ ಸಾರ್ವಜನಿಕರ ಕರೆಗಳಿಗೆ ಸ್ಪಂದಿಸಿ, ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಿ ಎಂದು ಶಾಸಕರು ಬುದ್ಧಿವಾದ ಹೇಳಿದರು.ಇದೇ ವೇಳೆ, ಮೆಸ್ಕಾಂ ನೌಕರರ ಹಿತರಕ್ಷಣೆಯ ಕುರಿತು ಮಾತನಾಡಿದ ಶಾಸಕರು, ‘ಮೆಸ್ಕಾಂ ಸಂಸ್ಥೆಯು ಸರ್ಕಾರದ ಅಽನದಲ್ಲೇ ಇರಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ.ನೌಕರರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ನೋಡಿಕೊಳ್ಳುತ್ತದೆ.ಆದರೆ, ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಗುಣಮಟ್ಟದ ಸೇವೆ ನೀಡುವುದು ನಿಮ್ಮ ಆದ್ಯತೆಯಾಗಬೇಕು’ ಎಂದು ಸ್ಪಷ್ಟಪಡಿಸಿದರು.



ಮನಸ್ಸಿನಲ್ಲಿ ಕಳ್ಳತನ ಇಟ್ಟುಕೊಂಡು ಆಣೆ-ಪ್ರಮಾಣ ಮಾಡಿದರೆ ಏನು ಪ್ರಯೋಜನ ?:
‘ಸಿಹಿ ಎಲ್ಲಿದೆಯೋ ಅಲ್ಲಿಗೆ ಇರುವೆಗಳು ಹೋಗುವುದು ಸಹಜ.ಅದೇ ರೀತಿ ಕೆಲವು ಶಾಸಕರು ಹೋಗಿದ್ದಾರೆ.ಮನಸ್ಸಿನಲ್ಲಿ ಕಳ್ಳತನ ಇಟ್ಟುಕೊಂಡು ಆಣೆ-ಪ್ರಮಾಣ ಮಾಡಿದರೆ ಏನು ಪ್ರಯೋಜನ? ಮೊದಲು ತಮ್ಮ ಮನ:ಸಾಕ್ಷಿಯನ್ನು ತಿದ್ದಿಕೊಂಡು,ಅಭಿವೃದ್ಧಿ ಪರ ಕೆಲಸ ಮಾಡಲಿ’ ಎಂದು, ವಿಧಾನಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡ ಮತದಾನದ (ಕ್ರಾಸ್ ವೋಟ್) ಹಿನ್ನೆಲೆಯಲ್ಲಿ, ತಪ್ಪಿತಸ್ಥರನ್ನು ಪತ್ತೆಹಚ್ಚಲು ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿಸಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ ಎಂಬ ವರದಿಗಳ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕರು,‘ವಿಧಾನಪರಿಷತ್ ಚುನಾವಣೆಯಲ್ಲಿ ಸ್ವತಃ ಬಿಜೆಪಿ ಶಾಸಕರೇ ಅಡ್ಡ ಮತದಾನ ಮಾಡಿದ್ದಾರೆ.ಬಿಜೆಪಿ ಪಕ್ಷಕ್ಕೆ ತನ್ನದೇ ಶಾಸಕರ ಮೇಲೆ ನಿಯಂತ್ರಣವಿಲ್ಲವೇ? ಇನ್ನು ಜೆಡಿಎಸ್ ಪಕ್ಷಕ್ಕೆ ಅವರ ಶಾಸಕರ ಮೇಲೆ ಹಿಡಿತ ತಪ್ಪಿದೆಯೇ? ಶಾಸಕರಿಗೆ ಎಲ್ಲೋ ‘ಸ್ವೀಟ್’ ಸಿಕ್ಕಿದೆ ಎಂದು ಅಡ್ಡ ಮತದಾನ ಮಾಡಿದ್ದಾರೆ’ ಎಂದು ಲೇವಡಿ ಮಾಡಿದರು. ಇದೇ ವೇಳೆ ಕರಾವಳಿ ಭಾಗದ ಶಾಸಕರು ಯಾರಾದರೂ ಅಡ್ಡ ಮತದಾನದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅಶೋಕ್ ಕುಮಾರ್ ರೈ, ‘ಕರಾವಳಿ ಭಾಗದ ಶಾಸಕರು ಅಡ್ಡ ಮತದಾನ ಮಾಡಿರುವ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ’ ಎಂದು ತಿಳಿಸಿದರು.ವಿರೋಧ ಪಕ್ಷಗಳು ಧರ್ಮಸ್ಥಳಕ್ಕೆ ಹೋಗಿ ಆಣೆ-ಪ್ರಮಾಣ ಮಾಡುವ ನಾಟಕ ಆಡುವ ಬದಲು, ಸ್ವಪಕ್ಷದ ಶಾಸಕರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲಿ ಎಂದು ಶಾಸಕರು ಹೇಳಿದರು.










