ರೋಟರಿ ಪುತ್ತೂರು ಈಸ್ಟ್‌ಗೆ “ಡೈಮಂಡ್ ಪ್ಲಸ್” ಪ್ರಶಸ್ತಿ

0

ಪುತ್ತೂರು: 2025-26ನೇ ಸಾಲಿನಲ್ಲಿ ಸಮಾಜಮುಖಿ ಸೇವೆ, ಸದಸ್ಯತ್ವ ಅಭಿವೃದ್ಧಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ ಹಾಗೂ ಸಮುದಾಯ ಕಲ್ಯಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಕೈಗೊಂಡಿರುವ ಗಣನೀಯ ಸೇವಾ ಕಾರ್ಯಕ್ರಮಗಳನ್ನು ಪರಿಗಣಿಸಿ, ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181ರ ಜಿಲ್ಲಾ ಅತ್ಯುನ್ನತ “ಡೈಮಂಡ್ ಪ್ಲಸ್” ಪ್ರಶಸ್ತಿಯನ್ನು ಕ್ಲಬ್‌ಗೆ ಪ್ರದಾನ ಮಾಡಲಾಗಿದೆ.

ಜೂ. 20ರಂದು ಮೈಸೂರಿನ ಮೈಸೂರು ಯೂನಿಯನ್‌ನಲ್ಲಿ ನಡೆದ ಜಿಲ್ಲಾ ಮಟ್ಟದ “ಅನುಬಂಧ ಪ್ರಶಸ್ತಿ ಪ್ರದಾನ” ಸಮಾರಂಭದಲ್ಲಿ ರೋಟರಿ ಕ್ಲಬ್ ಪುತ್ತೂರು ಈಸ್ಟ್‌ನ ಅಧ್ಯಕ್ಷ ಶಶಿಧರ್ ಕಿನ್ನಿಮಜಲ್ ಅವರ ನೇತೃತ್ವದ ತಂಡ ಈ ಗೌರವವನ್ನು ಸ್ವೀಕರಿಸಿತು. ಜಿಲ್ಲೆಯ ವಿವಿಧ ರೋಟರಿ ಕ್ಲಬ್‌ಗಳ ಕಾರ್ಯಚಟುವಟಿಕೆಗಳನ್ನು ಮೌಲ್ಯಮಾಪನ ಮಾಡಿ ನೀಡಲಾಗುವ ಈ ಪ್ರತಿಷ್ಠಿತ ಪ್ರಶಸ್ತಿಯು, ಕ್ಲಬ್‌ನ ಸೇವಾ ಬದ್ಧತೆ, ಯೋಜನೆಗಳ ಪರಿಣಾಮಕಾರತ್ವ ಹಾಗೂ ಸಮುದಾಯದ ಅಭಿವೃದ್ಧಿಗೆ ಸಲ್ಲಿಸಿದ ಕೊಡುಗೆಗೆ ದೊರೆತ ಮಹತ್ವದ ಮಾನ್ಯತೆಯಾಗಿದೆ.

ಇದರೊಂದಿಗೆ ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181ರ ವ್ಯಾಪ್ತಿಯಲ್ಲಿರುವ ಎಲ್ಲಾ ರೋಟರಿ ಕ್ಲಬ್‌ಗಳ ಪೈಕಿ ENGAGEMENT EXCELLENCE ಪ್ರಶಸ್ತಿಗಳನ್ನು ಸಹ ಕ್ಲಬ್ ತನ್ನದಾಗಿಸಿಕೊಂಡಿದೆ. ಈ ಸಾಧನೆಯು ರೋಟರಿ ಕ್ಲಬ್ ಪುತ್ತೂರು ಈಸ್ಟ್‌ನ ಎಲ್ಲಾ ಸದಸ್ಯರ ಒಗ್ಗಟ್ಟು, ಸೇವಾ ಮನೋಭಾವ ಹಾಗೂ ಸಮಾಜದ ಒಳಿತಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ತಂಡದ ಸಮರ್ಪಣೆಯ ಪ್ರತೀಕವಾಗಿದೆ. ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಕ್ಲಬ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದು, ಈ ಗೌರವವನ್ನು ಇನ್ನಷ್ಟು ಸೇವಾ ಚಟುವಟಿಕೆಗಳಿಗೆ ಪ್ರೇರಣೆಯಾಗಿ ಸ್ವೀಕರಿಸುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here