ಲಯನ್ಸ್ ಪುತ್ತೂರ್ದ ಮುತ್ತು, ಲಿಯೋ ಪುತ್ತೂರ್ದ ಮುತ್ತು ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ:ರವಿಪ್ರಸಾದ್ ಶೆಟ್ಟಿ,ಕಾರ್ಯದರ್ಶಿ:ಸುಪ್ರೀತ್ ಬಿ.ಬಿ,ಕೋಶಾಧಿಕಾರಿ:ಅನಸೂಯ ಬಾ
ಅಧ್ಯಕ್ಷ:ಅಮೃತ್ ಪಿ.ಜೆ,ಕಾರ್ಯದರ್ಶಿ:ತೃಷಾ,ಕೋಶಾಧಿಕಾರಿ:ದಿಶನ್

ಪುತ್ತೂರು:ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್ ಜಿಲ್ಲೆ 317ಡಿ, ರೀಜ್ಹನ್ 7, ವಲಯ 2ರ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಹಾಗೂ ಲಿಯೋ ಕ್ಲಬ್ ಪುತ್ತೂರ್ದ ಮುತ್ತು ಇದರ ೨೦೨೬-೨೭ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನೆರವೇರಿದೆ.


ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ನೂತನ ಅಧ್ಯಕ್ಷರಾಗಿ ರವಿಪ್ರಸಾದ್ ಶೆಟ್ಟಿ ಬನ್ನೂರು, ಕಾರ್ಯದರ್ಶಿಯಾಗಿ ಸುಪ್ರೀತ್ ಬಿ.ಬಿ, ಕೋಶಾಧಿಕಾರಿಯಾಗಿ ಅನಸೂಯ ಬಾ ಟಿರವರು ಆಯ್ಕೆಯಾಗಿದ್ದಾರೆ. ಉಳಿದಂತೆ ಪ್ರಥಮ ಉಪಾಧ್ಯಕ್ಷರಾಗಿ ದಯಾನಂದ ರೈ ಕೋರ್ಮಂಡ, ದ್ವಿತೀಯ ಉಪಾಧ್ಯಕ್ಷರಾಗಿ ಜಲೀಲ್ ಬೈತಡ್ಕ, ತೃತೀಯ ಉಪಾಧ್ಯಕ್ಷರಾಗಿ ವಾಣಿ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾಗಿ ವೇದಾವತಿ ರಾಜೇಶ್, ಚೀಫ್ ಎಡ್ವೈಸರ್ ಆಗಿ ಅಬೂಬಕ್ಕರ್ ಮುಲಾರ್, ಎಲ್‌ಸಿಐಎಫ್ ಕೋ-ಆರ್ಡಿನೇಟರ್ ಆಗಿ ಲ್ಯಾನ್ಸಿ ಮಸ್ಕರೇನ್ಹಸ್, ಸರ್ವಿಸ್ ಚೇರ್‌ಪರ್ಸನ್ ಆಗಿ ಪ್ರತಿಮಾ ಯು ರೈ, ಕ್ಲಬ್ ಆಡಳಿತಾಧಿಕಾರಿಯಾಗಿ ಅನಿಲ್ ಮಸ್ಕರೇನ್ಹಸ್, ಮಾರ್ಕೆಟಿಂಗ್ ಮತ್ತು ಕಮ್ಯೂನಿಕೇಶನ್ ಆಗಿ ಶವಣ್ ನಾಕ್, ಕ್ಲಬ್ ಪಿಆರ್‌ಒ ಆಗಿ ಚಂದ್ರಶೇಖರ್ ಪಿ, ಕ್ಲಬ್ ಮಾರ್ಕೆಟಿಂಗ್ ಮತ್ತು ಕೋ-ಆರ್ಡಿನೇಟರ್ ಆಗಿ ಮೊಹಮ್ಮದ್ ಕುಕ್ಕುವಳ್ಳಿ, ಮೆಂಬರ್‌ಶಿಪ್ ಚೇರ್‌ಪರ್ಸನ್ ಆಗಿ ವತ್ಸಲ ಪಿ.ಶೆಟ್ಟಿ, ಕ್ಲಬ್ ಟೇಮರ್ ಆಗಿ ಗಂಗಾಧರ್ ಶೆಟ್ಟಿ, ಕ್ಲಬ್ ಟೇಲ್ ಟ್ವಿಸ್ಟರ್ ಆಗಿ ಯಶುಭ ರೈ, ನಿರ್ದೇಶಕರುಗಳಾಗಿ ಪ್ರಭಾಕರ್ ಜಿ, ಮೀನಾಕ್ಷಿ ಆರ್, ಭಾಗ್ಯೇಶ್ ರೈ, ರವೀಂದ್ರ ಪೈ ಎನ್, ಮೀನಾಕ್ಷಿ ಎಸ್, ಲೆರಿಸ್ಸ ಪ್ರಿನ್ಸಿ ಮಸ್ಕರೇನ್ಹಸ್, ಲಿಯೋ ಕ್ಲಬ್ ಪುತ್ತೂರ್ದ ಮುತ್ತು ನೂತನ ಅಧ್ಯಕ್ಷರಾಗಿ ಅಮೃತ್ ಪಿ.ಜೆ, ಕಾರ್ಯದರ್ಶಿಯಾಗಿ ತೃಷಾ, ಕೋಶಾಧಿಕಾರಿಯಾಗಿ ದಿಶನ್, ಪ್ರಥಮ ಉಪಾಧ್ಯಕ್ಷರಾಗಿ ಶ್ರೀಶ ಎನ್.ನಾಯಕ್, ದ್ವಿತೀಯ ಉಪಾಧ್ಯಕ್ಷರಾಗಿ ಕಶಿಶ್, ಮೆಂಬರ್‌ಶಿಪ್ ಚೇರ್‌ಪರ್ಸನ್ ಆಗಿ ಕೆ.ವಿಧಿಕ್ಷಾ ನಾಯಕ್, ಸರ್ವಿಸ್ ಚೇರ್‌ಪರ್ಸನ್ ಆಗಿ ತುಶಾರ್ ಗೌಡ ಆಯ್ಕೆಯಾಗಿದ್ದಾರೆ.


ನೂತನ ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರವಿಪ್ರಸಾದ್ ಶೆಟ್ಟಿ ಬನ್ನೂರುರವರು ಓರ್ವ ಪತ್ರಕರ್ತನಾಗಿ ಸೇವೆ ಮಾಡಿದ ಅನುಭವ ಇರುವವರು. ಭಾರತೀಯ ಜನತಾ ಪಾರ್ಟಿಯಲ್ಲಿ ವಿವಿಧ ಹುದ್ದೆಯನ್ನು ಅಲಂಕರಿಸಿ, ರಾಷ್ಟ್ರೀಯ ಸ್ವಯಂಸೇವಕ ಸಂಘ, ಬಜರಂಗದಳ, ಶಿವಸೇನೆ, ರಾಷ್ಟ್ರೀಯ ಹಿಂದೂ ಸೇನೆ, ಶ್ರೀರಾಮಸೇನೆ ಇತ್ಯಾದಿ ಸಂಘಟನೆಗಳಲ್ಲಿ ತೊಡಗಿಸಿಕೊಂಡು, ಭಾರತೀಯ ಹಿಂದೂ ಪರಿಷತ್ ಸಂಘಟನೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರದಾರಿಯಾಗಿದ್ದರು. ಚೈತನ್ಯ ಮಿತ್ರವೃಂದದ ಸದಸ್ಯರಾಗಿ, ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಬಳಿಕ ಅಧ್ಯಕ್ಷರಾಗಿ, ಯುವ ಬಂಟರ ಸಂಘದ ಕಾರ್ಯದರ್ಶಿಯಾಗಿ ನಂತರ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಪ್ರಸ್ತುತ ಪುತ್ತೂರು ತಾಲೂಕು ಬಂಟರ ಸಂಘದ ನಿರ್ದೇಶಕರಾಗಿದ್ದಾರೆ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಸುಮಾರು 3 ವರ್ಷಗಳ ಸೇವೆ ಸಲ್ಲಿಸಿದ್ದ ಇವರು ಪ್ರಸ್ತುತ ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ತೂರು ಲಯನ್ಸ್ ಕ್ಲಬ್‌ನ ಸ್ಥಾಪಕ ಕಾರ್ಯದರ್ಶಿಯಾಗಿ ಕೆಲಸ ಮಾಡಿ 317ಆ ಲಯನ್ಸ್ ಜಿಲ್ಲೆಯಲ್ಲಿ ಉತ್ತಮ ಕಾರ್ಯದರ್ಶಿಗಳ ಸಾಲಿನಲ್ಲಿ 5ನೇ ಸ್ಥಾನವನ್ನು ಪಡೆದಿದ್ದು, ಪ್ರಸ್ತುತ ಉಪಾಧ್ಯಕ್ಷರಾಗಿ ಸೇವೆ ಮಾಡುತ್ತಿದ್ದು ಮುಂದಿನ ಲಯನ್ಸ್ ವರ್ಷಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


ನೂತನ ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಸುಪ್ರೀತ್ ಬಿ.ಬಿರವರು ಮೂಲತಃ ಕೃಷಿಕರಾಗಿದ್ದು, ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪಡೆದಿರುತ್ತಾರೆ. ರಾಜಕೀಯ ರಂಗದಲ್ಲಿ ಕೂಡ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ಪ್ರಸ್ತುತ ಇವರು ಕಾಂಗ್ರೆಸ್ ಪಕ್ಷದ ಪುತ್ತೂರು ವಿಧಾನಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿರುತ್ತಾರೆ. ಇವರು ೨೦೨೪ರಲ್ಲಿ ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್ ಸೇರಿ 2025-26ರ ಅವಧಿಯಲ್ಲಿ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ.


ನೂತನ ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ಅನಸೂಯ ಬಾರವರು 1980ರಲ್ಲಿ ಶಿಕ್ಷಕಿಯಾಗಿ ಸರಕಾರಿ ಶಾಲೆಗೆ ಪಾದಾರ್ಪಣೆಗೈಯ್ದು ತಣ್ಣೀರುಬಾವಿ ಸ.ಹಿ.ಪ್ರಾ ಶಾಲೆ, ಕಾಟಿಪಳ್ಳ ಶಾಲೆ, ಪುತ್ತೂರು ಸಾಲ್ಮರ ಶಾಲೆ ಇಲ್ಲಿ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸಿ 2004ರಂದು ಮುಖ್ಯ ಗುರುಗಳಾಗಿ ಪದೋನ್ನತಿ ಹೊಂದಿ ಮುಕ್ವೆ ಸರಕಾರಿ ಹಿ.ಪ್ರಾ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ 2018ರಂದು ನಿವೃತ್ತರಾಗಿರುತ್ತಾರೆ. ತಮ್ಮ ಸೇವಾ ಅವಧಿಯಲ್ಲಿ ಎಲ್ಲರ ಸಹಕಾರದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಚಿತ್ತಾರ ಚಿಣ್ಣರ ಲೋಕ ಎಂಬ ಹೆಸರಿನ ಪೂರ್ವ ಪ್ರಾಥಮಿಕ ಶಾಲೆಯನ್ನು ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಎಸ್ ಶಶಿಧರ್‌ರವರ ಮಾರ್ಗದರ್ಶನದಲ್ಲಿ(ಎಲ್‌ಕೆಜಿ/ಯುಕೆಜಿ) ಪ್ರಾರಂಭಗೊಂಡಿತು. ದಾನಿಗಳ ನೆರವಿನಿಂದ ಶಾಲಾ ರಂಗಮಂದಿರ, ಗ್ರಂಥಾಲಯ, ಹಸಿರು ಉದ್ಯಾನವನ, ಧ್ವಜಸ್ಥಂಭ ನಿರ್ಮಾಣ, ಎಲ್‌ಐಸಿ ಮತ್ತು ರೈಲ್ವೇ ಇಲಾಖೆಯಿಂದ ಶೌಚಾಲಯಗಳು ಸರಕಾರದ ವತಿಯಿಂದ ಸಾಕಷ್ಟು ತರಗತಿ ಕೊಠಡಿಗಳು ನಿರ್ಮಾಣಗೊಂಡವು.


ಜೂ.25:ಪದಪ್ರದಾನ…
ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಜೂ.25 ರಂದು ಬೈಪಾಸ್-ಬಪ್ಪಳಿಗೆಯ ಆಶ್ಮಿ ಕಂಫರ್ಟ್ಸ್‌ನಲ್ಲಿ ಸಂಜೆ ನೆರವೇರಲಿದೆ. ಮಾಜಿ ಜಿಲ್ಲಾ ಗವರ್ನರ್ ಡಾ.ಗೀತಪ್ರಕಾಶ್‌ರವರು ನೂತನ ಪದಾಧಿಕಾರಿಗಳಿಗೆ ಪದಪ್ರದಾನವನ್ನು ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ರಾಯಭಾರಿ ಕಾವು ಹೇಮನಾಥ ಶೆಟ್ಟಿ ದಂಪತಿ ಸಹಿತ ಹಲವರು ಅತಿಥಿಗಳು ಉಪಸ್ಥಿತಲಿದ್ದಾರೆ ಎಂದು ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here