ಅಮೈ ಶಾಲಾ ನಿವೃತ್ತ ಮುಖ್ಯ ಗುರು ಜಗನ್ನಾಥ ಎಸ್ ಅವರಿಗೆ ಸನ್ಮಾನ

0

ಪುತ್ತೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಮೈ ಇಲ್ಲಿ ಮುಖ್ಯಗುರುಗಳಾಗಿ ಕಾರ್ಯನಿರ್ವಹಿಸಿ ಇತ್ತೀಚೆಗೆ ನಿವೃತ್ತರಾದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಗನ್ನಾಥ ಎಸ್ ಇವರ ಸನ್ಮಾನ ಸಮಾರಂಭವು ಅಮೈ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಕುಂಞಿ ವಹಿಸಿ ಮಾತನಾಡಿ ಜಗನ್ನಾಥ ಎಸ್ ರವರು ಅಮೈ ಶಾಲೆಗೆ ಶಿಕ್ಷಕರಾಗಿ ಬಂದ ನಂತರ ಶಾಲೆಯ ಸರ್ವತೋಮುಖ ಅಭಿವೃದ್ಧಿ ಆಗಿದೆ. ಅವರ ನಿವೃತ್ತಿ ಜೀವನ ಸುಖಮಯವಾಗಿ ಸಾಗಲಿ ಎಂದು ಶುಭ ಹಾರೈಸಿದರು.

ಸವಣೂರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಜಯಂತ್ ವೈ ಯವರು ಮಾತನಾಡಿ ಇಲಾಖೆಯ ಆದೇಶಗಳನ್ನು ಚಾಚೂ ತಪ್ಪದೆ ಪಾಲನೆ ಮಾಡಿ ಇಲಾಖೆಗೆ ಮತ್ತು ಶಾಲೆಗೆ ಒಳ್ಳೆಯ ಹೆಸರು ತಂದಿರುವ ಜಗನ್ನಾಥ ಎಸ್ ರವರು ಇತರ ಶಿಕ್ಷಕರಿಗೆ ಮಾದರಿ. ಅವರ ನಿವೃತ್ತಿ ಜೀವನದಲ್ಲಿ ಭಗವಂತನ ಅನುಗ್ರಹವಿರಲಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಬೆಳಂದೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ತೇಜಾಕ್ಷಿ ಕೊಡಂಗೆ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ವೇದಾವತಿ ಅಂಗನವಾಡಿ ಕಾರ್ಯಕರ್ತೆ ಸುಶ್ಮಿತಾ ಉಪಸಿತರಿದ್ದರು. ಜಗನ್ನಾಥ ಎಸ್ ರವರು ಮಾತನಾಡಿ ಶಿಕ್ಷಕ ವೃತ್ತಿ ನನಗೆ ನೆಮ್ಮದಿಯನ್ನು ತಂದು ಕೊಟ್ಟಿದೆ. ಶಾಲೆಯಲ್ಲಿ ಎಲ್ಲರೂ ನನಗೆ ಸಹಕಾರ ನೀಡಿದ್ದಾರೆ ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಹಿರಿಯ ವಿದ್ಯಾರ್ಥಿಗಳಾದ ಸುಹೈಲ್ ಮತ್ತು ಆಯಿಷತ್ ಲಬಿಬಾರವರು ಮತ್ತು ಶಾಲಾ ಮಕ್ಕಳ ಪರವಾಗಿ ಮೊಹಮ್ಮದ್ ಝಈಮ್ ಮಹಮ್ಮದ್ ನೌಫಾಲ್ ಮತ್ತು ಆಫೀಫಾ ಮಾತನಾಡಿದರು. ಜಮಾಲುದ್ದೀನ್, ಯಾಕೂಬ್, ಪ್ರಕಾಶ ಪಟ್ಟೆ, ಸವಿತಾ, ಶಮೀಮಾ, ಆಶಾ ಕಾರ್ಯಕರ್ತೆ ಯಶೋಧ ಅತಿಥಿಗಳಿಗೆ ಪುಷ್ಪಗುಚ್ಛ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಜಗನ್ನಾಥ ಎಸ್ ರವರು ಶಾಲೆಗೆ ಧನ ಸಹಾಯದ ಚೆಕ್ಕನ್ನು ಹಸ್ತಾಂತರಿಸಿದರು.


ಗೌರವಾರ್ಪಣೆ:
ಶಾಲೆಗೆ ಗ್ರಾಮ ಪಂಚಾಯತಿಯಿಂದ ಅನುದಾನ ಒದಗಿಸಿದ ತೇಜಾಕ್ಷಿ ಕೊಡಂಗೆ ಮತ್ತು ಶಾಲೆಯಲ್ಲಿ ಜ್ಞಾನದೀಪ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಕಾಮಿಲಾ ಕೆ ಎಲ್ ಅಡುಗೆ ಸಿಬ್ಬಂದಿ ಚಂದ್ರಕಲಾ ಮತ್ತು ಅತಿಥಿ ಶಿಕ್ಷಕಿ ಶರ್ಮಿಳಾ ಇವರಿಗೆ ಗೌರವಾರ್ಪಣೆ ನಡೆಯಿತು. ಶಾಲಾ ಮುಖ್ಯಗುರು ಯಶೋದಾ ಎ ಸ್ವಾಗತಿಸಿ, ಸಹ ಶಿಕ್ಷಕಿ ಶರ್ಮಿಳಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here