






ಪುತ್ತೂರು: ಪುತ್ತೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿ ರಾಜ್ಯಾದ್ಯಂತ 20 ಶಾಖೆಗಳೊಂದಿಗೆ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 21ನೇ ಶಾಖೆಯು ಜೂ.29 ರಂದು ಪ್ರಥಮ ಮಹಡಿ ಅಶ್ವಿನಿ ಕಾಂಪ್ಲೆಕ್ಸ್, ಕಲ್ಲೇಗ, ನೆಹರು ನಗರ ಪುತ್ತೂರಿನಲ್ಲಿ ಶುಭಾರಂಭಗೊಳ್ಳಲಿದೆ.


ನೂತನ ಶಾಖೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕರವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ನ ಶಾಸಕ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು, ಶ್ರೀ ಕಲ್ಲೇಗ ಕಲ್ಕುಡ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ಜೈನ್, ಕಲ್ಲೇಗ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ನ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ಪುತ್ತೂರು ನಗರ ಸಭೆಯ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಅಶ್ವಿನಿ ಕಾಂಪ್ಲೆಕ್ಸ್ ಕಲ್ಲೇಗ ಇದರ ಮಾಲಕ ಕೆ ರಾಜಾರಾಮ್ ಪ್ರಭು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿಯ ಅಧ್ಯಕ್ಷ ಸಹಕಾರ ರತ್ನ ಎಸ್ ಆರ್ ಸತೀಶ್ಚಂದ್ರ ಇವರು ವಹಿಸಲಿದ್ದಾರೆ.



2001ರಲ್ಲಿ ಕಾರ್ಯಾರಂಭಗೊಂಡ ಸಹಕಾರಿಯು ಪ್ರಸಕ್ತ ರಜತ ಮಹೋತ್ಸವ ವರ್ಷಾಚರಣೆ ಮಾಡುತ್ತಿದೆ. ಸಹಕಾರಿಯು ಆಕರ್ಷಕ ಬಡ್ಡಿ ದರದಲ್ಲಿ ಠೇವಣಿ ಸ್ವೀಕಾರ, ವಿವಿಧ ಉದ್ದೇಶದ ಸಾಲಗಳು, ಜೀವವಿಮೆ ಹಾಗೂ ಸಾಮಾನ್ಯ ವಿಮೆಗಳು, ಪಾನ್ ಕಾರ್ಡ್, ಸೇಫ್ಲಾಕರ್ ಸೌಲಭ್ಯವನ್ನು ಸದಸ್ಯರಿಗೆ ನೀಡುತ್ತಿದೆ. ಸಹಕಾರಿಯು ಆರಂಭದಿಂದಲೂ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದ್ದು ದಿನಾಂಕ 15-06-2026 ರಂತೆ 52913 ಸದಸ್ಯರನ್ನು ಹೊಂದಿದ್ದು ರೂ.422ಕೋಟಿ ಠೇವಣಾತಿಯನ್ನು ಸಂಗ್ರಹಿಸಿ ರೂ.400 ಕೋಟಿ ಸಾಲವಿತರಿಸಿ ರೂ.822 ಕೋಟಿ ವ್ಯವಹಾರವನ್ನು ದಾಖಲಿಸಿದೆ. 2026 ಮಾರ್ಚ್ ವರ್ಷಾಂತ್ಯಕ್ಕೆ ರೂ.7.27 ಕೋಟಿ ನಿವ್ವಳ ಲಾಭ ಗಳಿಸಿರುತ್ತದೆ. 2025-26ನೇ ಸಾಲಿನಲ್ಲಿ ಶೇ. 13% ಡಿವಿಡೆಂಡ್ ವಿತರಿಸಲಾಗಿದೆ. ನಗುಮೊಗದ ತ್ವರಿತ ಹಾಗೂ ಗ್ರಾಹಕ ಸ್ನೇಹೀ ಸೇವೆಗೆ ಹೆಸರಾದ ಸಹಕಾರಿಯಲ್ಲಿ ಪ್ರಸ್ತುತ 116 ಜನ ಸಿಬ್ಬಂದಿಗಳು ಸದಸ್ಯರ ಸೇವೆಯಲ್ಲಿ ನಿರತರಾಗಿದ್ದಾರೆ.
ಸಹಕಾರಿಯು ಕೇವಲ ಆರ್ಥಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾಮಾಜಿಕ ಸೇವಾ ಕಾರ್ಯದ ಭಾಗವಾಗಿ 2015ರಲ್ಲಿ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ನ್ನು ಸ್ಥಾಪಿಸಿ ಇದರ ಮೂಲಕ ಆಶಕ್ತರಿಗೆ ಆರ್ಥಿಕ ನೆರವು, ವಿವಿಧ ಪುಸ್ತಕಗಳ ಬಿಡುಗಡೆ, ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು, ಉಚಿತ ಆರೋಗ್ಯ ತಪಾಸಣಾ ಶಿಬಿರ, ಬಟ್ಟೆಯ ಕೈ ಚೀಲ ವಿತರಣೆ, ತರಕಾರಿ ಬೀಜ ವಿತರಣೆ, ಆರೋಗ್ಯ ಮಾಹಿತಿ ಶಿಬಿರ, ಶಾಲಾಕಾಲೇಜುಗಳಿಗೆ ವಿವಿಧ ಕೊಡುಗೆಗಳು, ಮಾಹಿತಿ ಕಾರ್ಯಾಗಾರಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನುನಡೆಸಿಕೊಂಡು ಬರುತ್ತಿದ್ದು ಈ ವರೆಗೆ ಸುಮಾರು 2 ಕೋಟಿಗೂ ಮಿಕ್ಕಿ ವೆಚ್ಚದ ಸೇವಾ ಕಾರ್ಯಗಳನ್ನು ನಡೆಸಿರುತ್ತದೆ. ಸಹಕಾರಿಯ ಇನ್ನೆರಡು ಶಾಖೆಗಳು ಉಳ್ಳಾಲ ಮತ್ತು ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯಲ್ಲಿ ಶೀಘ್ರದಲ್ಲಿ ಆರಂಭಗೊಳ್ಳಲಿರುವುದು. ಸದಸ್ಯರು ನೂತನ ಶಾಖೆಗಳಲ್ಲಿ ತಮ್ಮ ವ್ಯವಹಾರವನ್ನು ನಡೆಸಿ ಶಾಖೆಯ ಪ್ರಗತಿಗೆ ಕೈಜೋಡಿಸುವಂತೆ ಸಂಸ್ಥೆಯ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.










