ಅಗ್ನಿವೀರ್‌ಗೆ ಆಯ್ಕೆಯಾದ ಅಬಿತ್ ಮೊಟ್ಟೆತ್ತಡ್ಕ, ವಿನಿತ್ ಕುಮಾರ್ ರೈಗೆ ಮಾಜಿ ಸೈನಿಕ ಸಂಘದಿಂದ ಸನ್ಮಾನ

0

ಪುತ್ತೂರು: ಅಗ್ನಿವೀರ್ ಯೋಜನೆಯಲ್ಲಿಭಾರತೀಯ ಸೇನೆಗೆ ನೇಮಕಗೊಂಡಿರುವ ಅಬಿತ್ ಮೊಟ್ಟೆತ್ತಡ್ಕ ಮತ್ತು ವಿನಿತ್ ಕುಮಾರ್ ರೈ ಪಾಣಾಜೆ ಅವರನ್ನು ಜೂ.25ರಂದು ಪುತ್ತೂರು ಮಾಜಿ ಸೈನಿಕರ ಸಂಘದಿಂದ ಸನ್ಮಾನಿಸಿದರು.

ಭಾರತೀಯ ವಾಯು ಸೇನೆಯ ಅಧಿಕಾರಿಯಾಗಿ ಭಡ್ತಿಯಾಗಿ ಆರು ತಿಂಗಳು ತರಬೇತಿ ಮುಗಿಸಿ ಹುಟ್ಟೂರಿಗೆ ಆಗಮಿಸಿರುವ ಆಶಿಶ್ ಶಂಕರ್ ಕೆದಿಲ ಅವರನ್ನು ಗೌರವಿಸಲಾಯಿತು.

ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಸಂತ ಕುಮಾರ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಮಾಜಿ ಸೈನಿಕ ಸಂಘದ ಪದಾಧಿಕಾರಿಗಳಾದ ಮಾಧವ ಬಿ.ಕೆ., ಎಂಕೆಎನ್ ಭಟ್, ಜೊ.ಡಿಸೋಜ, ಕೆ.ಸುಂದರ ಗೌಡ ನಡುಬೈಲು, ರಮಾನಾಥ ರೈ, ನಾಗಪ್ಪ ಗೌಡ, ಚಂಚಲಾಕ್ಷ, ದಯಾನಂದ ಕೆ.ಎಸ್., ಸುಂದರ ಬಿ., ಲಿಂಗಪ್ಪ ಗೌಡ, ಚಂದ್ರಶೇಖರ, ವಿಶ್ವನಾಥ, ರವಿಚಂದ್ರ ಬಿ.ಎಸ್., ಜಯರಾಮ, ಚಂದ್ರಶೇಖರ ದೇಲಂಪಾಡಿ, ಅಶೋಕ್ ನೆಲಪ್ಪಾಲು ಹಾಗೂ ಶ್ರೀಮತಿ ಜಯಂತಿ ಶ್ರೀಧರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here