ಬನ್ನೂರು ಜೈನರುಗುರಿ ದಯಾನಂದ ಹೆಗ್ಡೆ ನಿಧನ

0

ಪುತ್ತೂರು: ಬನ್ನೂರು ಜೈನರುಗುರಿ ರುಕ್ಮಿಣಿ ಗೋಪಾಲಕೃಷ್ಣ ಹೆಗ್ಡೆಯವರ ಪುತ್ರ ದಯಾನಂದ ಹೆಗ್ಡೆ (51ವ)ರವರು ಜೂ. 25ರಂದು ನಿಧನರಾದರು.

ದಯಾನಂದ ಹೆಗ್ಡೆಯವರು ಅನಾರೋಗ್ಯದಿಂದ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾದರು. ಸನಾತನ ಸಂಸ್ಥೆಯಲ್ಲಿ ಧರ್ಮ ಸೇವಕರಾಗಿದ್ದ ಅವರು ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸನಾತನ ಧರ್ಮದ ಪುಸ್ತಕ ಪರಿಕರಗಳ ವಿತರಣೆಯಲ್ಲಿ ಸಕ್ರಿಯರಾಗಿದ್ದರು. ಮೃತರು ತಾಯಿ, ಪತ್ನಿ, ಪುತ್ರಿ ಮತ್ತು ಸಹೋದರನನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here