







ಪುತ್ತೂರು: ಪಿ.ಎಂ.ಶ್ರೀ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಿಂಜೆಯ ಹಿರಿಯ ವಿದ್ಯಾರ್ಥಿ ಅಭಿತ್ ಅವರು ಅಗ್ನಿಪಥ್ ನೇಮಕಾತಿಯಲ್ಲಿ ಭಾರತೀಯ ಭೂಸೇನೆಗೆ ಆಯ್ಕೆಯಾಗಿದ್ದು, ಅವರಿಗೆ ಜೂ.24ರಂದು ಶಾಲೆಯ ವತಿಯಿಂದ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.


ಎಸ್‌ಡಿಎಂಸಿ ಅಧ್ಯಕ್ಷ ಮೋಹನ್ ಕೆ. ಅವರು ಸ್ಮರಣಿಕೆ ನೀಡಿ ಅಭಿತ್ ಅವರನ್ನು ಸನ್ಮಾನಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಕಸ್ತೂರಿ ಅವರು ಅಭಿತ್ ಕುರಿತು ಸ್ವರಚಿತ ಕವನ ವಾಚಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಜಿಪಿಟಿ ಶಿಕ್ಷಕಿ ಅರ್ಚನಾ ಬಿ.ಆರ್. ಅವರು ಅಭಿತ್ ಅವರ ಶಾಲಾ ಜೀವನದ ನೆನಪುಗಳನ್ನು ಹಂಚಿಕೊಂಡರು. ಶಾಲಾ ಮುಖ್ಯ ಶಿಕ್ಷಕ ಸಂತೋಷ್ ಎಸ್. ಶುಭ ಹಾರೈಸಿದರು.



ಅಭಿತ್ ಅವರು ಮಾತನಾಡಿ, ಭೂಸೇನೆಯ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿ, ಮುಂದಿನ ವಿದ್ಯಾರ್ಥಿಗಳು ದೇಶ ಸೇವೆಗೆ ಸಜ್ಜಾಗುವಂತೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ಅಧ್ಯಕ್ಷೀಯ ಭಾಷಣ ಮಾಡಿದ ಮೋಹನ್ ಕೆ., ಅಭಿತ್ ಅವರ ಭವಿಷ್ಯ ಉಜ್ವಲವಾಗಲಿ, ದೇವರ ಆಶೀರ್ವಾದ ಸದಾ ಇರಲಿ ಎಂದು ಶುಭ ಹಾರೈಸಿದರು.
ಟಿಜಿಟಿ ಶಿಕ್ಷಕಿ ಸುಮತಿ ಎ.ಆರ್. ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಸುಧಾ ಕೆ. ಸ್ವಾಗತಿಸಿದರು. ಜಿಪಿಟಿ ಶಿಕ್ಷಕಿ ಅರ್ಚನಾ ಬಿ.ಆರ್. ವಂದಿಸಿದರು.










