









ಪುತ್ತೂರು:ಮೈಸೂರಿನ ಮೈಸೂರು ಯೂನಿಯನ್ ನಲ್ಲಿ ನಡೆದ ರೋಟರಿ ಜಿಲ್ಲಾ ಕಾರ್ಯಕ್ರಮದಲ್ಲಿ ಪುತ್ತೂರಿನ ರೋಟರಿ ಕ್ಲಬ್ ಬೀರಮಲೆ ಹಿಲ್ಸ್ ಗೆ ಡೈಮಂಡ್ ಕೆಟಗರಿ ಅವಾರ್ಡ್ ಅತಿಗಳಿಂದ ಪ್ರದಾನ ಮಾಡಲಾಯಿತು.



ಕ್ಲಬ್ ನ ಸಾಮಾಜಿಕ ಹಾಗೂ ಶೈಕ್ಷಣಿಕ ಕೊಡುಗೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದ್ದು ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ, ಪಿಡಿಜಿ ವಿಕ್ರಂ ದತ್ತರವರು ಪ್ರಶಸ್ತಿ ಪ್ರದಾನ ಮಾಡಿದರು. ಕ್ಲಬ್ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕ್ಲಬ್ ಗವರ್ನರ್ ಪ್ರತಿನಿಧಿ ಶರತ್ ಕುಮಾರ್ ರೈ, ಅಸಿಸ್ಟೆಂಟ್ ಗವರ್ನರ್ ಪ್ರಮೋದ್ ಕುಮಾರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.










