






ಪುತ್ತೂರು: ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಬಿರಮಲೆ ಹಿಲ್ಸ್ ಪುತ್ತೂರು ಇದರ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಡಾ|ಗೋಪಾಲಕೃಷ್ಣ ಎಂ, ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ ರೈ, ಕೋಶಾಧಿಕಾರಿಯಾಗಿ ರುಕ್ಮಯ ಕುಲಾಲ್ ಆಯ್ಕೆಯಾಗಿದ್ದಾರೆ.
ಉಳಿದಂತೆ ನಿಕಟಪೂರ್ವ ಅಧ್ಯಕ್ಷರಾಗಿ ಸಾಜ ರಾಧಾಕೃಷ್ಣ ಆಳ್ವ, ಉಪಾಧ್ಯಕ್ಷರಾಗಿ ಜಯರಾಜ್ ರೈ, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ದಾಮೋದರ್ ಪಾಟಾಳಿ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಕೃಷ್ಣಪ್ರಸಾದ್ ಶೆಟ್ಟಿ, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಪುರುಷೋತ್ತಮ ಪ್ರಭು, ಯೂತ್ ಸರ್ವಿಸ್ ನಿರ್ದೇಶಕರಾಗಿ ನಿತಿನ್ ಪಕ್ಕಳ, ಕ್ಲಬ್ ಎಕ್ಸಿಕ್ಯೂಟಿವ್ ಕಾರ್ಯದರ್ಶಿಯಾಗಿ ವಂದನಾ ಶರತ್, ಸಾರ್ಜಂಟ್ ಎಟ್ ಆಮ್ಸ್೯ ಅನಿಲ್ ಡಿ’ಸೋಜ, ಕ್ಲಬ್ ಮೆಂಬರ್ ಶಿಪ್ ನಿರ್ದೇಶಕರಾಗಿ ಕೃಷ್ಣಪ್ರಸಾದ್ ಆಳ್ವ, ಕ್ಲಬ್ ಪ್ರಾಜೆಕ್ಟ್ ಚೇರ್ಮನ್ ನಿತೀಶ್ ಶಾಂತಿವನ, ಪಲ್ಸ್ ಪೋಲಿಯೋ ಚೇರ್ಮನ್ ಸಂದೀಪ್ ರೈ ಚಿಲ್ಮೆತ್ತಾರ್, ಟಿ ಆರ್ ಎಫ್ ಚೇರ್ಮನ್ ಅಭಿಷೇಕ್ ರೈ, ಕ್ಲಬ್ ಲರ್ನಿಂಗ್ ಫೆಸಿಲಿಟೆಟರ್ ಶರತ್ ಬಲ್ನಾಡು, ಕ್ಲಬ್ ಪಬ್ಲಿಕ್ ಇಮೇಜ್ ಚೇರ್ಮನ್ ಮೋಹನ ಕೆ.ರವರು ಆಯ್ಕೆಯಾಗಿದ್ದಾರೆ.


ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಗೋಪಾಲಕೃಷ್ಣ ಎಂ.ರವರು ಚಿಕ್ಕಮುಡ್ನೂರು ಗ್ರಾಮದ ಮೂಡಾಯೂರು ಮಹಾಲಿಂಗ ಪಾಟಾಳಿ ಹಾಗೂ ಶ್ರೀಮತಿ ಯಮುನಾ ದಂಪತಿ ಪುತ್ರರಾಗಿದ್ದು, ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ಆರಂಭದಲ್ಲಿ ವಿವಿಧ ಸಣ್ಣ ಸಣ್ಣ ಉದ್ಯೋಗದಲ್ಲಿ ತೊಡಗಿಸಿಕೊಂಡು ಬಳಿಕ ಮಾಣಿಯಲ್ಲಿ ಚೈತನ್ಯ ಟ್ಯುಟೋರಿಯಲ್ಸ್, ಬೊಳುವಾರಿನಲ್ಲಿ ಈಶ ಟ್ಯುಟೋರಿಯಲ್ಸ್, ವಿಟ್ಲದಲ್ಲಿ ಟ್ಯುಟೋರಿಯಲ್ಸ್ ಹೀಗೆ ಐದು ಕಡೆ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಈಗ ಪುತ್ತೂರು ನೆಲ್ಲಿಕಟ್ಟೆಯಲ್ಲಿ ಸ್ವಂತ ಕಟ್ಟಡದಲ್ಲಿ ಈಶ ವಿದ್ಯಾಲಯ ಹೆಸರಿನಲ್ಲಿ ಖಾಸಗಿಯಾಗಿ ಎಸೆಸ್ಸೆಲ್ಸಿ. ಪಿಯುಸಿ, ನರ್ಸರಿ ಟೀಚರ‍್ಸ್ ತರಬೇತಿ, ಕಂಪ್ಯೂಟರ್, ಟೈಲರಿಂಗ್ ಇತ್ಯಾದಿ ಕೋರ್ಸ್‌ಗಳನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿರುತ್ತಾರೆ. ಡಾ.ಗೋಪಾಲಕೃಷ್ಣರವರು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಲವು ಸಂಘಟನೆಗಳಲ್ಲಿ ತೊಡಗಿಸಿಗೊಂಡಿರುತ್ತಾರೆ.



ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಸಂತೋಷ್ ಕುಮಾರ್ ರೈ ರವರು ಕಾಸರಗೋಡು ಜಿಲ್ಲೆಯ ಕುಂಬ್ಡಾಜೆ ಪಂಚಾಯತ್ ನ ಸುಂದರ ರೈ ಗಾಡಿಗುಡ್ಡೆ ಹಾಗೂ ಶ್ರೀಮತಿ ಬೇಬಿ ರೈರವರ ಪುತ್ರನಾಗಿ ಜನಿಸಿದ್ದು ಆರ್ಥಶಾಸ್ತ್ರದಲ್ಲಿ ಪದವೀಧರರಾಗಿರುತ್ತಾರೆ. ಸಂತೋಷ್ ಕುಮಾರ್ ರವರು ಕುಂಬ್ಡಾಜೆ ಪಂಚಾಯತ್ ಬಂಟರ ಸಂಘದ ಅಧ್ಯಕ್ಷರಾಗಿ, ಶ್ರೀ ಗಣೇಶೋತ್ಸವ ಸಮಿತಿಯ ಸ್ಥಾಪಕರಾಗಿ, ಅಧ್ಯಕ್ಷರಾಗಿ, ಕರ್ನಾಟಕ ಜಾನಪದ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾಗಿ, ವಿವೇಕಾನಂದ ಶಿಶುಮಂದಿರದ ಶ್ರೀಕೃಷ್ಣ ಜನ್ಮಾಷ್ಟಮಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಅನುಭವ, ಆರು ವರ್ಷ ಕಾಸರಗೋಡು ಜಿಲ್ಲೆಯಲ್ಲಿ ಯಕ್ಷಗಾನ ಸೇವೆ ನೀಡಿರುತ್ತಾರೆ. ಇವರ ಪ್ರಾಯೋಜಕತ್ವದಲ್ಲಿ ಕಾಸರಗೋಡು ಕುಂಬ್ಡಾಜೆ ಪಂಚಾಯತ್ ನಲ್ಲಿನ ಓರ್ವ ಬಡ ಕುಟುಂಬಕ್ಕೆ ಸೂರು ನಿರ್ಮಾಣ ಮಾಡುತ್ತಿದ್ದು ಪ್ರಸ್ತುತ ಇವರು ಪ್ರಗತಿ ಕಾಲೇಜು ಆಫ್ ನರ್ಸಿಂಗ್ ಸೈನ್ಸ್ ನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾಗಿರುವ ರುಕ್ಮಯ ಕುಲಾಲ್‌ರವರು ಬಲ್ನಾಡು ಉಜ್ರುಪಾದೆ ದಿ.ವಾಸು ಮೂಲ್ಯ ಹಾಗೂ ಸುಂದರಿ ಅಮ್ಮರವರ ಪುತ್ರ. ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಪಡೆದು ಪ್ರಸ್ತುತ ಸಾಯಿತೀರ್ಥ ಚಿಟ್ ಫಂಡ್‌ನಲ್ಲಿ ವ್ಯವಸ್ಥಾಪಕರಾಗಿ ಸೇವೆ ನಿರ್ವಹಿಸುತ್ತಿದ್ದಾರೆ ಜೊತೆಗೆ ಬಲ್ನಾಡು ಶ್ರೀ ಉಳ್ಳಾಲ್ತಿ ದಂಡನಾಯಕ ಉತ್ಸವ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕಳೆದ ವರ್ಷ ರೋಟರಿ ಬಿರುಮಲೆ ಹಿಲ್ಸ್‌ನಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಜೂ.27: ಪದ ಪ್ರದಾನ..
ಜೂ.27 ರಂದು ಸಂಜೆ ರೋಟರಿ ಮನೀಷಾ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ ನಡೆಯಲಿದೆ. ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಪ್ರೊ|ಝೇವಿಯರ್ ಡಿ’ಸೋಜರವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅನಿಲ್ ಕುಮಾರ್ ಬೂಮರೆಡ್ಡಿ, ಗೌರವ ಅತಿಥಿಗಳಾಗಿ ರೋಟರಿ ವಲಯ ಐದರ ವಲಯ ಸೇನಾನಿ ಪಶುಪತಿ ಶರ್ಮ, ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ರವಿಕುಮಾರ್ ರೈರವರು ಉಪಸ್ಥಿತಲಿದ್ದಾರೆ.










