ಕಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸ್ಕ್ಯಾನರ್ ಅನಾವರಣ

0

ಪುತ್ತೂರು: ಡಿಜಿಟಲೀಕರಣ ಗ್ರಾಮೀಣ ಸಹಕಾರ ಸಂಘದಲ್ಲಿಯೂ ಬಹಳಷ್ಟು ಮಹತ್ವ ಪಡೆಯುತ್ತಿದೆ. ಗ್ರಾಮೀಣ ಹೈನುಗಾರರು ಮತ್ತು ಕೃಷಿಕರಿಗೂ ಡಿಜಿಟಲೀಕರಣದಲ್ಲಿ ತೊಡಗಿಸಿಕೊಳ್ಳಬೇಕು, ಸಂಘದ ಸದಸ್ಯರಿಗೆ ಹಾಗೂ ಹೈನುಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಟ್ಟಂಪಾಡಿ ಗ್ರಾಮದ ಕಕ್ಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ನೂತನವಾಗಿ ಅಳವಡಿಸಲಾದ ದ.ಕ ಜಿಲ್ಲಾ ಕೇದ್ರ ಸಹಕಾರಿ ಬ್ಯಾಂಕ್‌ನ ಸ್ಕ್ಯಾನರ್ ಜೂ.26ರಂದು ಉದ್ಘಾಟನೆಗೊಂಡಿತು.


ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಸ್ಕ್ಯಾನರ್‌ನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಕೃಷಿಕರಿಗೆ ಸಹಕಾರ ಸಂಘಗಳಲ್ಲಿ ಡಿಜಿಟಲಿಕರಣ ವ್ಯವಸ್ಥೆ ಜ್ಯಾರಿಗೋಳಿಸುತ್ತಿದೆ. ಈ ಮೂಲಕ ಸಂಘವು ತನ್ನ ಸದಸ್ಯರಿಗೆ ಡಿಜಿಟಲ್ ಹಣಕಾಸು ವ್ಯವಹಾರದ ಸೌಲಭ್ಯ ಕಲ್ಪಿಸಿಕೊಟ್ಟಿದೆ. ಇದರಿಂದ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸುಗಮ ವ್ಯವಹಾರಗಳಿಗೆ ಅನುಕೂಲವಾಗಲಿದೆ. ಒಂದು ವರ್ಷದ ಹಿಂದೆ ಪ್ರಾರಂಭವಾದ ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘವು ಅಭಿವೃದ್ಧಿಯತ್ತ ಸಾಗುತ್ತಿರುವುದು ಶ್ಲಾಘನೀಯ ಎಂದು ಹೇಳಿದರು


ಸಂಘದ ಅಧ್ಯಕ್ಷೆ ಶ್ರೀದೇವಿ ರೈ, ಉಪಾಧ್ಯಕ್ಷೆ ರಜಿತಾ ಎಲ್ ಗೌಡ, ಕಾರ್ಯದರ್ಶಿ ಶಾರದಾ ಕೆ. ನಿರ್ದೇಶಕರು, ಸದಸ್ಯರು ಹಾಗೂ ಹೈನುಗಾರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here