ಮಹಾಲಿಂಗೇಶ್ವರ ದೇವಸ್ಥಾನದ ಹೋರಾಂಗಣದ ಹಳೆ ಅಯ್ಯಪ್ಪ  ಮಂದಿರ ತೆರವಿಗೆ ಮುಹೂರ್ತ 

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ದೇವಳದ ಬಳಿಯ ಅಯ್ಯಪ್ಪ ವಿಗ್ರಹ ಬಾಲಾಲಯ ಪ್ರತಿಷ್ಠೆಯ ಬಳಿಕ ಇದೀಗ ಹಳೆಯ ಅಯ್ಯಪ್ಪ ಮಂದಿರವನ್ನು ತೆರವು ಕಾರ್ಯಕ್ಕೆ ಮುಹೂರ್ತ ಜೂ.28 ರಂದು ಬೆಳಗ್ಗೆ ನಡೆಯಿತು.

ದೇವಳದಲ್ಲಿ ಬೆಳಗ್ಗಿನ ಪೂಜೆಯ ಬಳಿಕ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ತುಪ್ಪ ದೀಪ ಬೆಳಗಿಸಿ ಮುಹೂರ್ತಕ್ಕೆ ಪ್ರಾರ್ಥನೆ ಮಾಡಿ ಬಳಿಕ ಹಳೆ ಅಯ್ಯಪ್ಪ ಮಂದಿರದ ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು. ಜೆಸಿಬಿ ಬ್ರೇಕರ್ ಮೂಲಕ ತೆರವು ಕಾರ್ಯ ಆರಂಭಗೊಂಡಿದೆ‌. ಇ ಸಂದರ್ಭ ನಡುಬೈಲುಗುತ್ತು ಗೋಪಾಲ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here