






ಪೆರ್ಲಂಪಾಡಿ: ಷಣ್ಮುಖದೇವ ಪ್ರೌಢಶಾಲೆ, ಪೆರ್ಲಂಪಾಡಿಯಲ್ಲಿ ಶಾಲಾ ಸಂಚಾಲಕ ಶಿವರಾಮ ಭಟ್ ಬೀರ್ಣಕಜೆ ಅವರ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ ನಡೆಯಿತು.ಡಿವೈನ್ ಪಾರ್ಕ್ ಟ್ರಸ್ಟ್ (ರಿ.) ಸಾಲಿಗ್ರಾಮ ಇದರ ಅಂಗ ಸಂಸ್ಥೆಯಾದ ವಿವೇಕ ಜಾಗ್ರತ ಬಳಗ ಪುತ್ತೂರು ವತಿಯಿಂದ ಪತ್ರಕರ್ತ, ಅಂಕಣಕಾರ, ರಾಜ್ಯ ಮಟ್ಟದ ವಿದ್ಯಾರ್ಥಿ ತರಬೇತುದಾರ ಪ್ರಕಾಶ್ ಕುಮಾರ್ ಶೆಟ್ಟಿ ಬೆಳ್ಳಾರೆ ಅವರು ‘ವಿದ್ಯಾರ್ಥಿ ದೀಪ’ ಕಾರ್ಯಕ್ರಮ ನಡೆಸಿಕೊಟ್ಟರು.




ಬೆಳಗ್ಗೆ 9.30ಕ್ಕೆ ವಿದ್ಯಾರ್ಥಿಗಳ ಸಾಮೂಹಿಕ ಸರಸ್ವತಿ ವಂದನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶಿಕ್ಷಣದ ಮುಖ್ಯ ಉದ್ದೇಶ ಯೋಗ್ಯ ವ್ಯಕ್ತಿ ನಿರ್ಮಾಣ. ಇದಕ್ಕೆ ಅಧ್ಯಯನದ ಮೂಲಕ ಉತ್ತಮ ಅಂಕ ಹಾಗೂ ಉತ್ತಮ ಗುಣ ನಡತೆ ಎರಡೂ ಮುಖ್ಯ” ಎಂದು ಪ್ರಕಾಶ್ ಕುಮಾರ್ ಶೆಟ್ಟಿ ಹೇಳಿದರು. ಕಲಿಕೆಯಲ್ಲಿ ಆಸಕ್ತಿ ವೃದ್ಧಿಸಲು, ಸ್ಮರಣ ಶಕ್ತಿ, ಏಕಾಗ್ರತೆ, ಆತ್ಮವಿಶ್ವಾಸ ಹೆಚ್ಚಿಸಲು, ಪರೀಕ್ಷಾ ತಯಾರಿ ಹಾಗೂ ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿಯಾಗಲು ಬೇಕಾದ ಪ್ರಮುಖ ವಿಚಾರಗಳನ್ನು ಸರಳವಾಗಿ ತಿಳಿಸಿದರು. ಕಾರ್ಯಕ್ರಮದ ನಡುನಡುವೆ ವಿದ್ಯಾರ್ಥಿಗಳನ್ನು ಎಚ್ಚರಿಸುವ ಹಾಸ್ಯ, ಪ್ರಶ್ನೆ ಕೇಳಿ ಉತ್ತರ ನೀಡಿದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುವ ಮೂಲಕ ಕಾರ್ಯಕ್ರಮ ಮೆರುಗು ಪಡೆಯಿತು.ವಿವೇಕ ಜಾಗ್ರತ ಬಳಗ ಪುತ್ತೂರು ಕಾರ್ಯಕರ್ತ ಮೋಕ್ಷಿತ್ ಬಾಯಂಬಾಡಿ ಉಪಸ್ಥಿತರಿದ್ದರು. ಶಾಲೆಯ ಉಪಾಧ್ಯಕ್ಷ ಗಣಪತಿ ಭಟ್ ಎಕ್ಕಡ್ಕ, ನಿರ್ದೇಶಕ ಮುರಳೀಕೃಷ್ಣ ಸಿದ್ಧಮೂಲೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಲಕ್ಷ್ಮಣ ಗೌಡ ದರ್ಖಾಸ್ತು, ಗುರು ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುಖ್ಯಗುರು ಕೃಷ್ಣವೇಣಿ ಸ್ವಾಗತಿಸಿ ವಂದಿಸಿದರು.












