







ಪುತ್ತೂರು : ರೋಟರಿ ಕ್ಲಬ್ ಪುತ್ತೂರು ಎಲೈಟ್ ಇದರ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ರೆಡ್ ಗೈಯ್ಸ್ ಕ್ಲಬ್ ಪುತ್ತೂರು ಸದಸ್ಯ, ನ್ಯಾಯವಾದಿ ಮೊಹಮ್ಮದ್ ಶಾಕೀರ್ ರವರಿಗೆ ರೆಡ್ ಗೈಯ್ಸ್ ಕ್ಲಬ್ ಪುತ್ತೂರು ಸದಸ್ಯರು ಹೂಗುಚ್ಛ ನೀಡಿ ಅಭಿನಂದಿಸಿ ಶುಭ ಹಾರೈಸಿದರು.


ಜೂ.26 ರಂದು ನೆಹರುನಗರದ ಸುದಾನ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆದ ರೋಟರಿ ಕ್ಲಬ್ ಪುತ್ತೂರು ಎಲೈಟ್ ಇದರ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ರೆಡ್ ಗೈಯ್ಸ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಅಭಿನಂದನೆ ಸಲ್ಲಿಸಿರುವುದಾಗಿದೆ. ಈ ಸಂದರ್ಭದಲ್ಲಿ ರೋಟರಿ ಎಲೈಟ್ ಕ್ಲಬ್ ನೂತನ ಕಾರ್ಯದರ್ಶಿ ಸುಶಾಂತ್ ಹಾರ್ವಿನ್ ರವರಿಗೂ ಹೂಗುಚ್ಛ ನೀಡಿ ಅಭಿನಂದಿಸಲಾಯಿತು. ರೆಡ್ ಗೈಯ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮನ್ಸೂರ್ ಬೊಳ್ವಾರು, ಸದಸ್ಯರಾದ ಏಷ್ಯನ್ ವುಡ್ಸ್ ಜಬ್ಬಾರ್, ರೆಡ್ ಫ್ಲೈವುಡ್ಸ್ ನ ಜುನೈದ್, ರೆಡ್ ಪೈಂಟ್ಸ್ ನ ನಝೀರ್, ಫರಾಜ್, ಮಿತ್ತಲ್, ರಫೀಕ್, ಶಮೀರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.













