ಬಲ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂತ್ರಿಮಂಡಲ ರಚನೆ

0

ಕಡಬ: ಬಲ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿಮಂಡಲ ರಚನಾ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಜವಾಬ್ದಾರಿಯುತ ಮನೋಭಾವ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಮಂತ್ರಿಮಂಡಲವನ್ನು ರಚಿಸಲಾಯಿತು.

ಶಾಲಾ ನಾಯಕಿಯಾಗಿ 7ನೇ ತರಗತಿಯ ಸಂಚಿತ ಎಸ್.ಪಿ. ಹಾಗೂ ಉಪನಾಯಕನಾಗಿ 7ನೇ ತರಗತಿಯ ಪಿ.ವಿ. ಧನ್ವಿತ್ ಆಯ್ಕೆಯಾದರು. ಶಿಕ್ಷಣ ಮಂತ್ರಿಗಳಾಗಿ ರಕ್ಷಿತ್ ಕೆ. (7ನೇ) ಹಾಗೂ ಅಲಿನಾ ಮರಿಯ (5ನೇ), ಸ್ವಚ್ಛತಾ ಮಂತ್ರಿಯಾಗಿ ಅದ್ವಿಕ್ (5ನೇ), ಸಹಕಾರ ಮಂತ್ರಿಗಳಾಗಿ ಸುರೇಶ್ (6ನೇ) ಹಾಗೂ ಲಾವಣ್ಯ ಹೆಚ್.ಓ. (5ನೇ), ಪ್ರಾರ್ಥನಾ ಮಂತ್ರಿಗಳಾಗಿ ರಶ್ಮಿತಾ (6ನೇ) ಹಾಗೂ ಯಶ್ವಿತ್ ಕೆ. (5ನೇ), ನೀರಾವರಿ ಮಂತ್ರಿಗಳಾಗಿ ಧನ್ವಿತ್ (7ನೇ), ಮೋಕ್ಷಿತ್ (5ನೇ) ಹಾಗೂ ಹಾರ್ದಿಕ್ ಕೆ.ವಿ. (4ನೇ), ಕ್ರೀಡಾ ಮಂತ್ರಿಗಳಾಗಿ ರಮ್ಯ (7ನೇ) ಹಾಗೂ ಶ್ರಾವಣ್ಯ (7ನೇ), ವಾಚನಾಲಯ ಮಂತ್ರಿಗಳಾಗಿ ಅನು ದೀಪ್ತಿ ಜಿ.ಎಸ್. (7ನೇ) ಹಾಗೂ ಪುಣ್ಯಶ್ರೀ (4ನೇ), ಆರೋಗ್ಯ ಮಂತ್ರಿಗಳಾಗಿ ಪಿ.ಎಂ. ಮೌಲ್ಯ (7ನೇ) ಹಾಗೂ ಅಲಿನಾ ಮರಿಯ (5ನೇ), ಆಹಾರ ಮಂತ್ರಿಗಳಾಗಿ ಶ್ರಾವಣ್ಯ (7ನೇ) ಹಾಗೂ ಸಾತ್ವಿಕ್ (5ನೇ), ತೋಟಗಾರಿಕೆ ಮಂತ್ರಿಗಳಾಗಿ ಯಶಸ್ವಿನಿ (7ನೇ) ಹಾಗೂ ಪ್ರಣಿತ್ (5ನೇ) ಹಾಗೂ ಗೃಹ ಮಂತ್ರಿಯಾಗಿ ಪಿ.ವಿ. ಧನ್ವಿತ್ (7ನೇ) ಆಯ್ಕೆಯಾದರು.
ಚುನಾವಣಾ ಅಧಿಕಾರಿಗಳಾಗಿ ಸಹಶಿಕ್ಷಕಿ ನಜೀಮಾ, ಅತಿಥಿ ಶಿಕ್ಷಕಿ ಮೀನಾಕ್ಷಿ ಬಿ. ಹಾಗೂ ಗೌರವ ಶಿಕ್ಷಕಿ ಅಪೂರ್ಣ ಅವರು ಕರ್ತವ್ಯ ನಿರ್ವಹಿಸಿದರು.
ಶಾಲೆಯ ಪ್ರಭಾರ ಮುಖ್ಯಗುರುಗಳು ನೂತನವಾಗಿ ಆಯ್ಕೆಯಾದ ಮಂತ್ರಿಮಂಡಲದ ಸದಸ್ಯರಿಗೆ ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವಂತೆ ಹೇಳಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here