







ಪುತ್ತೂರು:ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಮೂರನೇ ಹಂತದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ರಾಜ್ಯದಾದ್ಯಂತ ಜೂ.30ರಿಂದ ಪ್ರಾರಂಭಗೊಳ್ಳಲಿದೆ.ಮತಗಟ್ಟೆ ಮಟ್ಟದ ಅಽಕಾರಿ(ಬಿಎಲ್ಓ)ಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ.


ಎಲ್ಲಾ ಅರ್ಹ ನಾಗರಿಕರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದೇ ವಿಶೇಷ ಸಮಗ್ರ ಪರಿಷ್ಕರಣೆ(ಸ್ಪೆಷಲ್ ಇಂಟೆನ್ಸಿವ್ ರಿವಿಜನ್-ಎಸ್ಐಆರ್)ಯ ಉದ್ದೇಶವಾಗಿದೆ.ವಿಶೇಷ ಸಮಗ್ರ ಪರಿಷ್ಕರಣೆಯ ಅವಽಯಲ್ಲಿ, ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿ ಹಾಗೂ ಖಚಿತಪಡಿಸಿಕೊಂಡು ಪ್ರಜಾಪ್ರಭುತ್ವದ ಭದ್ರ ಅಡಿಪಾಯವಾದ ಎಸ್ಐಆರ್ ಭಾಗವಾಗುವಂತೆ ಚುನಾವಣಾ ಆಯೋಗ ತಿಳಿಸಿದೆ.



ಮತಪಟ್ಟಿ ಪರಿಷ್ಕರಣೆಗೆ ನಿಯೋಜಿಸಲ್ಪಟ್ಟ ಬಿಎಲ್ಓಗಳು ಜೂ.30ರಿಂದ ಜು.29ರವರೆಗೆ ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸಲಿದ್ದಾರೆ.ಈ ವೇಳೆ ಬಿಎಲ್ಒಗಳು ಎಸ್ಐಆರ್ ಅರ್ಜಿಯ ಪ್ರತಿಗಳನ್ನು ನೀಡಲಿದ್ದು,ಮತದಾರರು ಅರ್ಜಿಯನ್ನು ಭರ್ತಿ ಮಾಡಿ ಸಹಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕಾಗಿದೆ.ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ಪರಿಶೀಲನೆ,ತಿದ್ದುಪಡಿ,ಹೊಸ ಮತದಾರರ ಹೆಸರು ಸೇರ್ಪಡೆ, ಮೃತಪಟ್ಟವರು ಹಾಗೂ ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಯೂ ಇದೇ ಅವಧಿಯಲ್ಲಿ ನಡೆಯಲಿದೆ.ಎರಡೆರೆಡು ಕಡೆ ಹೆಸರು ಇದ್ದಲ್ಲಿ ಒಂದು ಕಡೆ ಮಾತ್ರ ಉಳಿಸುವ ಪ್ರಕ್ರಿಯೆ ನಡೆಯುತ್ತದೆ.ಗುರುತಿನ ಚೀಟಿಯಲ್ಲಿ ಏನಾದರೂ ದೋಷಗಳು ಇದ್ದಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಲು ಕೂಡ ಅವಕಾಶವಿದೆ.
ಮನೆ ಮೆನೆಗಳಿಗೆ ಭೇಟಿ ನೀಡುವ ಅಽಕಾರಿಗಳು ನಿಗದಿತ ಫಾರಂ(ಎನ್ಯೂಮರೇಷನ್ ಫಾರಂ)ಗಳನ್ನು ಭರ್ತಿ ಮಾಡಿಸಿಕೊಂಡು ವಾಪಸ್ ಪಡೆದುಕೊಳ್ಳಲಿದ್ದಾರೆ.ಮತದಾರರ ಪಟ್ಟಿಗೆ ಹೊಸ ಹೆಸರುಗಳ ಸೇರ್ಪಡೆ ಮಾಡಲಿದ್ದಾರೆ.ನಿಧನರಾದವರು, ಮನೆ ಖಾಲಿ ಮಾಡಿದವರು, ವರ್ಗಾವಣೆ ಆದವರ ಹೆಸರನ್ನು ಮತಪಟ್ಟಿಯಿಂದ ಕೈಬಿಟ್ಟು ಪರಿಷ್ಕರಣೆ ಮಾಡಲಿದ್ದಾರೆ.ಮತಪಟ್ಟಿಯಲ್ಲಿ ಎರಡುಕಡೆ ಹೆಸರುಗಳಿದ್ದಲ್ಲಿ ಒಂದು ಕಡೆ ಮಾತ್ರ ಉಳಿಸುವ ಪ್ರಕ್ರಿಯೆ ನಡೆಯಲಿದೆ.ಗುರುತಿನ ಚೀಟಿಯಲ್ಲಿ ಯಾವುದೇ ದೋಷಗಳು ಇದ್ದಲ್ಲಿ ಅದನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ.ಅಧಿಕಾರಿಗಳು ನೀಡಿದ ಎರಡು ಫಾರಂ ಅನ್ನು ಅರ್ಜಿದಾರರು ಭರ್ತಿ ಮಾಡಿ ಸಹಿ ಮಾಡಬೇಕು.ಬಿಎಲ್ಓ ಕೂಡ ಆ ಫಾರಂ ಮೇಲೆ ಸಹಿ ಮಾಡಿ ಒಂದನ್ನು ಸ್ವೀಕೃತಿಯಾಗಿ ಮತದಾರರಿಗೆ ಮರಳಿಸಿದರೆ,ಇನ್ನೊಂದು ಪ್ರತಿಯನ್ನು ಅಧಿಕಾರಿಗಳು ಕೊಂಡುಹೋಗಲಿದ್ದಾರೆ.
ವಿವರ ವ್ಯತ್ಯಾಸವಿದ್ದರೆ ನೋಟಿಸ್:
2025ರ ಮತ್ತು 2002ರ ಮತದಾರರ ಪಟ್ಟಿ ಎರಡರಲ್ಲೂ ಮತದಾರರ ಹೆಸರು ಇದ್ದು,ವಿವರಗಳಲ್ಲಿ ವ್ಯತ್ಯಾಸವಿದ್ದರೆ ನೋಟಿಸ್ ನೀಡಲಾಗುತ್ತದೆ.2025ರ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು,2002ರ ಮತದಾರರ ಪಟ್ಟಿಯಲ್ಲಿ ಮತದಾರರ ಅಥವಾ ಅವರ ಪೋಷಕರ ವಿವರ ಇಲ್ಲದೇ ಇದ್ದರೂ ನೋಟಿಸ್ ನೀಡಲಾಗುತ್ತದೆ.ನೋಟಿಸ್ ನೀಡಿದಾಕ್ಷಣ ಮತದಾರರ ಪಟ್ಟಿಯಿಂದ ಅಂಥವರ ಹೆಸರನ್ನು ಕೈಬಿಡಲಾಗುತ್ತದೆ ಎಂದರ್ಥವಲ್ಲ,ನೋಟಿಸ್ ಪಡೆದುಕೊಂಡವರು ಅಗತ್ಯ ದಾಖಲೆಗಳನ್ನು ಒದಗಿಸಿದರೆ, ಆ ಪೈಕಿ ಅರ್ಹರನ್ನು ಕರಡು ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ.
221 ಬಿಎಲ್ಓಗಳಿಂದ ಎಸ್ಐಆರ್:
ಪುತ್ತೂರು ವಿಧಾನ ಸಭಾ ಕ್ಷೇತ್ರದ 221 ಬೂತ್ಗಳಲ್ಲಿ ನಡೆಯಲಿರುವ ಎಸ್ಐಆರ್ ಪ್ರಕ್ರಿಯಲ್ಲಿ 221 ಬಿಎಲ್ಒಗಳು ಕಾರ್ಯನಿರ್ವಹಿಸಲಿದ್ದಾರೆ.ಗ್ರಾಮ ಆಡಳಿತಾಧೊಕಾರಿಗಳು ಸೂಪರ್ವೈಸರ್ಗಳಾಗಿ ಕರ್ತವ್ಯ ನಿರ್ವಹಿಸಲಿದ್ದು ಒಬ್ಬ ಗ್ರಾಮ ಆಡಳಿತಾಧಿಕಾರಿ 12 ಬೂತ್ಗಳಲ್ಲಿ ಮೇಲ್ವಿಚಾರಣೆ ನಡೆಸಲಿದ್ದಾರೆ.ಸಹಾಯಕ ಆಯುಕ್ತರು ಮತದಾರರ ನೋಂದಾವಣಾಧಿಕಾರಿಯಾಗಿ ಹಾಗೂ ತಹಶೀಲ್ದಾರ್ ಮತದಾರರ ಸಹಾಯಕ ನೋಂದಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.ಅಂಗನವಾಡಿ ಕಾರ್ಯಕರ್ತೆಯರು, ಪ್ರಾಥಮಿಕ ಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಗ್ರಾಮ ಪಂಚಾಯತ್ ಬಿಲ್ ಕೆಲೆಕ್ಟರ್ಗಳು, ಗ್ರಂಥಾಲಯ ಸಿಬ್ಬಂದಿಗಳು ಬಿಎಲ್ಓಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಮ್ಯಾಪಿಂಗ್ 933ಶೇ.ಪೂರ್ಣ:
ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಜೂ.16ರ ತನಕ ಶೇ.93.75 ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದೆ.ಇನ್ನೂ ಶೇಕಡಾ 7 ಮ್ಯಾಪಿಂಗ್ ಮಾಡಲು ಬಾಕಿ ಇದ್ದು, ಮ್ಯಾಪಿಂಗ್ ಪ್ರಕ್ರಿಯೆ ಜುಲೈ 28ರವರೆಗೆ ನಡೆಯಲಿದೆ.ಬಾಕಿ ಇರುವ ಮತದಾರರು ತಮ್ಮ ಮತದಾನ ಕೇಂದ್ರಕ್ಕೆ ಸಂಬಂಽಸಿದ ಬಿಎಲ್ಓ ಮತ್ತು ಬಿಎಲ್ಒ ಸುಪರ್ವೈಸರ್ರವರಿಗೆ ತಮ್ಮ 2002 ಮಾಹಿತಿಯನ್ನು ಅಥವಾ ತಮ್ಮ ತಂದೆ ತಾಯಿಯವರ ಮಾಹಿತಿಯನ್ನು ನೀಡುವ ಮೂಲಕ ಮ್ಯಾಪಿಂಗ್ ಮಾಡಿಕೊಳ್ಳಬಹುದು.
ರಾಜ್ಯದಲ್ಲಿ ಪರಿಷ್ಕರಣೆಯ ವೇಳಾ ಪಟ್ಟಿ:
ಜೂನ್ 26ರಿಂದ 29ರವರೆಗೆ ಅಧಿಕಾರಿಗಳಿಗೆ ತರಬೇತಿ ಪೂರ್ಣಗೊಂಡಿದ್ದು ಜೂ.30ರಿಂದ ಜು.29ರವರೆಗೆ ಮನೆಮನೆ ಭೇಟಿ ನೀಡಲಿದ್ದಾರೆ.ಆಗಸ್ಟ್ 5ಕ್ಕೆ ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ.ನಾಗರಿಕರಿಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಕೆಗೆ ಆ.5ರಿಂದ ಸೆ.4ರವರೆಗೆ ಅವಕಾಶ ನೀಡಿದೆ.ಅಂತಿಮವಾಗಿ ಅ.7ರಂದು ಪರಿಷ್ಕೃತ ಮತದಾರರ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ.
ಮನೆಗಳಿಗೆ ಸ್ಟಿಕ್ಕರ್:
ಬಿಎಲ್ಒ ಗಣತಿ ನಮೂನೆಯನ್ನು ಮನೆಗೆ ವಿತರಿಸಿ ನೇರಳೆ ಬಣ್ಣದ ಚೌಕಾಕಾರದ ಸ್ಟಿಕ್ಕರ್ ಅಂಟಿಸುತ್ತಾರೆ.ಬಿಎಲ್ಒ ಭೇಟಿ ನೀಡಿದಾಗ ಮನೆಯಲ್ಲಿ ಯಾರೂ ಇಲ್ಲದಿದ್ದರೆ, ಬೀಗ ಹಾಕಿದ್ದರೆ ವೃತ್ತಾಕಾರದ ಕೆಂಪು ಬಣ್ಣದ ಸ್ಟಿಕ್ಕರ್ ಅಂಟಿಸಿ,ಅದರಲ್ಲಿ, ಬಿಎಲ್ಒ ಭೇಟಿ ನೀಡಿದ ದಿನಾಂಕ, ಪುನಃ ಭೇಟಿ ನೀಡುವ ದಿನಾಂಕವನ್ನು ಬರೆಯುತ್ತಾರೆ. ಅಗತ್ಯವಿದ್ದಲ್ಲಿ ಬಿಎಲ್ಒ ಒಂದು ಮನೆಗೆ ಮೂರು ಬಾರಿ ಭೇಟಿ ನೀಡುತ್ತಾರೆ.ನಿಗದಿತ ಅವಧಿಯೊಳಗೆ ಗಣತಿ ನಮೂನೆಯನ್ನು ನಿಖರವಾಗಿ ಭರ್ತಿ ಮಾಡಿ ಸಲ್ಲಿಸುವ ಎಲ್ಲ ಮತದಾರರನ್ನು ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದು. ಗಣತಿ ನಮೂನೆ ಭರ್ತಿ ಮಾಡದವರ ಹೆಸರನ್ನು ಕರಡು ಪಟ್ಟಿಯಲ್ಲಿ ಸೇರಿಸುವುದಿಲ್ಲ.ಅಲ್ಲದೆ, ಗಣತಿ ನಮೂನೆ ಸ್ವೀಕರಿಸುವಾಗ ಬಿಎಲ್ಒ ಯಾವುದೇ ದಾಖಲೆಯನ್ನು ಕೇಳುವುದಿಲ್ಲ.ಮತದಾರರು ತಮ್ಮ ಇತ್ತೀಚಿನ ಭಾವಚಿತ್ರ ಮಾತ್ರ ಗಣತಿ ನಮೂನೆಗೆ ಅಂಟಿಸಬೇಕು.
ಸಹಾಯ ಕೇಂದ್ರಗಳ ಸ್ಥಾಪನೆ:
ಗಣತಿ ನಮೂನೆಯನ್ನು ಭರ್ತಿ ಮಾಡಲು ಮತದಾರರಿಗೆ ನೆರವು ನೀಡಲು ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಸಹಾಯ ಕೇಂದ್ರಗಳನ್ನು ರಚನೆ ಮಾಡಲಾಗಿದೆ.ಅದೇ ರೀತಿ, ಬಿಎಲ್ಒಗಳಿಗೆ ನೆರವು ನೀಡಲು ಪ್ರತಿ ತಾಲೂಕಿನಲ್ಲಿ ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗಿದೆ.
ಕನ್ನಡದಲ್ಲಿ ಗಣತಿ ನಮೂನೆ:
ಗಣತಿ ನಮೂನೆಯು ಕನ್ನಡದಲ್ಲಿ ಮುದ್ರಿತವಾಗಿರುತ್ತದೆ.ಮತದಾರರು ಅದನ್ನು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಭರ್ತಿ ಮಾಡಿ ಸಹಿ ಮಾಡಿ ಹಿಂದಿರುಗಿಸಿದ ನಂತರ, ಬಿಎಲ್ಒಗಳು ಗಣತಿ ನಮೂನೆಯಲ್ಲಿನ ಮಾಹಿತಿಯನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ‘ಬಿಎಲ್ಒ ಮೊಬೈಲ್ ಆಪ್’ ಮೂಲಕ ಮತದಾರರ ಪಟ್ಟಿ ನಿರ್ವಹಣಾ ವ್ಯವಸ್ಥೆ(ಇಆರ್ಎಂಎಸ್)ಯಲ್ಲಿ ಮತದಾರರ ಮಾಹಿತಿಯನ್ನು ಡಿಜಿಟಲೀಕರಣಗೊಳಿಸುತ್ತಾರೆ.
ಆನ್ಲೈನ್ ಮೂಲಕವೂ ಗಣತಿ ನಮೂನೆ ಭರ್ತಿ:
ಗಣತಿ ನಮೂನೆಗಳನ್ನು ಭರ್ತಿ ಮಾಡುವ ಸೌಲಭ್ಯವು http://voter.ec.gov.n/ ಮತ್ತು ECINET ಮೊಬೈಲ್ ಅಪ್ಲಿಕೇಶನ್ನಲ್ಲಿ ಜೂ.30ರಿಂದ ಲಭ್ಯವಿರುತ್ತದೆ. ಪ್ರಸಕ್ತ ಸಾಲಿನ ಅಕ್ಟೋಬರ್ 1ಕ್ಕೆ ಅನ್ವಯವಾಗುವಂತೆ 18 ವರ್ಷ ತುಂಬುವವರು ಅರ್ಜಿ ನಮೂನೆ ಸಂಖ್ಯೆ 6ರನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ನೀಡಿ ಮತದಾರರ ಪಟ್ಟಿಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಪ್ರತಿ ಬಿಎಲ್ಒ ಬಳಿ 30 ಅರ್ಜಿ ನಮೂನೆ ಸಂಖ್ಯೆ 6 ಅನ್ನು ನೀಡಲಾಗುತ್ತದೆ.
ಮತದಾರರು ಏನು ಮಾಡಬೇಕು
ಮನೆ ಮನೆಗಳಿಗೆ ಭೇಟಿ ನೀಡಿದ ಬಿಎಲ್ಓಗಳು ನೀಡುವ ಎರಡು ಫಾರಂಗಳನ್ನು ಭರ್ತಿ ಮಾಡಬೇಕು.ಒಂದನ್ನು ದಾಖಲೆಯಾಗಿ ಇಟ್ಟುಕೊಂಡು ಇನ್ನೊಂದನ್ನು ಅಧಿಕಾರಿಗಳಿಗೆ ಮರಳಿಸಿ ಸ್ವೀಕೃತಿ ಪಡೆದುಕೊಳ್ಳುವುದು.ಫಾರಂ ಮೇಲೆ ಒಂದು ಇತ್ತೀಚಿನ ಫೋಟೋ ಅಂಟಿಸಬೇಕು.ಹೊಸ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶವಿದೆ.ಅಧಿಕಾರಿಗಳ ಜೊತೆಗೆ ರಾಜಕೀಯ ಪಕ್ಷಗಳ ನೋಂದಾಯಿತ ಏಜೆಂಟ್ಗಳು ಆಗಮಿಸಲಿದ್ದಾರೆ.ಅಧಿಕಾರಿಗಳು ತಮ್ಮ ಬಳಿಯ ಪ್ರತಿಯನ್ನು ಸ್ಕ್ಯಾನ್ ಮಾಡಿ ಅದನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುತ್ತಾರೆ.ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕರಡು ಪಟ್ಟಿ ಬಿಡುಗಡೆ ಮಾಡಲಿದ್ದು ಈ ವೇಳೆ ಹೆಸರುಗಳು ಬಿಟ್ಟು ಹೋಗಿದ್ದರೆ ನಿಮ್ಮ ಬಳಿಯಿರುವ ದಾಖಲೆಗಳನ್ನು ನೀಡಿ ಮತಪಟ್ಟಿಗೆ ಸೇರಿಸಲು ಅವಕಾಶವಿದೆ.










