ವಿಟ್ಲ: ‘ ಡಿ ‘ ಗ್ರೂಪ್ ವತಿಯಿಂದ ಸ್ನೇಹ ಸಮ್ಮಿಲನ ಕಾರ್ಯಕ್ರಮ

0

ವಿಟ್ಲ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ‘ಡಿ’ ಗ್ರೂಪ್ ಸಂಸ್ಥೆ ವತಿಯಿಂದ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಚಂದಳಿಕೆಯ ಡ್ರೀಮ್ಸ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ಅಧ್ಯಕ್ಷ ಶಾಕಿರ್ ಅಳಕೆಮಜಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ವಿವಿಧ ಆಟೋಟ ಸ್ಪರ್ಧೆಗಳನ್ನು ಈ ಸಂದರ್ಭದಲ್ಲಿ ಅಯೋಜಿಸಲಾಗಿತ್ತು.ಮುಖ್ಯ ಅತಿಥಿಗಳಾಗಿ ಬೆಂಗಳೂರು ಹೈಕೋರ್ಟ್ ನ್ಯಾಯವಾದಿ ಅನ್ಸಾರ್ ಮೇಗಿನಪೇಟೆ, ಬೊಳಂತಿಮುಗೇರು ಜುಮಾ ಮಸೀದಿ ಅಧ್ಯಕ್ಷ ಜಾಫರ್ ಖಾನ್, ಹೊರೈಝನ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಅಝೀಝ್ ಸನ ಭಾಗವಹಿಸಿದ್ದರು.


ಕಾರ್ಯಕ್ರಮದಲ್ಲಿ ‘ಡಿ’ ಗ್ರೂಪ್ ಉಪಾಧ್ಯಕ್ಷ ನೌಶೀನ್ ಬದ್ರಿಯಾ, ಕಾರ್ಯದರ್ಶಿ ರಾಝಿಕ್ ಒಕ್ಕೆತ್ತೂರು,ಜೊತೆ ಕಾರ್ಯದರ್ಶಿ ಇರ್ಷಾದ್ ಸೆಲೆಕ್ಟ್ ಕೋಶಾಧಿಕಾರಿ ಬಶೀರ್ ಬೊಬ್ಬೆಕೇರಿ,ಅ್ಯಂಬುಲೆನ್ಸ್ ನಿರ್ವಹಣಾ ಸಮಿತಿಯ ಹಂಝ ವಿಟ್ಲ, ರಿಯಾಝ್ ವಿ.ಎಚ್, ವಿ.ಕೆ.ಎಂ‌ ಹಂಝ, ಸಮದ್ ಮೇಗಿನಪೇಟೆ, ಸಫ್ವಾನ್ ಕರ್ನಾಟಕ, ಅನಿವಾಸಿ ಸದಸ್ಯ ಇಂಮ್ತಿಯಾಝ್ ಮೇಗಿನಪೇಟೆ, ಮಹಮ್ಮದ್ ಕಲ್ಲಿಪಾಲ,ಸಲ್ಮಾನ್ ಪಾರಿಸ್, ಇಕ್ಬಾಲ್ ಶೀತಲ್ ಮೊದಲಾದವರು ಉಪಸ್ಥಿತರಿದ್ದರು.
ಡಿ’ ಗ್ರೂಪ್ ಸದಸ್ಯ ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here