









ಪುತ್ತೂರು : ಜಾತ್ಯತೀತ ಜನತಾದಳ ಇದರ ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಹಿಳಾ ಘಟಕ ಇದರ ಅಧ್ಯಕ್ಷೆಯಾಗಿ ಮುಂಡೂರು ನಿವಾಸಿ ಮೀನಾಕ್ಷಿ ಮಂಜುನಾಥ್ ಇವರು ಆಯ್ಕೆಯಾಗಿದ್ದಾರೆ.



ಇವರನ್ನು ಜಿಲ್ಲಾ ಘಟಕದ ಅಧ್ಯಕ್ಷೆ ರಮೀಝ ನಾಸೀರ್ ಇವರು ನೇಮಕಗೊಳಿಸಿದ್ದಾರೆ. ಟೈಲರಿಂಗ್ ವೃತ್ತಿ ಮಾಡುತ್ತಿರುವ ಇವರು ಟೈಲರಿಂಗ್ ಅಸೋಸಿಯೇಷನ್ ಇದರ ನರಿಮೊಗರು ವಲಯ ಕಾರ್ಯದರ್ಶಿಯಾಗಿ ಹಾಗೂ ಧರ್ಮಸ್ಥಳ ಸ್ವಸಹಾಯ ಸಂಘದ ಇದರ ಮುಂಡೂರು ಒಕ್ಕೂಟದ ಕಾರ್ಯದರ್ಶಿಯೂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಪತಿ ಮಂಜುನಾಥ್ ಇವರೊಂದಿಗೆ ಮುಂಡೂರಿನಲ್ಲಿ ವಾಸವಾಗಿದ್ದಾರೆ.










