ಜು 2 ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳಲ್ಲಿ ಮಧುವನ ಸಿಂಚನ 2026 

0

 ಬಡಗನ್ನೂರುಃ ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳಲ್ಲಿ  ದಿವಂಗತ ಡಾ. ಕೆ. ಪಿ. ಬಾಲಕೃಷ್ಣ ರೈ ಮಧುವನ, ನೆಟ್ಟಣಿಗೆ ಇವರ ಸ್ಮರಣಾರ್ಥ ಮಧುವನ ಸಿಂಚನ 2026 ಜು 2 ರಂದು ಬೆಳಗ್ಗೆ ಗಂ 10 ಕ್ಕೆ   ಶಾಲಾ ಸಭಾಂಗಣದಲ್ಲಿ ನಡೆಯಲಿರುವುದು.

ಕಾರ್ಯಕ್ರಮವನ್ನು ಪುತ್ತೂರು ಮಣಿಕಂಠ ಗ್ಯಾಸ್ ಏಜೆನ್ಸಿ ಮಾಲಕ ಅರುಣ್ ಕುಮಾರ್ ರೈ ಎ. ರವರು ಉದ್ಘಾಟನೆ ಮಾಡಲಿದ್ದಾರೆ .ಸುಳ್ಯಪದವು ಸರ್ವೋದಯ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್. ಡಿ. ಶಿವರಾಮ್ ರವರು ಸಭಾಧ್ಯಕ್ಷತೆಯಲ್ಲಿ ನಡೆಯಲಿದೆ .ಅತಿಥಿಗಳಾಗಿ ಮುಂಬಯಿ  ವಿಜಯಾ ಬ್ಯಾಂಕ್ ನಿವೃತ್ತ ಸಹಾಯಕ ಜನರಲ್ ಮ್ಯಾನೇಜರ್  ಎಂ. ರಾಜಾರಾಮ ಶೆಟ್ಟಿ,  ಮುಂಬಯಿ

ವಿಜಯ ಬ್ಯಾಂಕ್  ನಿವೃತ್ತ ಅಧಿಕಾರಿ ಜಯರಾಜ ರೈ, ಮಂಗಳೂರು ವಕೀಲರಾದ  ಪೃಥ್ವಿರಾಜ್ ರೈ, ಹಾಗೂ  ಉಪಸ್ಥಿತರಾಗಿ ಹಾಗೂ ಕಾರ್ಯಕ್ರಮದ ಪ್ರಾಯೋಜಕರಾಗಿ ಮಂಗಳೂರು ವಕೀಲರಾದ ಬಾಲರಾಜ್ ರೈ, ಭಾಗವಹಿಸಲಿದ್ದಾರೆ

ಕಾರ್ಯಕ್ರಮಗಳು :ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್ ವಿತರಣೆ,1-2ನೇ ತರಗತಿಗೆ ಅಭಿನಯ ಗೀತೆ,3-5ನೇ ತರಗತಿಗೆ ಭಾವಗೀತೆ,6-10 ತರಗತಿ ವಿದ್ಯಾರ್ಥಿಗಳಿಗೆ ಹಳ್ಳಿ ಸೊಗಡು ವಿವಿಧ ವಿನೋದಾವಳಿ ನಡೆಯಲಿದೆ.

LEAVE A REPLY

Please enter your comment!
Please enter your name here