ಸುಳ್ಯ ಮಂಡಲ ಎಸ್.ಟಿ.ಮೋರ್ಚಾ ಸಭೆ -ಎಸ್.ಐ.ಆರ್ ಕುರಿತು ಮನೆಮನೆಗೆ ಮಾಹಿತಿ ನೀಡಲು ಕರೆ

0

ಸುಳ್ಯ : ಬಿಜೆಪಿ ಸುಳ್ಯ ಮಂಡಲ ಎಸ್.ಟಿ.ಮೋರ್ಚಾ ಇದರ ಸಭೆಯು ಸುಳ್ಯ ಬಿಜೆಪಿ ಕಾರ್ಯಾಲಯದಲ್ಲಿ ನಡೆಯಿತು.ಸಭೆಯಲ್ಲಿ ಮಾತನಾಡಿದ,ಬಿಜೆಪಿ ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಅವರು,ಚುನಾವಣಾ ಆಯೋಗ ನಡೆಸುತ್ತಿರುವ ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು.ಯಾವೊಬ್ಬ ಮತದಾರನ ಹೆಸರೂ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು‌ ಎಂದರು.

ಅಧ್ಯಕ್ಷತೆ ವಹಿಸಿದ್ದ ಸುಳ್ಯ ಮಂಡಲ ಎಸ್.ಟಿ.ಮೋರ್ಚಾ ಅಧ್ಯಕ್ಷ ಗಂಗಾಧರ ಪೆರಿಯಡ್ಕ ಸವಣೂರು ಅವರು ಮಾತನಾಡಿ, ಈಗಾಗಲೇ ಎಸ್.ಟಿ.ಮೋರ್ಚಾ ವತಿಯಿಂದ ವಿವಿಧ ಕಾರ್ಯಕ್ರಮ ಮಾಡಲಾಗಿದೆ. ಸುಳ್ಯ ಸಮಿತಿಯನ್ನು ಜಿಲ್ಲೆಯಲ್ಲೇ ಮಾದರಿಯಾಗಿ ಮಾಡುವ ನಿಟ್ಟಿನಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲಾಗುವುದು.ಸಮುದಾಯದ ವಿವಿಧ ಸಹಕಾರ ಸಂಸ್ಥೆಯ ನಿರ್ದೆಶಕರು, ಮಾಜಿ ಗ್ರಾ.ಪಂ.ಸದಸ್ಯರೂ ಸೇರಿದಂತೆ ಎಸ್.ಟಿ.ಸಮುದಾಯದ ಎಲ್ಲರನ್ನೂ ಸೇರಿಸಿಕೊಂಡು ಮೋರ್ಛಾವನ್ನು ಗಟ್ಟಿಗೊಳಿಸುವ ಕಾರ್ಯ ಮಾಡಲಾಗುವುದು.ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ವೇದಿಕೆಯಲ್ಲಿ ಬಿಜೆಪಿ ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಎಸ್.ಟಿ.ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಬುದ್ದ ನಾಯ್ಕ ಜಿ.,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೂವಪ್ಪ ನಾಯ್ಕ ಎಸ್. ಆಲಂಕಾರು,ಸುಳ್ಯ ಮಂಡಲ ಎಸ್.ಟಿ.ಮೋರ್ಚಾ ಪ್ರಭಾರಿ ಜಿನ್ನಪ್ಪ ಪೂಜಾರಿ, ಸದಸ್ಯರಾದ ಮಿಥುನ್ ಕುಮಾರ್ ಕೆ.ಶಾಂತಿನಗರ,ಪುಂಡರೀಕ ಕಾಪುಮಲೆ,ರಮೇಶ್ ಕಲ್ಮಡ್ಕ,ಪ್ರವೀಣ್ ಕುಮಾರ್ ಪಾಲ್ತಾಡಿ, ಯನ್.ಐತ್ತಪ್ಪ ನಾಯ್ಕ,ಜನಾರ್ಧನ ನಾಯ್ಕ ಕೇರ್ಪಳ,ಮರ್ಧಾಳ ಗ್ರಾ.ಪಂ.ಮಾಜಿ ಅಧ್ಯಕ್ಷೆ ಪ್ರೇಮಾ ಪಿಲಿಮಜಲು ಮೊದಲಾದವರಿದ್ದರು.

ಸುಳ್ಯ ಮಂಡಲ ಎಸ್.ಟಿ.ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಅಲಂಗಪ್ಪೆ ಗೋಳಿತೊಟ್ಟು ಸ್ವಾಗತಿಸಿ,ವಂದಿಸಿದರು.

LEAVE A REPLY

Please enter your comment!
Please enter your name here