






ಪುತ್ತೂರು: ಕುರಿಯ ಸರಕಾರಿ ಉ.ಹಿ.ಪ್ರಾ. ಶಾಲಾ ಹಿತೈಷಿ ಬಳಗವನ್ನು ರಚಿಸಲಾಗಿದ್ದು ಗೌರವಾಧ್ಯಕ್ಷರಾಗಿ ಪುರುಷೋತ್ತಮ ರೈ ಬೂಡಿಯಾರ್ ಹಾಗೂ ರಾಧಾಕೃಷ್ಣ ರೈ ಬೂಡಿಯಾರ್, ಅಧ್ಯಕ್ಷರಾಗಿ ಶಿವರಾಮ ಆಳ್ವ, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ರೈ ಡಿಂಬ್ರಿ ಆಯ್ಕೆಯಾಗಿದ್ದಾರೆ. ಹಿತೈಷಿ ಬಳಗದ ಸಮಾಲೋಚನಾ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.


ಉಪಾಧ್ಯಕ್ಷರಾಗಿ ಅರುಣ್ ರೈ ಡಿಂಬ್ರಿ ಮತ್ತು ಅಬೂಬಕ್ಕರ್ ಜಿಂದಗಿ, ಕೋಶಾಧಿಕಾರಿಯಾಗಿ ಶಾಲಾ ಮುಖ್ಯಗುರು ಫೆಲ್ಸಿಟಾ ಡಿ ಕುನ್ಹಾ, ಜೊತೆ ಕಾರ್ಯದರ್ಶಿಯಾಗಿ ಸನತ್ ರೈ ಆಯ್ಕೆಯಾದರು. ಗೌರವ ಸದಸ್ಯರಾಗಿ ಹಬೀಬ್ ರೆಹಮಾನ್, ಗೌರವ ಸಲಹೆಗಾರರಾಗಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಸಹಶಿಕ್ಷಕಿ ಕವಿತಾ ಪಿ ಎನ್ ಆಯ್ಕೆಗೊಂಡರು. ಸಮಿತಿಗೆ ಆಯ್ಕೆಗೊಂಡ ಪದಾಧಿಕಾರಿಗಳಿಗೆ ಹೂಗುಚ್ಚ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ನೇತ್ರಾವತಿ, ಅಂಗನವಾಡಿ ಕಾರ್ಯಕರ್ತೆ ಕಮಲ, ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಫೆಲ್ಸಿಟಾ ಡಿ ಕುನ್ಹಾ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿಯರಾದ ಕವಿತಾ, ನಳಿನಿ, ಕಾವ್ಯ, ಯಜ್ಞ ಸಹಕರಿಸಿದರು.













