






ಪುತ್ತೂರು: ಇನ್ನರ್ ವೀಲ್ ಕ್ಲಬ್ ಆಫ್ ಪುತ್ತೂರು (2025-26) ವತಿಯಿಂದ ಕೈಗೊಂಡ ನಗರ ಸೌಂದರ್ಯೀಕರಣ ಯೋಜನೆಗೆ ವಿಶೇಷ ಪ್ರಶಸ್ತಿ ಲಭಿಸಿದೆ.


ದರ್ಬೆಯಿಂದ ಐಬಿವರೆಗೆ ಡಿವೈಡರ್ ಗಾರ್ಡನ್ ಅಭಿವೃದ್ಧಿ ಹಾಗೂ ನಿರ್ವಹಣೆ ಕಾರ್ಯವನ್ನು ಯಶಸ್ವಿಯಾಗಿ ಕೈಗೊಂಡಿದ್ದ ಸಮಾಜಮುಖಿ ಹಾಗೂ ಪರಿಸರ ಸ್ನೇಹಿ ಯೋಜನೆಯ ಅತ್ಯುತ್ತಮ ಅನುಷ್ಠಾನವನ್ನು ಗುರುತಿಸಿ ಈ ಗೌರವ ನೀಡಲಾಗಿದೆ.



ಮೂಡಬಿದ್ರೆಯಲ್ಲಿ ನಡೆದ ಇನ್ನರ್ ವೀಲ್ ಜಿಲ್ಲಾ 318ರ ಜಿಲ್ಲಾ ಅಸೆಂಬ್ಲಿ ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ವಿಶೇಷ ಪ್ರಶಸ್ತಿ (Special Recognition Award) ನೀಡಿ ಕ್ಲಬ್ ಅನ್ನು ಗೌರವಿಸಲಾಯಿತು.ಅಂದಿನ ಕ್ಲಬ್ ಅಧ್ಯಕ್ಷೆ ರೂಪಲೇಖಾ ಹಾಗೂ ಕಾರ್ಯದರ್ಶಿ ಸಂಧ್ಯಾ ಸಾಯ ಅವರು ಜಿಲ್ಲಾ ಅಸೆಂಬ್ಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದರು.










