






ಪುತ್ತೂರು: ಕಬಕ ಜಮಾತಿಗೊಳಪಟ್ಟ ಅನಿವಾಸಿ ಯುವಕರ ಸಂಘ ‘ಗಲ್ಫ್ ಯೂತ್ ಕಬಕ ಜಮಾಅತ್ ಇದರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಸುಲೈಮಾನ್ ಕಬಕಕಾರ್ಸ್, ಇಕ್ಬಾಲ್ ಶೇಕ್ ಯುಎಇ, ಮತ್ತು ಇಸ್ಮಾಯಿಲ್ ಬ್ರೈಟ್ ಆಯ್ಕೆಯಾದರು. ಸಂಚಾಲಕರಾಗಿ ಶರೀಫ್ ಕತಾರ್, ರವೂಫ್ ಮಾಸ್ಟರ್ ಯುಎಇ, ಅಮ್ಜದ್ ಖಾನ್ ಪೋಳ್ಯ ಕೆಎಸ್‌ಎ ಆಯ್ಕೆಯಾದರು.


ಊರಿನ ಸಲಹಾ ಮುಖ್ಯಸ್ಥರಾಗಿ ಬಶೀರ್ ಹಾಜಿ, ಇಸ್ಮಾಯಿಲ್ ಬಗ್ಗುಮೂಲೆ, ಮಮ್ಮು ಬೊಳ್ವಾರ್, ಅನ್ವರ್ ಸ್ಪೋರ್ಟ್ ಆಯ್ಕೆಯಾದರು. ಗಲ್ಫ್ ಸಲಹಾ ಪ್ರಮುಖರಾಗಿ ಅಸ್ಲಂ ಸಿತಾರ್, ರಫೀಕ್ ಬ್ರೈಟ್, ಆಸಿಫ್ ಬಗ್ಗುಮೂಲೆ, ನೌಶಾದ್ ಪೋಳ್ಯ ಹಾಗು ಕುಂಬ್ರ ಮಹಮ್ಮದ್ ಅವರನ್ನು ಆಯ್ಕೆ ಮಾಡಲಾಯಿತು.



ನೂತನ ಅಧ್ಯಕ್ಷರಾಗಿ ಸುಲೈಮಾನ್ ಓಜಾಲ ಕತಾರ್, ಉಪಾಧ್ಯಕ್ಷರಾಗಿ ಸಮೀರ್ ಕರ್ನಾಟಕ ಕೆಎಸ್‌ಎ ಮತ್ತು ಬದ್ರು ಮದೀನಾ ಕೆಎಸ್‌ಎ, ಪ್ರಧಾನ ಕಾರ್ಯದರ್ಶಿಯಾಗಿ ಖಲಂದರ್ ಶಂಶೀರ್ ಯುಎಇ, ಜೊತೆ ಕಾರ್ಯದರ್ಶಿಯಾಗಿ ಸಿರಾಜ್ ಬಗ್ಗುಮೂಲೆ ಕತಾರ್ ಮತ್ತು ಅಬೂಬಕ್ಕರ್ ಕಲ್ಲಂದಡ್ಕ ಕತಾರ್, ಕೋಶಾಧಿಕಾರಿಯಾಗಿ ಹಮೀದ್ ಬಗ್ಗುಮೂಲೆ ಕೆಎಸ್‌ಎ, ಜೊತೆ ಕೋಶಾಧಿಕಾರಿಯಾಗಿ ಫೈರೋಸ್ ಯು.ಕೆ, ಊರಿನ ಪ್ರತಿನಿಧಿಗಳಾಗಿ ಅಬ್ದುಲ್ ಖಾದರ್ ಭಾರತ್, ರಫೀಕ್ ಕಸ್ತೂರಿ, ಫರ್ಸನ್ ಸುಲ್ತಾನ್ ನಗರ ಅವರನ್ನು ಆಯ್ಕೆ ಮಾಡಲಾಯಿತು.
ಲೆಕ್ಕ ಪತ್ರ ಪರಿಶೋಧಕರಾಗಿ ಮೊಹಮ್ಮದ್ ಆಶಿಕ್ ಕತಾರ್, ಮುಖ್ಯ ಮಾರ್ಗದರ್ಶಕರಾಗಿ ಅಬ್ದುಲ್ ಬಶೀರ್, ಅಬೂಬಕ್ಕರ್ ಆಯ್ಕೆಯಾದರು. ಹಸನ್ ದಾರಿಮಿ ಕಬಕ ಅಬಿಧಾಬಿ ಪ್ರಾರ್ಥನೆ ನೆರವೇರಿಸಿದರು. ನಿರ್ಗಮನ ಅಧ್ಯಕ್ಷ ಶರೀಫ್ ಕತಾರ್ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ನಝೀರ್ ದಿಲ್ ಮತ್ತು ಲೆಕ್ಕ ಪರಿಶೋಧಕ ಆಶಿಕ್ ಕತಾರ್ ಕಳೆದ ಒಂದು ವರ್ಷದ ಲೆಕ್ಕಾಚಾರದ ವಿವರಣೆ ನೀಡಿದರು. ನೂತನ ಅಧ್ಯಕ್ಷ ಸುಲೈಮಾನ್ ಓಜಲ ವಂದಿಸಿದರು. ಶರೀಫ್ ಕತಾರ್, ನಝೀರ್ ದಿಲ್, ಸುಲೈಮಾನ್ ಕಬಕಕಾರ್ಸ್, ರವೂಫ್, ಆಶಿಕ್ ಮತ್ತು ಅಶ್ರಫ್ ಯುನೈನ್ ಸಹಕರಿಸಿದರು. ರವೂಫ್ ಮಾಸ್ಟರ್ ವಿದ್ಯಾಪುರ ಯುಎಇ ಕಾರ್ಯಕ್ರಮ ನಿರೂಪಿಸಿದರು.










