ನಾಳೆ (ಜು.6): ಕುಂಬ್ರಕ್ಕೆ ಆರೋಗ್ಯ ಸಚಿವ ಯು.ಟಿ ಖಾದರ್ ಸಹಿತ ಹಲವು ಗಣ್ಯರ ಆಗಮನ-​’ಎಚ್.ಎಂ. ಹೋಮ್ ಅಪ್ಲೈಯನ್ಸಸ್ ಆ್ಯಂಡ್ ಎಲೆಕ್ಟ್ರಾನಿಕ್ಸ್’ ಉದ್ಘಾಟನೆ

0

​ಪುತ್ತೂರು: ವಿವಿಧ ಬ್ರಾಂಡೆಡ್ ಕಂಪನಿಗಳ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಮಳಿಗೆ ‘ಎಚ್.ಎಂ. ಹೋಮ್ ಅಪ್ಲೈಯನ್ಸಸ್ ಆ್ಯಂಡ್ ಎಲೆಕ್ಟ್ರಾನಿಕ್ಸ್’, ಕುಂಬ್ರದ ಹೃದಯಭಾಗದಲ್ಲಿರುವ ಕುಂಬ್ರ ಸೆಂಟರ್‌ನಲ್ಲಿ ಜುಲೈ.6 ರಂದು ಶುಭಾರಂಭಗೊಳ್ಳಲಿದ್ದು, ಕಾರ್ಯಕ್ರಮಕ್ಕೆ ಆರೋಗ್ಯ ಸಚಿವರಾದ ಯು.ಟಿ. ಖಾದರ್, ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಬ್ರ್ಯಾಂಡ್ ಅಂಬಾಸಿಡರ್ ಅರುಣ್ ಕುಮಾರ್ ಪುತ್ತಿಲ ಹಾಗೂ ಎಸ್.ಡಿ.ಪಿ.ಐ ಮುಖಂಡ ರಿಯಾಝ್ ಕಡಂಬು ಸೇರಿದಂತೆ ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಲಿದ್ದಾರೆ.

​ಈ ಹೊಸ ಮಳಿಗೆಯಲ್ಲಿ ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಏರ್ ಕೂಲರ್, ಮಿಕ್ಸಿ, ಫ್ಯಾನ್, ಟಿವಿ, ಹೋಮ್ ಥಿಯೇಟರ್, ಹೊಲಿಗೆ ಯಂತ್ರಗಳಲ್ಲದೆ, ಗೇರ್ ಸೈಕಲ್, ಮಕ್ಕಳ ಟಾಯ್ಸ್ ಹಾಗೂ ತೊಟ್ಟಿಲುಗಳು ಲಭ್ಯವಿವೆ.

 ಈ ಮಳಿಗೆಯಲ್ಲಿ ಗ್ರಾಹಕರಿಗೆ ಶೇ.10 ರಿಂದ 80 ರವರೆಗೆ ಭರ್ಜರಿ ರಿಯಾಯಿತಿ ದರದಲ್ಲಿ ಐಟಂಗಳನ್ನು ಪಡೆದುಕೊಳ್ಳಬಹುದಾಗಿದೆ. ಎಲ್‌ಜಿ, ಸ್ಯಾಮ್‌ಸಂಗ್ ಇತ್ಯಾದಿ ಕಂಪನಿಗಳ ರೆಫ್ರಿಜರೇಟರ್‌ಗಳ ಮೇಲೆ ಶೇ.30 ರಿಂದ 40 ರವರೆಗೆ ಡಿಸ್ಕೌಂಟ್. ​ಟಿವಿಗಳ ಮೇಲೆ ಶೇ.30ರಿಂದ 50 ರವರೆಗೆ ರಿಯಾಯಿತಿ. ಇತರೆ ಎಲ್ಲಾ ಗೃಹೋಪಯೋಗಿ ವಸ್ತುಗಳ ಮೇಲೆ ಶೇ.10 ರಿಂದ 80 ರವರೆಗೆ ರಿಯಾಯಿತಿ ಲಭ್ಯ.

ಗ್ರಾಹಕರ ಅನುಕೂಲಕ್ಕಾಗಿ ಬಜಾಜ್ ಮತ್ತು ಎಚ್.ಡಿ.ಬಿ ಫೈನಾನ್ಸ್ ಕಂಪನಿಗಳ ಮೂಲಕ ಸುಲಭ ಕಂತಿನ ಸಾಲ ಸೌಲಭ್ಯವನ್ನು ಕೂಡ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9187376838 ಗೆ ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here