







ನೆಟ್ಟಣ: ಸಂತ ಮರಿಯಮ್ಮನವರ ದೇವಾಲಯ ನೆಟ್ಟಣ ಮತ್ತು ಎಸ್.ಎಂ.ವೈ.ಎಂ ಇದರ ಸಂಯುಕ್ತ ಆಶ್ರಯದಲ್ಲಿ ದೇವಾಲಯದ ಆವರಣದಲ್ಲಿ ವನ ಮಹೋತ್ಸವವನ್ನು ಆಚರಿಸಲಾಯಿತು.


ಫಾದರ್ ತೋಮಸ್ ಪಾರೇಕಟಿಲ್ ಅವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ಚರ್ಚಿನ ಎಲ್ಲಾ ಕುಟುಂಬದವರಿಗೆ ಗಿಡಗಳನ್ನು ವಿತರಿಸಲಾಯಿತು.ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಈ ಕಾರ್ಯಕ್ರಮದಲ್ಲಿ ಭಕ್ತರು ಉತ್ಸಾಹದಿಂದ ಪಾಲ್ಗೊಂಡು ಗಿಡಗಳನ್ನು ಸ್ವೀಕರಿಸಿದರು. ಸಂಘದ ಅಧ್ಯಕ್ಷರಾದ ಜಸ್ಟಿನ್ ಬೆನ್ನಿ, ಕಾರ್ಯದರ್ಶಿ ಆನ್ ಮರಿಯ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ನಿರ್ವಹಿಸಿದರು.













