ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಶಿಕ್ಷಕರಿಗಾಗಿ ಫೋನಿಕ್ಸ್, ಇಂಡಕ್ಷನ್ ಮತ್ತು ತರಗತಿ ನಿರ್ವಹಣೆ ವಿಷಯದ ಕುರಿತು ತರಬೇತಿ

0

ಪುತ್ತೂರು: ವಿವೇಕಾನಂದ ಸೆಂಟ್ರಲ್ ಸ್ಕೂಲ್, ನೆಹರೂ ನಗರ, ಪುತ್ತೂರಿನಲ್ಲಿ ಶಿಕ್ಷಕರಿಗಾಗಿ ” ಫೋನಿಕ್ಸ್ , ಇಂಡಕ್ಷನ್ ಮತ್ತು ತರಗತಿ ನಿರ್ವಹಣೆ ” ವಿಷಯದ ಕುರಿತು ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.


ಕಾರ್ಯಕ್ರಮದ ಮೊದಲ ಅಧಿವೇಶನವನ್ನು ಶ್ರೀಮತಿ ಲಕ್ಷ್ಮಿ ಜ್ಞಾನೇಶ್ವರ್ ನಡೆಸಿಕೊಟ್ಟರು. ಅವರು ಫೋನಿಕ್ಸ್ ಬೋಧನಾ ವಿಧಾನ, ಮಕ್ಕಳಿಗೆ ಪರಿಣಾಮಕಾರಿ ಪರಿಚಯ (Induction) ನೀಡುವ ಕ್ರಮಗಳು ಹಾಗೂ ತರಗತಿ ನಿರ್ವಹಣೆಯ ವಿವಿಧ ತಂತ್ರಗಳ ಕುರಿತು ವಿವರವಾಗಿ ತಿಳಿಸಿದರು. ಜೊತೆಗೆ, ಮಕ್ಕಳನ್ನು ಚಟುವಟಿಕೆಗಳ ಮೂಲಕ ಕಲಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಹಲವು ಪ್ರಾಯೋಗಿಕ ವಿಧಾನಗಳನ್ನು ಪ್ರದರ್ಶಿಸಿದರು.


ಎರಡನೇ ಅಧಿವೇಶನವನ್ನು ಶ್ರೀಮತಿ ರಚನಾ ನಡೆಸಿ, ಸ್ಮಾರ್ಟ್ ಕಿಂಡರ್ ಗಾರ್ಟೆನ್ ಸಾಫ್ಟ್ ವೇರ್ ಬಳಕೆಯ ಕುರಿತು ಮಾಹಿತಿ ನೀಡಿದರು. ಪಾಠ ಯೋಜನೆ, ತರಗತಿ ಬೋಧನೆ ಹಾಗೂ ಚಟುವಟಿಕೆ ಆಧಾರಿತ ಕಲಿಕೆಯಲ್ಲಿ ಈ ತಂತ್ರಾಂಶವನ್ನು ಪರಿಣಾಮಕಾರಿಯಾಗಿ ಬಳಸುವ ವಿಧಾನಗಳನ್ನು ವಿವರಿಸಿದರು. ಈ ತರಬೇತಿ ಕಾರ್ಯಕ್ರಮವು ಶಿಕ್ಷಕರ ಬೋಧನಾ ಕೌಶಲ್ಯವನ್ನು ವೃದ್ಧಿಸುವುದರ ಜೊತೆಗೆ, ತಂತ್ರಜ್ಞಾನದ ಸಮರ್ಪಕ ಬಳಕೆಯ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಆಸಕ್ತಿದಾಯಕ ಕಲಿಕಾ ವಾತಾವರಣ ನಿರ್ಮಿಸಲು ಸಾಧ್ಯ ಎಂದು ಹೇಳಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸಿಂಧುವಿ ಜಿ ಹಾಗೂ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸ್ವರ್ಣ ಗೌರಿ ಕಾರ್ಯಕ್ರಮವನ್ನು ನಿರೂಪಿಸಿದರು

LEAVE A REPLY

Please enter your comment!
Please enter your name here