







ಕಾಣಿಯೂರು: ಬೃಹತ್ ಗಾತ್ರದ ಮರವೊಂದು ಮನೆಗೆ ಬಿದ್ದು ಹಾನಿಗೊಳಗಾದ ಘಟನೆ ಬೆಳಂದೂರು ಗ್ರಾಮದ ಬನಾರಿ ಎಂಬಲ್ಲಿ ಜು 6ರಂದು ನಡೆದಿದೆ.



ಬನಾರಿ ಚಂದ್ರಶೇಖರ ಆಚಾರ್ಯ ಎಂಬವರ ಮನೆಗೆ ಮರ ಬಿದ್ದು ಹಾನಿ ಉಂಟಾಗಿದ್ದು, ಅದೃಷ್ಟವಶಾತ್ ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿ ಯಾರು ಇಲ್ಲದ ಕಾರಣ ಯಾವುದೇ ಜೀವಪಾಯ ಸಂಭವಿಸಿಲ್ಲ.ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಸ್ಥಳೀಯರ ಸಹಕಾರದಿಂದ ಮರ ತೆರವಗೊಳಿಸಲಾಯಿತು.













