ಕುಂಬ್ರದಲ್ಲಿ ಎಚ್.ಎಮ್ ಹೋಮ್ ಅಪ್ಲೈಯನ್ಸಸ್ ಆಂಡ್ ಇಲೆಕ್ಟ್ರಾನಿಕ್ಸ್ ಶುಭಾರಂಭ

0

ಪುತ್ತೂರು: ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕುಂಬ್ರದಂತಹ ಜಾಗದಲ್ಲಿ ಇಂತಹ ಹೋಮ್ ಅಪ್ಲೈಯನ್ಸಸ್ ಮತ್ತು ಇಲೆಕ್ಟ್ರಾನಿಕ್ಸ್ ಸಂಸ್ಥೆ ಆರಂಭವಾಗಿರುವುದು ಒಂದು ಒಳ್ಳೆಯ ಬೆಳವಣಿಗೆಯಾಗಿದೆ. ಇದು ಕುಂಬ್ರಕ್ಕೆ ಹೊಸ ಮೆರುಗು ನೀಡಿದೆ. ಮಂಗಳೂರಿನಂತಹ ಸಿಟಿಗಳಿಗೆ ಹೋಗುವ ಪ್ರಮೇಯ ಬರುವುದಿಲ್ಲ. ಗ್ರಾಹಕರಿಗೆ ಒಳ್ಳೆಯ ಸೇವೆ ನೀಡುವ ಮೂಲಕ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ರಾಜ್ಯ ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದರು.


ಅವರು ಜು.6ರಂದು ಕುಂಬ್ರದ ಹೃದಯಭಾಗದಲ್ಲಿರುವ ಕುಂಬ್ರ ಸೆಂಟರ್‌ನಲ್ಲಿ ಎಚ್.ಎಮ್ ಹೋಮ್ ಅಪ್ಲೈಯನ್ಸಸ್ ಆಂಡ್ ಇಲೆಕ್ಟ್ರಾನಿಕ್ಸ್ ಶೋರೂಮ್‌ನ ಶುಭಾರಂಭದ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರು ಮಾತನಾಡಿ, ಗ್ರಾಮೀಣ ಭಾಗದ ಜನರ ಅವಶ್ಯಕತೆಗಳಿಗೆ ಪೂರಕವಾಗಿ ಗೃಹೋಪಯೋಗಿ ವಸ್ತುಗಳನ್ನು ಪೂರೈಸುವ ಸಲುವಾಗಿ ಕುಂಬ್ರದಲ್ಲಿ ಆರಂಭಗೊಂಡ ಎಚ್.ಎಮ್ ಹೋಮ್ ಅಪ್ಲೈಯನ್ಸಸ್ ಆಂಡ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯು ಕುಂಬ್ರದಿಂದ ಹತ್ತೂರಿಗೂ ಬೆಳೆಯಲಿ, ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುವಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.


ಎಚ್.ಎಮ್ ಹೋಮ್ ಅಪ್ಲೈಯನ್ಸಸ್ ಮತ್ತು ಇಲೆಕ್ಟ್ರಾನಿಕ್ಸ್‌ನ ಮಾಲಕರಾದ ಮುಖ್ತಾರ್ ಕುಂಬ್ರರವರ ತಂದೆಯವರಾದ ಒಳಮೊಗ್ರು ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕರವರು ರಿಬ್ಬನ್ ತುಂಡರಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್‌ರವರು ಮಾತನಾಡಿ, ಕುಂಬ್ರದಲ್ಲಿ ಆರಂಭಗೊಂಡ ಗೃಹೋಪಯೋಗಿ ವಸ್ತುಗಳ ಎಚ್.ಎಮ್ ಸಂಸ್ಥೆಯು ಪುತ್ತೂರಿಗೆ ಮತ್ತೊಂದು ಕೊಡುಗೆಯಾಗಿದೆ. ಗ್ರಾಮೀಣ ಭಾಗದ ಗ್ರಾಹಕರಿಗೆ ಒಂದೇ ಸೂರಿನಡಿ ಎಲ್ಲಾ ವಸ್ತುಗಳನ್ನು ಪೂರೈಸಲು ಸಜ್ಜಾಗಿರುವ ಈ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ಪುತ್ತೂರಿನ ಮಾಜಿ ಶಾಸಕರಾದ ಸಂಜೀವ ಮಠಂದೂರುರವರು ಮಾತನಾಡಿ, ಒಂದು ಸಂಸ್ಥೆ ಬೆಳೆಯಬೇಕಾದರೆ ಆ ಸಂಸ್ಥೆಯಿಂದ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ಸಿಗುವಂತಾಗಬೇಕು ಈ ನಿಟ್ಟಿನಲ್ಲಿ ಎಚ್.ಎಮ್ ಸಂಸ್ಥೆಯು ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುವ ಮೂಲಕ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ಎಸ್‌ಡಿಪಿಐ ರಾಜ್ಯ ಸಮಿತಿ ಕಾರ್ಯದರ್ಶಿ ರಿಯಾಝ್ ಕಡಂಬುರವರು ಮಾತನಾಡಿ,ಹಳ್ಳಿಹಳ್ಳಿಗೂ ಅಂಬಾನಿ, ಅದಾನಿಯವರ ವ್ಯಾಪಾರ ಕೇಂದ್ರಗಳು ಲಗ್ಗೆ ಇಡುತ್ತಿವೆ. ಮನೆಯಲ್ಲಿಯೇ ಕುಳಿತುಕೊಂಡು ಆನ್‌ಲೈನ್‌ನಲ್ಲಿ ಖರೀದಿಸಲು ಹೊರಟಿದ್ದೇವೆ ಆದರೆ ನಮ್ಮ ಆಪತ್ಕಾಲದಲ್ಲಿ ನಮ್ಮ ನೆರವಿಗೆ ಬರುವವರು ಸ್ಥಳೀಯ ವ್ಯಾಪಾರಿಗಳೇ ಆಗಿದ್ದಾರೆ ಆದ್ದರಿಂದ ಸ್ಥಳೀಯ ವ್ಯಾಪಾರಿಗಳನ್ನು ಬೆಳೆಸಿ, ಪ್ರೋತ್ಸಾಹಿ ಎಂದು ಹೇಳಿ ಶುಭ ಹಾರೈಸಿದರು. ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಕಾರ್ಯಾಧ್ಯಕ್ಷ ಡಾ.ಎಂ.ಎಸ್.ಎಂ ಅಬ್ದುಲ್ ರಶೀದ್ ಝೈನಿ ಮಾತನಾಡಿ, ಕುಂಬ್ರದ ನಾಡಿಮಿಡಿತ ಗೊತ್ತಿರುವ ಪಿ.ಎಂ ಅಬ್ದುಲ್ ರಹೀಮಾನ್ ಹಾಜಿಯವರ ಪುತ್ರರಾದ ಮುಕ್ತಾರ್ ಕುಂಬ್ರರವರು ಆರಂಭಿಸಿದ ಈ ಎಚ್.ಎಮ್ ಸಂಸ್ಥೆಯು ಬೆಳೆಯುತ್ತಿರುವ ಕುಂಬ್ರ ಪೇಟೆಗೆ ಮತ್ತೊಂದು ಕೊಡುಗೆಯಾಗಿದೆ. ಈ ಸಂಸ್ಥೆಯಿಂದ ಗ್ರಾಹಕರಿಗೆ ಉತ್ತಮ ಸೇವೆಗಳು ಸಿಗುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.


ರಂಗಭೂಮಿ ಕಲಾವಿದ ಸುಂದರ ರೈ ಮಂದಾರ, ಕುಂಬ್ರ ಕೆಐಸಿ ಪ್ರಾಧ್ಯಾಪಕ ಅನೀಸ್ ಕೌಸರಿ, ಪ್ರೇರಣ ತರಬೇತುದಾರ ರಫೀಕ್ ಮಾಸ್ತರ್, ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್ ಸುಂದರ ರೈ ಕೊಪ್ಪಳ, ರಾಜಕೀಯ ಮುಖಂಡ ನಝೀರ್ ಮಠ , ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಹಮ್ಮದ್ ಆಲಿ ಮತ್ತಿತರರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಒಳಮೊಗ್ರು ಗ್ರಾಪಂ ಮಾಜಿ ಅಧ್ಯಕ್ಷ ಪಿ.ಎಂ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆ, ಅಕ್ಷಯ ಗ್ರೂಪ್ಸ್‌ನ ಜಯಂತ ನಡುಬೈಲ್, ಉದ್ಯಮಿ ಶಿವರಾಮ ಆಳ್ವ ಸಾಜ, ಅಬೂಬಕ್ಕರ್ ಮುಲಾರ್, ಉದ್ಯಮಿ ಎಂ.ಎಂ.ಸರ್ಪುದ್ದೀನ್, ಧಾರ್ಮಿಕ ಮುಖಂಡ ಅಬೂನಜ ಉಸ್ತಾದ್, ಮಹಮ್ಮದ್ ಮದನಿ ಖತೀಬ್ ಕಟ್ಟತ್ತಾರು, ಅಶೋಕ್ ಪೂಜಾರಿ ಆರ್ಯಾಪು, ಮಹೇಶ್ ರೈ ಕೇರಿ, ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಇಂಡಿಯನ್ ಅರೆಂಜರ‍್ಸ್‌ನ 10ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಇಂಡಿಯನ್ ಅರೆಂಜರ‍್ಸ್‌ನ ಪಾಲುದಾರ ಇಕ್ಬಾಲ್ ಬಾಳಿಲರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಿಕ್ ಕುಟ್ಟಿನೋಪಿನಡ್ಕ ಕಾರ್ಯಕ್ರಮ ನಿರೂಪಿಸಿದರು.


ಉದ್ಘಾಟನಾ ಸಮಾರಂಭಕ್ಕೆ ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಮುಖಂಡರುಗಳಾದ ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈ, ತಾಪಂ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ರಾಜಕೀಯ ಮುಖಂಡರುಗಳಾದ ಪದ್ಮರಾಜ್ ಆರ್ ಪೂಜಾರಿ, ಎಂ.ಎಸ್.ಮಹಮ್ಮದ್, ಕೆದಂಬಾಡಿ ಗ್ರಾಪಂ ಮಾಜಿ ಅಧ್ಯಕ್ಷ ರತನ್ ರೈ ಕುಂಬ್ರ, ಸದಸ್ಯ ಮೆಲ್ವಿನ್ ಮೊಂತೆರೋ, ರಾಜಕೀಯ ಮುಖಂಡ ರಾಜೇಶ್ ರೈ ಪರ್ಪುಂಜ, ರಾಜ್ಯ ಟೆಲಿಕಾಂ ಸಲಹಾ ಸಮಿತಿಯ ಸದಸ್ಯ ನಿತೀಶ್ ಕುಮಾರ್ ಶಾಂತಿವನ, ಪ್ರಗತಿ ಪರ ಕೃಷಿಕ ಕಡಮಜಲು ಸುಭಾಷ್ ರೈ, ರಾಜಕೀಯ ಮುಖಂಡರುಗಳಾದ ಎ.ಕೆ ಜಯರಾಮ ರೈ, ಕಾವು ಹೇಮನಾಥ ಶೆಟ್ಟಿ, ಪುರುಷೋತ್ತಮ ಬೂಡಿಯಾರ್, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಉದ್ಯಮಿ ಅಬ್ದುಲ್ ರಹೀಮಾನ್ ಹಾಜಿ ಮೇನಾಲ, ಉದ್ಯಮಿ ಅಬ್ದುಲ್ ಖಾದರ್ ಮೇರ್ಲ, ಕುಂಬ್ರ ಮೆಸ್ಕಾಂ ಎಇ ಶಿವಶಂಕರ್, ಜೆಇ ರವೀಂದ್ರ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್, ಕುಂಬ್ರ ಮರ್ಕಝ್ ಹುದಾ ಮಹಿಳಾ ಕಾಲೇಜ್ ಪ್ರಾಂಶುಪಾಲೆ ಸಂದ್ಯಾ ಪಿ.ಶೆಟ್ಟಿ, ಕೆ.ಎಂ ಹನೀಫ್ ಮಾಡಾವು, ಹೋಟೆಲ್ ಉದ್ಯಮಿ ರಫೀಕ್ ಅಲ್‌ರಾಯ, ರಾಜಕೀಯ ಮುಖಂಡ ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ಬಶೀರ್ ಕೌಡಿಚ್ಚಾರ್, ಕೊಡುಗೈ ದಾನಿ ಸಂತೋಷ್ ಕುಮಾರ್ ರೈ ಇಳಂತಾಜೆ, ಎಸ್.ಎಂ ಮಹಮ್ಮದ್ ಕುಂಞ ಕುಂಬ್ರ, ವಾಸು ಪೂಜಾರಿ ಗುಂಡ್ಯಡ್ಕ, ಇಸ್ಮಾಯಿಲ್ ಹಾಜಿ ಕೌಡಿಚ್ಚಾರ್, ಕೇಂದ್ರ ಜಮಾಅತ್ ಅಧ್ಯಕ್ಷ ಎಲ್.ಟಿ ರಝಾಕ್ ಹಾಜಿ ಶಿವರಾಮ ಮಣಿಯಾಣಿ ಕುರಿಂಜ, ರಾಜೀವ ರೈ ಕುತ್ಯಾಡಿ, ಉದ್ಯಮಿ ಮೋಹನದಾಸ ರೈ ಕುಂಬ್ರ, ಶಶಿಕಿರಣ್ ರೈ ನೂಜಿಬೈಲು, ಜೋಕಿಂ ಡಿ’ಸೋಜಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ, ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್ ಮಾಲಕ ಫ್ಯಾಮಿಲಿ ಹಮೀದ್ ಮಾಡಾವು, ಮಧುರ ಹನೀಫ್, ಮಹಮ್ಮದ್ ಕುಂಞ ಹಾಜಿ ಈಶ್ವರಮಂಗಲ, ಶೀನಪ್ಪ ನಾಯ್ಕ ಮುಡಾಲ, ಬದ್ರುನ್ನೀಸಾ ಪರ್ಪುಂಜ, ಕುಂಬ್ರ ಸೆಂಟರ್ ಮಾಲಕ ಹನೀಫ್ ಹಾಜಿ ಪಿ.ಎಂ ಅರಿಯಡ್ಕ, ಅಶೋಕ್ ರೈ ದೇರ್ಲ, ಮಹಮ್ಮದ್ ಉಜಿರೋಡಿ, ಹಸೈನಾರ್ ಪಯಂದೂರು, ಮಹಮ್ಮದ್ ಮುಡಾಲ, ಮಹಮ್ಮದ್ ಅಡ್ಕ, ಚಂದ್ರ ಜಿ ಎಣ್ಮೂರು, ಎ.ಕೆ ಅಬ್ದುಲ್ ಕುಂಞ, ಹಾರೀಸ್ ದರ್ಖಾಸ್, ರಫೀಕ್ ಬಂಡಸಾಲೆ, ಅಶಿಕ್ ಎ.ಆರ್, ಹಮೀದ್, ರಫೀಕ್ ಕಡ್ತಿಮಾರ್, ರಫೀಕ್ ಜಾರತ್ತಾರು, ಮಾನು ಜಾರುತ್ತಾರು,ವಸಂತ ರೈ ಕುತ್ಯಾಡಿ, ಕುಂಬ್ರ ವರ್ತಕರ ಸಂಘದ ಭವ್ಯ ರೈ, ಉದಯ ಆಚಾರ್ಯ ಕೃಷ್ಣನಗರ, ಶರೀಫ್ ಕಟ್ಟತ್ತಾರು, ರಾಝಿಕ್ ಶೇಖಮಲೆ, ರಾಘವ ಪೂಜಾರಿ ಪಾಪೆಮಜಲು, ಹರೀಶ್ ರೈ ಜಾರತ್ತಾರು, ನಗರಸಭಾ ಕೌನ್ಸಿಲರ್ ರಿಯಾಝ್, ಕೆಪಿಎಸ್ ಶಾಲಾ ಶಿಕ್ಷಕ ವೃಂದದವರು, ಕುಂಬ್ರ ಎಸ್‌ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ವರ್ಗದವರು, ಕುಂಬ್ರ ವರ್ತಕರ ಸಂಘದ ಪದಾಧಿಕಾರಿಗಳು ಸೇರಿದಂತೆ ನೂರಾರು ಮಂದಿ ಗಣ್ಯರು, ಸ್ಥಳೀಯರು ಆಗಮಿಸಿ ನೂತನ ಸಂಸ್ಥೆಗೆ ಶುಭ ಹಾರೈಸಿದರು. ಎಚ್.ಎಮ್ ಹೋಮ್ ಅಪ್ಲೈಯನ್ಸಸ್‌ನ ಮಾಲಕರಾದ ಮುಕ್ತಾರ್ ಕುಂಬ್ರರವರು ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ, ಸಹಕಾರ ಕೋರಿದರು. ಸತ್ತಾರ್ ಪಿ.ಎಂ ಕುಂಬ್ರ ಸಹಕರಿಸಿದ್ದರು.



ಎಲ್ಲಾ ವಸ್ತುಗಳ ಮೇಲೂ ಶೇ.10-80 ರಿಯಾಯಿತಿ ಬ್ರಾಂಡೆಡ್ ಕಂಪೆನಿಗಳ ಉತ್ಪನ್ನಗಳು ಲಭ್ಯ
ಎಚ್.ಎಮ್ ಹೋಮ್ ಅಪ್ಲೈಯನ್ಸಸ್ ಆಂಡ್ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಜಗತ್ತಿನ ಎಲ್ಲಾ ಬ್ರಾಂಡೆಡ್ ಕಂಪೆನಿಗಳ ಉತ್ಪನ್ನಗಳು ಲಭ್ಯವಿದ್ದು ವಿಶೇಷವಾಗಿ ಎಲ್‌ಜಿ, ಸಮ್‌ಸಂಗ್, ಟಾಟ, ವಯರ್‌ಫೂಲ್, ಕೆನ್‌ಸ್ಟಾರ್, ವಿ ಗಾರ್ಡ್, ಕೆನ್ಟ್, ಅಕ್ವಗಾರ್ಡ್,ಕ್ರಾಪ್ಟನ್, ಒರಿಯನ್‌ಟ್, ಉಷಾ, ಸುಜಾತ, ಟಿಸಿಎಲ್, ಪಿಲಿಪ್ಸ್, ಸ್ಟಾರ್ ಪಿಜಿಯನ್ ಇತ್ಯಾದಿ ಬ್ರ್ಯಾಂಡೆಡ್ ಕಂಪೆನಿಗಳ ರೆಫ್ರಿಜರೇಟರ್, ವಾಶಿಂಗ್ ಮೆಷಿನ್, ಏರ್ ಕೂಲರ್, ಮಿಕ್ಸಿ, ಫ್ಯಾನ್, ಟಿ.ವಿ, ಹೋಮ್ ಥಿಯೇಟರ್, ಹೊಲಿಗೆ ಯಂತ್ರ ಹೀಗೆ ಮನೆಗೆ ಬೇಕಾದ ಎಲ್ಲಾ ಥರದ ಐಟಮ್‌ಗಳು ಇಲ್ಲಿ ಲಭ್ಯವಿದೆ. ಇದಲ್ಲದೆ ಗೇರ್ ಸೈಕಲ್, ಮಕ್ಕಳ ಟಾಯ್ಸ್‌ಗಳು, ತೊಟ್ಟಿಲು ಕೂಡ ಲಭ್ಯವಿದೆ. ರೆಫ್ರಿಜರೇಟರ್‌ಗಳ ಮೇಲೆ ಶೇ.30 ರಿಂದ 40 ರಿಯಾಯಿತಿ ಇದಲ್ಲದೆ ಎಲ್ಲಾ ವಸ್ತುಗಳ ಮೇಲೆ ಶೇ.10 ರಿಂದ 80 ಪರ್ಸೆಂಟ್ ರಿಯಾಯಿತಿ, ಟಿವಿಗಳ ಮೇಲೆ ಶೇ.30 ರಿಂದ 50 ರ ತನಕ ರಿಯಾಯಿತಿ ಸಿಗಲಿದೆ. ಇಂದು ಖರೀದಿಸಿ ನಾಳೆ ಪಾವತಿಸಿ ಎಂಬAತೆ ಸುಲಭ ಕಂತುಗಳಲ್ಲಿ ನಿಮಗಿಷ್ಟವಾದ ಐಟಮ್‌ಗಳನ್ನು ಖರೀದಿಸಿ ಬಜಾಜ್, ಎಚ್.ಡಿ.ಬಿ ಫೈನಾನ್ಸ್ ಕಂಪೆನಿಗಳಿಂದ ಸಾಲ ಸೌಲಭ್ಯದ ವ್ಯವಸ್ಥೆ ಕೂಡ ಇಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9187376838 ಗೆ ಇಂದೇ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಯು.ಟಿ ಖಾದರ್‌ಗೆ ಸನ್ಮಾನ
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಆರೋಗ್ಯ ಸಚಿವರಾಗಿ ಮೊದಲ ಬಾರಿಗೆ ಕುಂಬ್ರಕ್ಕೆ ಆಗಮಿಸಿದ ಯು.ಟಿ ಖಾದರ್ ಅವರಿಗೆ ಎಚ್.ಎಮ್ ಹೋಮ್ ಅಪ್ಲೈಯನ್ಸಸ್ ಮತ್ತು ಇಲೆಕ್ಟ್ರಾನಿಕ್ಸ್‌ನ ಪರವಾಗಿ ಹಾಗೇ ಸಾರ್ವಜನಿಕರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here