ಹೊಸ ಬೆಳಕು ಟ್ರಸ್ಟ್‌ನ 62ನೇ ಸಹಾಯ ಯೋಜನೆ – ಸಹಾಯಧನ ಹಸ್ತಾಂತರ

0

ಪುತ್ತೂರು: ಹೊಸ ಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟ್ (ರಿ), ಆರ್ಲಪದವು ಪಾಣಾಜೆ ವತಿಯಿಂದ 62ನೇ ಸಹಾಯ ಯೋಜನೆಯನ್ನು ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಬಾಂತೋಡು ನಿವಾಸಿ ಕು. ಜ್ಯೋತಿ ಅವರಿಗೆ ಹಸ್ತಾಂತರಿಸಲಾಯಿತು.

ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಜ್ಯೋತಿ ಅವರ ಚಿಕಿತ್ಸೆಗೆ ಸಹಾಯ ಕೋರಿ ಕುಟುಂಬಸ್ಥರು ಟ್ರಸ್ಟ್‌ಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಟ್ರಸ್ಟ್‌ನ ಸಹೃದಯಿ ದಾನಿಗಳು ಸೇರಿ ಒಟ್ಟು 20,400 ರೂ. ಸಂಗ್ರಹಿಸಿದ್ದರು.ಈ ಧನಸಹಾಯವನ್ನು ಇಂದು ನವೀನ ನಗರ, ಸಿಟಿಗುಡ್ಡೆ, ಪುತ್ತೂರು ಹಾಗೂ ಭಾಸ್ಕರ ಯಾದವ್, ದರ್ಬೆ ಅವರ ಉಪಸ್ಥಿತಿಯಲ್ಲಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.ಟ್ರಸ್ಟ್ ಪದಾಧಿಕಾರಿಗಳು ಈ ಸೇವಾಕಾರ್ಯಕ್ಕೆ ಸಹಕರಿಸಿದ ಎಲ್ಲಾ ದಾನಿಗಳಿಗೂ ಕೃತಜ್ಞತೆ ಸಲ್ಲಿಸಿದರು

LEAVE A REPLY

Please enter your comment!
Please enter your name here