







ಪುತ್ತೂರು: ಶಿವಸದನ ಹಿರಿಯ ನಾಗರಿಕರ ಮತ್ತು ವಿಶೇಷ ಚೇತನರ ವಸತಿ ನಿಲಯದಲ್ಲಿ ಜು.7ರಂದು ಭಕ್ತಿ ಮತ್ತು ಅನ್ನದಾನದ ಸಂಗಮದ ವಿಶೇಷ ಕಾರ್ಯಕ್ರಮ ನಡೆಯಿತು.



ಶಿವಸದನದ ನಿವಾಸಿ ಪಡುಮಲೆ ರಮಾದೇವಿ ಮತ್ತು ಶ್ರೀ ಲಕ್ಷ್ಮೀನಾರಾಯಣ ರಾವ್ ದಂಪತಿಯವರು ತಮ್ಮ ಜೀವನದ ಶುಭ ಘಳಿಗೆಯ ಪ್ರಯುಕ್ತ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.ಶೃಂಗೇರಿ ಶ್ರೀಗಳ ದಿವ್ಯಾಶೀರ್ವಾದ ಪಡೆದ ಖ್ಯಾತ ಸಂಕೀರ್ತನಾಕಾರರಾದ ಮಧ್ವೇಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆ ಅವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಚಿನ್ ಉಪ್ಪಳ ತಬಲಾದಲ್ಲಿ ಮತ್ತು ಕಿಶೋರ್ ಪೆರ್ಲ ಹಾರ್ಮೋನಿಯಂನಲ್ಲಿ ಸಹಕರಿಸಿದರು.



ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷೆ ಸುಮಂಗಲ ಪ್ರಭಾಕರ್ ಸ್ವಾಗತಿಸಿದರು. ಟ್ರಸ್ಟಿನ ಗೌರವಾಧ್ಯಕ್ಷ ರಘುನಾಥ್ ರಾವ್ ದಂಪತಿ, ಖಜಾಂಚಿ ಕರುಣ್ ಬೆಳ್ಳೆ, ಟ್ರಸ್ಟ್ ಸದಸ್ಯರಾದ ಚೇತನ್ ಶರ್ಮಾ, ಸಾಯಿ ಪ್ರಸಾದ್, ಗಾಯತ್ರಿ ಪಿಲಿಂಜ, ಮೋಹನ್ ದಾಸ್ ಪಿಲಿಂಜ, ಶ್ರೀಪತಿ ರಾವ್ ದಂಪತಿ, ಸುಬ್ರಹ್ಮಣ್ಯ ಸಭಾದ ಸದಸ್ಯರು, ದಿನಕರ್ ರಾವ್ ಕುಟುಂಬ, ಸತ್ಯನಾರಾಯಣ ರಾವ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ವೇದಮೂರ್ತಿ ಸೂರ್ಯ ಭಟ್ ದಂಪತಿ, ರಾಧಾಕೃಷ್ಣ ಭಟ್ ದಂಪತಿ ಅವರ ಜಂಟಿ ವೇದಘೋಷ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಕೋಶಾಧಿಕಾರಿ ದಿನಕರ್ ರಾವ್ ಕೃತಜ್ಞತೆ ಸಲ್ಲಿಸಿದರು.










