






ಪುತ್ತೂರು:ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ, ದೇವಸ್ಥಾನ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಸುಮಾರು ರೂ.3 ಕೋಟಿ ವೆಚ್ಚದಲ್ಲಿ ಮಹಿಳಾ ಸ್ಟೇಷನ್ ಬಳಿಯಿಂದ ಚಿಕ್ಕಪುತ್ತೂರು ಸಂಪರ್ಕಿಸುವ 1 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಟೋಟಲ್ ಸ್ಟೇಷನ್ ಮಾರ್ಕಿಂಗ್ ಜು.6ಕ್ಕೆ ನಡೆಯಿತು.


ಮಹಿಳಾ ಸ್ಟೇಷನ್ ಬಳಿಯ ಸೇತುವೆಯ ಪಕ್ಕದಲ್ಲಿ ದೇವಳದ ಬದಿಯಲ್ಲಿ ಹಾದು ಹೋಗುವ ರಾಜಕಾಲುವೆ ಬಳಿಯಿಂದ ಈ ರಸ್ತೆ ಹಾದು ಹೋಗಲಿದ್ದು, ಚಿಕ್ಕಪುತ್ತೂರು ಸ್ಮಶಾನದ ಎದುರು ಹೋಗುವ ರಸ್ತೆಗೆ ಸಂಪರ್ಕಗೊಳ್ಳಲಿದೆ.ವೇಗಗತಿಯಲ್ಲಿ ಕಾಮಗಾರಿ ನಡೆಸುವ ನಿಟ್ಟಿನಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಕೆಲ ದಿನಗಳ ಹಿಂದೆ ಇಂಜಿನಿಯರ್‌ಗಳ ಜೊತೆ ಸ್ಥಳ ಪರಿಶೀಲನೆ ನಡೆಸಿದ್ದರು.ಇದೀಗ ಟೋಟಲ್ ಸ್ಟೇಷನ್ ಮಾರ್ಕಿಂಗ್ ಆರಂಭಿಸಲಾಗಿದೆ.ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಅರ್ಬನ್ ಫಾರ್ಮ್ಸ್‌ನ ಇಂಜಿನಿಯರ್ ಗಣೇಶ್ ಭಟ್, ಗುತ್ತಿಗೆದಾರರಾದ ಇಲೈಟ್ ಕನ್‌ಸ್ಟ್ರಕ್ಷನ್ಸ್ ನ ಮಾಲಿಕರು, ಸರ್ವೇಯರ್, ಇಂಜಿನಿಯರ್‌ಗಳು ಉಪಸ್ಥಿತರಿದ್ದರು.













