






ಪುತ್ತೂರು :ನರಿಮೊಗರಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ 2026-27ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ ಸಮಾರಂಭವು ಜು.6ರಂದು ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ ಜರುಗಿತು.


ಸಂಸತ್ತಿನ ಪ್ರಥಮ ಸಮಾವೇಶದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಪ್ರಸನ್ನ ಕೆ ರವರು ಶಾಲಾ ನಾಯಕ ಪ್ರತೀಕ್ ಟಿ 10ನೇ ತರಗತಿ ಮತ್ತು ಉಪ ನಾಯಕ ವಿಧಾತ್ ರೈ 9ನೇ ತರಗತಿ
ಹಾಗೂ ಸಂಪುಟ ದರ್ಜೆ ಸಚಿವರಿಗೆ , ಸಹಾಯಕ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.




ಶಾಲಾ ಸಂಸತ್ತಿನ ಸಭಾಪತಿಯಾಗಿ ಪೃಥ್ವಿ ಕೃಷ್ಣ ಶರ್ಮಾ ಕೆ 10ನೇ ತರಗತಿ,ಶಿಕ್ಷಣ ಸಚಿವರಾಗಿ ಜಾಗೃತಿ ವಿ ಎನ್ 10ನೇ ತರಗತಿ,ಶಿಸ್ತು ಸಚಿವೆ ಯಾಗಿ ಸಾನಿಧ್ಯ 10ನೇ ತರಗತಿ, ಸಾಂಸ್ಕೃತಿಕ ಸಚಿವರಾಗಿ ತರುಣ್ 10ನೇ ತರಗತಿ,ಶುಚಿತ್ವ ಸಚಿವರಾಗಿ ಪ್ರಾಜ್ಞಾ ಶರ್ಮ 10ನೇ ತರಗತಿ,ಕ್ರೀಡಾ ಸಚಿವರಾಗಿ ಪ್ರಜ್ವಲ್ ಕೆ ಆರ್ 10ನೇ ತರಗತಿ, ತೋಟಗಾರಿಕ ಸಚಿವರಾಗಿ ಸುಪ್ರೀತ್ 10ನೇ ತರಗತಿ, ನೀರಾವರಿ ಸಚಿವರಾಗಿ ಪ್ರಥಮ್ ಕಾಯರ್ಗ 10ನೇ ತರಗತಿ, ಆರೋಗ್ಯ ಸಚಿವೆಯಾಗಿ ಪ್ರಾಪ್ತಿ ಪುತ್ತಿಲ 10ನೇ ತರಗತಿ, ಭಜನಾ ಸಚಿವರಾಗಿ ಸಾಯಿ ಸಂಚಿತ್,ಆಹಾರ ಸಚಿವರಾಗಿ ಧ್ಯಾನ್ ರೈ 10ನೇ ತರಗತಿ ಆಯ್ಕೆಯಾಗಿರುತ್ತಾರೆ.
ಮುಖ್ಯ ಅತಿಥಿ, ಶಾಲಾ ಕೋಶಾಧಿಕಾರಿ ಹರೀಶ್ ಪುತ್ತೂರಾಯ ಮಾತನಾಡಿ ಯಾವುದೇ ಸಂದರ್ಭದಲ್ಲಿ ಶಾಲೆಯ ನಿಯಮಕ್ಕೆ ವಿರುದ್ಧವಾಗಿ ನಡೆಯದೆ ನಿಮ್ಮ ನಿಮ್ಮ ವಿಭಾಗದ ಜವಾಬ್ದಾರಿ ಯನ್ನು ಅರಿತು ಸಿಕ್ಕ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಮುಂದೆ ಸಾಗಿ ಎಂದರು.

ಮುಖ್ಯ ಅಥಿತಿ ಶಾಲಾ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಕೆದಿಲಾಯರು ಮಾತನಾಡುತ್ತಾ ಚುನಾಯಿತ ಮಂತ್ರಿಗಳು ನಿಮ್ಮ ನಿಮ್ಮ ಹುದ್ದೆಯ ಚೌಕಟ್ಟಿನಲ್ಲಿ ಉತ್ತಮ ಸೇವೆ ಕೊಡಬೇಕು. ನಾಯಕ ಸರಿಯಾದ ಜವಾಬ್ದಾರಿ ನಿರ್ವಹಿಸಿ ಅದರ ಜೊತೆಗೆ ವಿದ್ಯಾರ್ಥಿಗಳ ಜವಾಬ್ದಾರಿ, ಶಿಸ್ತುಪಾಲನೆಯ ಬಗ್ಗೆ ವಿವರಿಸಿದರು.
ಶಾಲಾ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಮಾತನಾಡಿ ಎಲ್ಲರಿಗೂ ಒಳ್ಳೆಯದಾಗುವ ಹಾಗೆ ಉತ್ತಮ ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡಿ ಶಾಲೆಗೆ ಮತ್ತು ದೇಶಕ್ಕೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು.

ವಿದ್ಯಾರ್ಥಿನಿಯರಾದ ಅಹಲ್ಯ ಬನಾರಿ ಹಾಗೂ ಗಾನವಿ ಪ್ರಾರ್ಥಿಸಿದರು. ದಾನ್ವಿ ಶೆಟ್ಟಿ ಸ್ವಾಗತಿಸಿದರು.10ನೇ ತರಗತಿ ವಿದ್ಯಾರ್ಥಿನಿ ಸಮೃದ್ಧಿ ಕೆ ಎನ್ ಕಾರ್ಯಕ್ರಮ ನಿರೂಪಿಸಿದರು. ಪ್ರತೀಕ್ ವಂದಿಸಿದರು. ಶಾಲಾ ಸಹ ಶಿಕ್ಷಕಕರಾದ ಆನಂದ್ ಆರ್ , ಸುಚೇತ್ ಎಂ , ಸೌಮ್ಯ ಎ ಎಂ ಕಾರ್ಯಕ್ರಮ ನಿರ್ವಹಿಸಿ ಸಂಸತ್ತಿನ ಸಮಾವೇಶವನ್ನು ಸಂಯೋಜಿಸಿದರು.










