






ಪುತ್ತೂರು: ಶ್ರೀ ಚಾಮುಂಡೇಶ್ವರಿ ಜನಾರ್ಪಣ ಸೇವಾ ಟ್ರಸ್ಟ್ ರಾಮನಗರ ಉಪ್ಪಿನಂಗಡಿ ಇದರ ವತಿಯಿಂದ ಬನ್ನೂರಿನ ಕರ್ಮಲ ನಿವಾಸಿ, ಡಯಾಬಿಟಿಸ್ನಿಂದ ಕಾಲು ಕಳೆದುಕೊಂಡ ಮಹಾವೀರ್ ಜೈನ್ ಎಂಬವರಿಗೆ ವಸಂತಿ ರಮಾನಂದ್ ಭೀಮಂಡೆ ಇವರು ಕೊಡುಗೆಯಾಗಿ ನೀಡಿದ ವೀಲ್ಚೆಯರ್ ಅವರ ನಿವಾಸಕ್ಕೆ ತೆರಲಿ ವಿತರಿಸಲಾಯಿತು.


ಚಾಮುಂಡೇಶ್ವರಿ ಜನಾರ್ಪಣ ಟ್ರಸ್ಟ್ನ ಗೌರವಾಧ್ಯಕ್ಷರಾಗಿರುವ ಕಡಬದ ಉಪತಹಶೀಲ್ದಾರ್ ಕೆ. ಗೋಪಾಲ್ ಹಾಗೂ ಟ್ರಸ್ಟ್ನ ಅಧ್ಯಕ್ಷರು, ಉಪ್ಪಿನಂಗಡಿ ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿರುವ ಜಯರಾಜ್ ಅಮೀನ್ ಹಾಗೂ ಟ್ರಸ್ಟ್ನ ಸದಸ್ಯರು ಉಪಸ್ಥಿತರಿದ್ದರು.













