ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರಾರಂಭೋತ್ಸವ

0

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಆರಂಭೋತ್ಸವವನ್ನು ಪ್ರತಿವರ್ಷದಂತೆ ಗಣಪತಿ ಹೋಮ ಹಾಗೂ ಸರಸ್ವತಿ ಪೂಜೆಯೊಂದಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರಿನವರಾದ ಮೂಕಾಂಬಿಕಾ ಶಿಲ್ಪಕಲಾ ಕೇಂದ್ರ ಕಾರ್ಕಳ ಅದರ ಮಾಲೀಕರಾದ ಕೋಟಿ ಮೂಲೆ ಶ್ರೀ ಗುಣವಂತೇಶ್ವರ ಭಟ್ ಹಾಗೂ ಅವರ ಸುಪುತ್ರ ಪಾಲಿಟೆಕ್ನಿಕ್ ಹಿರಿಯ ವಿದ್ಯಾರ್ಥಿ ಶ್ರೀ ವಿಜಯ ಶಂಕರ ಇವರು ಕೊಡುಗೆಯಾಗಿ ನೀಡಿದ ಸರಸ್ವತಿ ವಿಗ್ರಹವನ್ನು ಕಾಲೇಜಿನ ಆವರಣದಲ್ಲಿ ಸ್ಥಾಪಿಸಲಾಯಿತು.

 ಭಾರತ ಮಾತೆಗೆ ಪುಷ್ಪಾರ್ಚನೆಗೈದು ಪ್ರಾರಂಭಿಸಿದ ಈ ಕಾರ್ಯಕ್ರಮದಲ್ಲಿ ಅತಿಥಿಗಳಾದ ಡಾI ಕೆ ಎಂ ಕೃಷ್ಣ ಭಟ್ ಕಾರ್ಯದರ್ಶಿಗಳು ವಿವೇಕಾನಂದ ವಿದ್ಯಾವರ್ಧಕ ಸಂಘ ಮಾತನಾಡುತ್ತ “ವಿದ್ಯಾರ್ಥಿಗಳು ಗುರಿ, ಆತ್ಮ ವಿಶ್ವಾಸ, ಸಕಾರಾತ್ಮಕ ಮನೋಭಾವ, ಸಮಯ ಪಾಲನೆ ಹಾಗೂ ಶಿಸ್ತಿನೊಂದಿಗೆ ಅಧ್ಯಯನ ನಡೆಸಿದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು. ತಾಂತ್ರಿಕ ಶಿಕ್ಷಣದ ಜೊತೆಗೆ ವ್ಯಕ್ತಿತ್ವ ವಿಕಸನ, ನೈತಿಕ ಆರ್ಥಿಕ ಮೌಲ್ಯಗಳು ಮತ್ತು ಉದ್ಯೋಗ ಕೌಶಲ್ಯಗಳನ್ನು ಉಳಿಸಿಕೊಂಡಾಗ ನಿಮಗೆ ಇತಿಹಾಸ ನಿರ್ಮಾಣ ಮಾಡುವ ದೊಡ್ಡ ಅವಕಾಶ ಇದೆ” ಎಂದು ಶುಭ ಹಾರೈಸಿದರು.

 ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ ಮಣಿಲ ಮಾತನಾಡುತ್ತಾ “ಹೊಸದಾಗಿ ಸೇರ್ಪಡೆಗೊಂಡ ನೀವು ಕಾಲೇಜಿನಲ್ಲಿ ಪ್ರಾರಂಭಿಸಿದ ಹೊಸ ಕೋರ್ಸ್ ಗಳಿಂದ ಪ್ರಯೋಜನ ಪಡೆದು ಹೊಸ ಆವಿಷ್ಕಾರವನ್ನು ಮಾಡುವಂತಾಗಲಿ” ಎಂದು ಹಾರೈಸಿದರು.

 ಕಾರ್ಯಕ್ರಮದ ಹಾಗೂ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡುತ್ತ “ವಿದ್ಯಾರ್ಥಿಗಳು ಕಾಲೇಜು ಜೀವನದಲ್ಲಿ ಉತ್ತಮ ಮನೋಭಾವ, ಶಿಸ್ತು, ಆತ್ಮವಿಶ್ವಾಸ ಹಾಗೂ ಗುರಿಯನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ದೃಷ್ಟಿಕೋನವನ್ನು ಸಕಾರಾತ್ಮಕವಾಗಿ ರೂಪಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು. ಮುಂದಿನ ಮೂರು ವರ್ಷಗಳನ್ನು ಸದುಪಯೋಗಪಡಿಸಿಕೊಂಡು ಜ್ಞಾನ, ಕೌಶಲ್ಯ ಮತ್ತು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

 ಈ ಸಂದರ್ಭದಲ್ಲಿ ಕಾಲೇಜಿಗೆ ಸರಸ್ವತಿ ವಿಗ್ರಹವನ್ನು ದೇಣಿಗೆ ನೀಡಿದ ಮೂಕಾಂಬಿಕಾ ಶಿಲ್ಪಕಲಾ ಕೇಂದ್ರ ಕಾರ್ಕಳ ಇದರ ಮಾಲಕ ಗುಣವಂತೇಶ್ವರ, ಅವರ ಮಗನಾದ ವಿಜಯಶಂಕರ ಕಾಲೇಜಿನ ಹಿರಿಯ ವಿದ್ಯಾರ್ಥಿ ಅವರನ್ನು ಸನ್ಮಾನಿಸಲಾಯಿತು.

 

LEAVE A REPLY

Please enter your comment!
Please enter your name here