







ಪುತ್ತೂರು : ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಯುವಮೋರ್ಚ ಪ್ರಧಾನ ಕಾರ್ಯದರ್ಶಿಯಾಗಿ ವಿಟ್ಲದ ಬೊಡ್ಡೋಣಿ ನಿವಾಸಿ ನಿತೀನ್ ಬೊಡ್ಡೋಣಿ ಅವರು ಆಯ್ಕೆಗೊಂಡಿದ್ದಾರೆ.


ನಿತೀನ್ ಅವರು ಯುವಮೋರ್ಚ ಉಪಾಧ್ಯಕ್ಷರಾಗಿದ್ದು ತೆರವಾದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. ನಿತೀನ್ ಅವರ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಯುವಮೋರ್ಚ ಗ್ರಾಮಾಂತರ ಮಂಡಲ ಅಧ್ಯಕ್ಷ ಶಿಶಿರ್ ಪೆರ್ವೋಡಿ ಘೋಷಣೆ ಮಾಡಿದರು.













