ಸಮಸ್ಯೆಗೆ ಪರಿಹಾರವೊದಗಿಸಿದ ಯುವಕರು

0

ಉಪ್ಪಿನಂಗಡಿ: ಗಾಂಧಿಪಾರ್ಕ್ ಬಳಿಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಉಂಟಾಗಿದ್ದ ಕೃತಕ ತೋಡಿನ ಸಮಸ್ಯೆಯನ್ನು ಸಾರ್ವಜನಿಕರ ದೂರು ಮತ್ತು ಗುತ್ತಿಗೆದಾರ ಸಂಸ್ಥೆಯ ತ್ವರಿತ ಕ್ರಮದಿಂದ ಬಗೆಹರಿಸಲಾಗಿದೆ. ಇಲ್ಲಿನ ಗಾಂಧಿಪಾರ್ಕ್‌ನಲ್ಲಿ ಹೆದ್ದಾರಿಯ ಸರ್ವೀಸ್ ರಸ್ತೆಯಿಂದ ಬ್ಯಾಂಕ್ ರಸ್ತೆಗೆ ಪ್ರವೇಶಿಸುವ ಜಾಗದಲ್ಲಿ ಅಪೂರ್ಣ ಕಾಮಗಾರಿಯಿಂದಾಗಿ ಸಣ್ಣ ಕೃತಕ ತೋಡು ನಿರ್ಮಾಣವಾಗಿತ್ತು. ಮಳೆ ನೀರು ಹರಿಯುತ್ತಿದ್ದರಿಂದ ಅಲ್ಲಿ ಗುಂಡಿ ನಿರ್ಮಾಣಗೊಂಡಿತ್ತು.

ಸರ್ವೀಸ್ ರಸ್ತೆಯಿಂದ ಬ್ಯಾಂಕ್ ರಸ್ತೆಗೆ ಪ್ರವೇಶಿಸುವಲ್ಲಿ ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ ಅಲ್ಲಿ ಸಣ್ಣ ಕೃತಕ ತೋಡೊಂದು ನಿರ್ಮಾಣವಾಗಿತ್ತು. ಇದರಿಂದ ಕಾರು ಸೇರಿದಂತೆ ಸಣ್ಣ ವಾಹನಗಳು ಸಾಗುವಾಗ ಅದರ ಅಡಿಭಾಗ ರಸ್ತೆಗೆ ತಾಗುತ್ತಿತ್ತಲ್ಲದೆ. ಈ ತೋಡಲ್ಲಿ ಮಳೆ ಬಂದು ನೀರು ಹರಿಯುತ್ತಿರುವಾಗ ಇಲ್ಲಿನ ಗುಂಡಿಯ ಅರಿವಿಲ್ಲದೆ ವಾಹನಗಳು ಗುಂಡಿಗೆ ಬೀಳುವ ಸಂಭವವೂ ಇತ್ತು. ಅಲ್ಲದೇ ಇಲ್ಲಿ ವಾಹನಗಳ ಟ್ರಾಫಿಕ್ ಜಾಮ್‌ಗೂ ಕಾರಣವಾಗುತ್ತಿತ್ತು. ಇದನ್ನು ಮನಗಂಡ ಸಾಮಾಜಿಕ ಕಾರ್ಯಕರ್ತ ಚಿದಾನಂದ ಪಂಚೇರು ಅವರು ಸಮಸ್ಯೆಯ ಬಗ್ಗೆ ಹೆದ್ದಾರಿ ಗುತ್ತಿಗೆದಾರ ಸಂಸ್ಥೆಯ ಅಧಿಕಾರಿಗಳಿಗೆ ತಿಳಿಸಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಗುತ್ತಿಗೆದಾರ ಸಂಸ್ಥೆಯ ಸಿಬ್ಬಂದಿ ಈ ಸಮಸ್ಯೆಯನ್ನು ಪರಿಹರಿಸಿಕೊಟ್ಟರು.

LEAVE A REPLY

Please enter your comment!
Please enter your name here