ಪುತ್ತೂರಿನಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆ : ಬಿಜೆಪಿಯಿಂದ ಪ್ರತಿಭಟನೆ ಎಚ್ಚರಿಕೆ

0

ಪುತ್ತೂರು:ಒಂದಿಲ್ಲೊಂದು ನೆಪವೊಡ್ಡಿ ವಿದ್ಯುತ್ ಪೂರೈಕೆ ಕಡಿತ ಮಾಡುತ್ತಿರುವುದರಿಂದ ಕಳೆದ ಎರಡು ದಿನಗಳಿಂದ ನಾಗರಿಕರು ನರಕಯಾತನೆ ಅನುಭವಿಸುವ ಸ್ಥಿತಿ ಪುತ್ತೂರು ಪಟ್ಟಣಪ್ರದೇಶದಲ್ಲೇ ನಿರ್ಮಾಣವಾಗಿದೆ.ತಕ್ಷಣ ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಬಿಜೆಪಿ ಉಗ್ರ ಪ್ರತಿಭಟನೆ ಮಾಡಲಿದೆ ಎಂದು ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ತಿಳಿಸಿದ್ದಾರೆ.


ಕಳೆದ ಒಂದು ವಾರದಿಂದ ಸಣ್ಣಪುಟ್ಟ ಮಳೆಗೂ ಆಗಾಗ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ.ಕಡಿತಗೊಂಡ ಬಳಿಕ ವಿದ್ಯುತ್ ಮತ್ತೆ ಬರುವುದು ಗ್ಯಾರಂಟಿಯಿಲ್ಲ.ಕಡಿತಗೊಂಡ ವಿದ್ಯುತ್‌ನ್ನು ಸರಬರಾಜು ಮಾಡುವಲ್ಲಿ ಅಧಿಕಾರಿಗಳು ತೋರುತ್ತಿರುವ ನಿಷ್ಕಾಳಜಿಗೆ ಜನಸಾಮಾನ್ಯರು ಹಿಡಿಶಾಪ ಹಾಕುವಂತಾಗಿದೆ.ವ್ಯಾಪಾರಿಗಳು,ಸಾರ್ವಜನಿಕರು,ಬ್ಯಾಂಕ್‌ಗಳು,ಸರಕಾರಿ ಮತ್ತು ಖಾಸಗಿ ಕಚೇರಿಗಳು ಸೇರಿ ಇತರ ಎಲ್ಲಾ ಸೇವಾ ಸಂಸ್ಥೆಗಳು ತೀವ್ರ ಸಂಕಷ್ಟವನ್ನು ಎದುರಿಸುತ್ತಿವೆ.ವಿದ್ಯುತ್ ವ್ಯತ್ಯಯದಿಂದ ವ್ಯಾಪಾರಿಗಳಿಗೆ ಆರ್ಥಿಕ ನಷ್ಟ ಸಂಭವಿಸುತ್ತಿದೆ.ಈ ಗಂಭೀರ ಸಮಸ್ಯೆಗೆ ಪರಿಹಾರ ನೀಡದಿದ್ದಲ್ಲಿ ಬಿಜೆಪಿ ಉಗ್ರ ಪ್ರತಿಭಟನೆ ನಡೆಸಲಿದೆ.ಜನರ ಸಮಸ್ಯೆಗೆ ಪರಿಹಾರಕ್ಕಾಗಿ ನಮ್ಮ ಹೋರಾಟ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here