







ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿದ ರಾಜ್ಯದ ಬಿಜಿಪಿ ನಾಯಕರಿಗೆ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್ ಸಿ ನಾರಾಯಣ್ ರೆಂಜ ಕೃತಜ್ಞತೆ ಸ್ಲಳಿಸಿದ್ದಾರೆ.


ನೇತೃತ್ವ ವಹಿಸಿದ ಸಚಿವರಾದ ಪ್ರಹ್ಲಾದ್ ಜೋಶಿಯವರು, ಸಂಸದರಾದ ಬ್ರಿಜೇಶ್ ಚೌಟರು,ಕೋಟ ಶ್ರೀನಿವಾಸ ಪೂಜಾರಿಯವರು , ಬಿ ವೈ ರಾಘವೇಂದ್ರರು ಹಾಗೂ ಶಾಸಕರಾದ ರಾಜೇಶ್ ನಾಯ್ಕ್, ಆರಗ ಜ್ಞಾನೇಂದ್ರರಿಗೂ ಧನ್ಯವಾದಗಳು. ಜಿಲ್ಲೆಯ ಬಹುಪಾಲು ಆರ್ಥಿಕತೆ ಅಡಕೆಯನ್ನು ಹೊಂದಿರುವ ಕಾರಣ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು… ಸಕಾಲದಲ್ಲಿ ಸ್ಪಂದಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರವರಿಗೆ ತೊಂದರೆಯ ತೀವ್ರತೆಯನ್ನು ಮನವರಿಕೆ ಮಾಡಿದ್ದೀರಿ. ಮಹಾರಾಷ್ಟ್ರದಾದ್ಯಂತ ಅಡಿಕೆ ಸಾಗಣೆ ವಾಹನಗಳನ್ನು ಪ್ರಯೋಗಾಲಯದ ತಪಾಸಣೆಗಾಗಿ ದಿನಗಟ್ಟಲೆ ತಡೆಹಿಡಿಯಲಾಗಿದೆ. ಇದರಿಂದಾಗಿ ಉತ್ತರ ಭಾರತದ ಮಾರುಕಟ್ಟೆಗಳಿಗೆ ತೆರಳಬೇಕಿದ್ದ ನಮ್ಮ ರೈತರ ಅಡಿಕೆ ಬೆಳೆ ಹಾನಿಗೊಳಗಾಗಿ, ಬೆಳೆಗಾರರು ತೀವ್ರ ಆರ್ಥಿಕ ನಷ್ಟ ಎದುರಿಸುವಂತಾಗಿತ್ತು.



ರೈತರ ಹಿತರಕ್ಷಣೆಗೆ ಧಾವಿಸಿ, ಈ ಗಂಭೀರ ಸಮಸ್ಯೆಯ ಕುರಿತು ತಕ್ಷಣವೇ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಚರ್ಚಿಸಿ ಅದಕ್ಕೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಫಡ್ನವೀಸ್ ಅವರು, ತಡೆಹಿಡಿಯಲಾಗಿರುವ ಅಡಿಕೆ ಸರಕನ್ನು ತಕ್ಷಣವೇ ಬಿಡುಗಡೆ ಮಾಡಲು ಮತ್ತು ಮುಂದಿನ ದಿನಗಳಲ್ಲಿ ಇಂತಹ ಸಾಗಣೆಗೆ ಯಾವುದೇ ಅಡ್ಡಿಯಾಗದಂತೆ ಅಗತ್ಯವಿರುವ ಎಲ್ಲಾ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಿದ್ದಾರೆ.
ಅಡಿಕೆ ಬೆಳೆಗಾರರ ಬೆನ್ನಿಗೆ ಸದಾ ನಿಲ್ಲುವ ನಮ್ಮ ಸರ್ಕಾರದ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ ಮಹಾರಾಷ್ಟ್ರದ ಮುಖ್ಯಮಂತ್ರಿಗಳಾದ ಫಡ್ನವೀಸ್ ಜೀಗೂ ರಾಜ್ಯದ ಸಮಸ್ತ ರೈತ ಬಾಂಧವರ ಪರವಾಗಿ ಧನ್ಯವಾದಗಳು.ಅಡಕೆ ಬೆಳೆಗಾರರ ಸಮಸ್ಯೆ ಇತ್ಯರ್ಥವಾಗಿ ಇವತ್ತಿನಿಂದಲೇ ಅಡಿಕೆ ಧಾರಣೆ ಏರುಗತಿಯಲ್ಲಿ ಸಾಗುತ್ತಿದೆ. ಕೃಷಿಕ ಸಂತಸದಲ್ಲಿದ್ದಾನೆ. ನಿಮ್ಮ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಬಿಜೆಪಿಗೆ ಮತ ನೀಡಿ ಆಶೀವೃದಿಸಿದ ಜನರಿಗೆ ನಿಮ್ಮ ಮೇಲೆ ಗೌರವ ಹೆಚ್ಚಾಗಿದೆ ಎಂದು ಆರ್ ಸಿ ನಾರಾಯಣ ತಿಳಿಸಿದ್ದಾರೆ.










