







ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕರುವೇಲು ಒಕ್ಕೂಟದ ಸಿಎಸ್ ಸಿ ಕೇಂದ್ರದಲ್ಲಿ ಇಂದು ಡಿಜಿ ಪೇ ನಗದು ವರ್ಗಾವಣೆ ಸೇವೆ ಉದ್ಘಾಟನೆಗೊಂಡಿತು.


ಒಕ್ಕೂಟದ ಅಧ್ಯಕ್ಷರಾದ ಮಹೇಶ್ ಪರಿವಾಳ್ ದೀಪ ಬೆಳಗಿಸಿ ಡಿಜಿ ಪೇ ಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಪಂಚಾಯತ್ ಮಾಜಿ ಸದಸ್ಯ ತನಿಯಪ್ಪ ಪೂಜಾರಿ, ವಲಯದ ಮೇಲ್ವಿಚಾರಕರು ಲತೇಶ್ ಪೂಜಾರಿ, ಉಪಾಧ್ಯಕ್ಷೆ ಲಲಿತಾ, ಕಾರ್ಯದರ್ಶಿ ದಿವ್ಯ, ಸೇವಾಪ್ರತಿನಿಧಿ ರೇಷ್ಮಾ ಶೆಟ್ಟಿ ಮತ್ತು ವಿ ಎಲ್ ಇ ಚಿತ್ರಾ ಬಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. ಸೇವೆಗೆ ಸದಾ ಸಿದ್ದವಿರುವ ಬಿಳಿಯೂರು ಸಿಎಸ್‌ಸಿ ಕೇಂದ್ರದಲ್ಲಿ ಇರುವ ಈ ಸೇವೆಯ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬಹುದಾಗಿದೆ ಎಂದು ಒಕ್ಕೂಟದ ಪ್ರಮುಖರು ತಿಳಿಸಿದ್ದಾರೆ.













