







ಪುತ್ತೂರು: ವಿಶ್ವಕರ್ಮ ಯುವ ಮಿಲನ್(ರಿ.) ಪುತ್ತೂರು ತಾಲೂಕು ವಲಯ ಇದರ ಆಶ್ರಯದಲ್ಲಿ ಆ.09ರಂದು ಹಾರಾಡಿ ರೈಲ್ವೇ ರಸ್ತೆ, ಭಾರತ್ ಅಟೋ ಕಾರ್ಸ್ ಬಳಿ ನಡೆಯಲಿರುವ ದ.ಕ. ಜಿಲ್ಲಾಮಟ್ಟದ ವಿಶ್ವಕರ್ಮ ಸಮಾಜ ಬಾಂಧವರಿಗೆ ವಿವಿಧ ಆಟೋಟ ಸ್ಪರ್ಧೆ, ಕೆಸರ್ಡ್ ಒಂಜಿ ದಿನ ಹಾಗೂ ಸಾರ್ವಜನಿಕ ಸೇವೆಗಾಗಿ ಆಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.



ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಶಿಲ್ಪಿ ವಾಸುದೇವ ಆಚಾರ್ಯ ಬೆದ್ರಾಳ, ವಿಶ್ವಕರ್ಮ ಯುವ ಮಿಲನ್ (ರಿ.) ಪುತ್ತೂರು ವಲಯದ ಅಧ್ಯಕ್ಷ ಕೆ. ಹರೀಶ್ ಆಚಾರ್ಯ ಕೃಷ್ಣನಗರ ಹಾಗೂ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.













