ಜು. 9:ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜ್ಹನ್, ಏರಿಯಾ ಎ ಪದ ಪ್ರದಾನ

0

ಅಧ್ಯಕ್ಷೆ:ಸುಮಂಗಲಾ ಶೆಣೈ, ಕಾರ್ಯದರ್ಶಿ:ಮಹಾಲಿಂಗ ನಾಯ್ಕ,ಕೋಶಾಧಿಕಾರಿ:ರೋಹಿಣಿ ರಾಘವ ಆಚಾರ್ಯ


ಪುತ್ತೂರು:ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜ್ಹನ್, ಏರಿಯಾ ಎ ಇದರ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಜು.9 ರಂದು ದರ್ಬೆ ಸಚ್ಚಿದಾನಂದ ಸೇವಾ ಸದನದಲ್ಲಿ ಸಂಜೆ ಜರಗಲಿದೆ.ನೂತನ ಅಧ್ಯಕ್ಷರಾಗಿ ಸುಮಂಗಲಾ ಶೆಣೈ, ಕಾರ್ಯದರ್ಶಿಯಾಗಿ ಮಹಾಲಿಂಗ ನಾಯ್ಕ ನರಿಮೊಗರು, ಕೋಶಾಧಿಕಾರಿಯಾಗಿ ರೋಹಿಣಿ ರಾಘವ ಆಚಾರ್ಯರವರು ಆಯ್ಕೆಯಾಗಿದ್ದಾರೆ.

2025-26ರಲ್ಲಿ ಅಧ್ಯಕ್ಷೆಯಾಗಿ ಮಲ್ಲಿಕಾ ಜೆ.ರೈ, ಕಾರ್ಯದರ್ಶಿಯಾಗಿ ರೋಹಿಣಿ ರಾಘವ ಆಚಾರ್ಯ, ಕೋಶಾಧಿಕಾರಿಯಾಗಿ ಸುಮಂಗಲಾ ಶೆಣೈರವರು ಸಂಘವನ್ನು ಮುನ್ನೆಡೆಸಿದ್ದರು.

ನೂತನ ಅಧ್ಯಕ್ಷೆಯ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸುಮಂಗಲ ಶೆಣೈರವರು ಪ್ರಸನ್ನ ಶೆಣೈರವರ ಪತ್ನಿಯಾಗಿದ್ದು ಪದವೀಧರೆಯಾಗಿದ್ದಾರೆ. ಇವರು ವೃತ್ತಿಯಲ್ಲಿ ಡಿಪ್ಲೊಮ ಇನ್ ಪಂಚಕರ್ಮ ಥೆರಪಿಸ್ಟ್ ಆಗಿ ಎಸ್.ಡಿ.ಎಂನಲ್ಲಿ ಪೂರೈಸಿ 5 ವರ್ಷಗಳ ಕಾಲ ಉದ್ಯೋಗದಲ್ಲಿದ್ದು, ಈಗ ಎನ್.ಜಿ.ಒ ಸಂಸ್ಥೆಯಲ್ಲಿ ಮಕ್ಕಳ ಕ್ಷೇತ್ರದಲ್ಲಿ ಹಾಗೂ ಅಕ್ಕ ಮಹಿಳಾ ಕಾನೂನು ಮತ್ತು ರಕ್ಷಣಾ ಪಡೆ ಮಂಗಳೂರು ಇಲ್ಲಿಮಹಿಳಾ ಕ್ಷೇತ್ರದಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದು ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಾ ಸಮಾಜದ ವಿವಿದ ಸೇವಾ ಸಂಸ್ಥೆಯ ಅನುಭವ ಹೊಂದಿರುತ್ತಾರೆ.

ನೂತನ ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಮಹಾಲಿಂಗ ನಾಯ್ಕ ನರಿಮೊಗರು ಇವರು ರಾಜ್ಯ ಸರ್ಕಾರದ ಅಬಕಾರಿ ಇಲಾಖೆಯಲ್ಲಿ ಅಬಕಾರಿ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿ 2020ರಲ್ಲಿ ಸೇವಾ ನಿವೃತ್ತಿ ಹೊಂದಿರುತ್ತಾರೆ. ಇವರು 1990ರಲ್ಲಿ ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್ ನರಿಮೊಗರು ಇದರ ಅಧ್ಯಕ್ಷರಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಿಂದ ಹಾಗೂ ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್ ಇದರ ರಾಷ್ಟ್ರೀಯ ಅಧ್ಯಕ್ಷರಿಂದ ಅತ್ಯುತ್ತಮ ಅಧ್ಯಕ್ಷ ಹಾಗೂ ಘಟಕ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಅಲ್ಲದೆ ಮುಂಡೂರು ಶ್ರೀ ಮೃತ್ಯುಂಜೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯಲ್ಲಿ ಕಾರ್ಯದರ್ಶಿಯಾಗಿ ತೊಡಗಿಸಿಕೊಂಡಿರುತ್ತಾರೆ. ಅಲ್ಲದೆ ಮರಾಟಿ ಸಮಾಜ ಸೇವಾ ಸಂಘ ನರಿಮೊಗರು ಇದರ ಸ್ಥಾಪಕ ಅಧ್ಯಕ್ಷರಾಗಿ ಸತತ ಹತ್ತು ವರ್ಷಗಳ ಸುದೀರ್ಘ ಸೇವಾ ಅವಧಿಯಲ್ಲಿ ಸಂಘಕ್ಕೆ ಸ್ವಂತ ನಿವೇಶನ, ಸಮಾಜ ಮಂದಿರ ನಿರ್ಮಾಣ ಮಾಡಲು ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಸ್ತುತ ಈಗಲೂ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ತಾಲೂಕು ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಪುತ್ತೂರು ಇದರ ಖಜಾಂಜಿಯಾಗಿ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.

ನೂತನ ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ಎಂ.ಪಿ ರೋಹಿಣಿ ರಾಘವ ಆಚಾರ್ಯರವರು ಸ್ವ-ಉದ್ಯೋಗವನ್ನು ನೆಹರುನಗರದಲ್ಲಿ ನಡೆಸುತ್ತಿದ್ದು ಹಲವು ಮಹಿಳೆಯರು ಇದರ ಉಪಯೋಗ ಪಡೆಯುತ್ತಿದ್ದಾರೆ. ಇವರಿಗೆ ಅನೇಕ ಪ್ರಶಸ್ತಿ, ಗೌರವಗಳು ದೊರೆತ್ತಿದ್ದು ರಾಜ್ಯಮಟ್ಟದ ಅವಾರ್ಡ್ ಗಳು, ಬಿರುದುಗಳು ಧಕ್ಕಿರುತ್ತದೆ ಜೊತೆಗೆ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಜು.9:ಪದ ಪ್ರದಾನ..
ಜು.9 ರಂದು ಸಂಜೆ ದರ್ಬೆ ಸಚ್ಚಿದಾನಂದ ಸೇವಾ ಸದನದಲ್ಲಿ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ ಜರಗಲಿದ್ದು,   ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್, ಏರಿಯಾ ಎ ಇದರ ಉಪಾಧ್ಯಕ್ಷೆ ಅಕ್ಷತಾ ಬಿ.ರವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ಮಾಡಲಿದ್ದಾರೆ. ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟ್ರೀಯ ಅಧ್ಯಕ್ಷ ಎಂ.ವಾಸುದೇವನ್ ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ರವರು ಭಾಗವಹಿಸಲಿದ್ದಾರೆ ಎಂದು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜ್ಹನ್, ಏರಿಯಾ ಎ ಇದರ ನಿಕಟಪೂರ್ವ ಅಧ್ಯಕ್ಷೆ ಮಲ್ಲಿಕಾ ಜೆ.ರೈ, ನೂತನ ಅಧ್ಯಕ್ಷೆ ಸುಮಂಗಲಾ ಶೆಣೈ, ಕಾರ್ಯದರ್ಶಿ ಮಹಾಲಿಂಗ ನಾಯ್ಕ, ಕೋಶಾಧಿಕಾರಿ ಎಂ.ಪಿ ರೋಹಿಣಿ ರಾಘವ ಆಚಾರ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here