ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ಅನ್ವೇಷಣಂ ನೂತನ ವಿಜ್ಞಾನಪ್ರಯೋಗಾಲಯ ಲೋಕಾರ್ಪಣೆ

0

ಪುತ್ತೂರು: ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಬೆಟ್ಟಂಪಾಡಿಯಲ್ಲಿ ಅನ್ವೇಷಣಂ ನೂತನ ಪ್ರಯೋಗಾಲಯ ಲೋಕಾರ್ಪಣೆ ಕಾರ್ಯಕ್ರಮ ಜು.4ರಂದು ನಡೆಯಿತು.

ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ ಪಿಡಿಜಿ ರೊಟೇರಿಯನ್ ಅಭಿನಂದನ್ ಶೆಟ್ಟಿ ನೂತನ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡುತ್ತಾ, ಆಧುನಿಕತೆಯ ಭರಾಟೆಯಲ್ಲಿ ವಿಜ್ಞಾನ ಎಲ್ಲರ ಜೀವನದಲ್ಲಿ ಹಾಸುಹೊಕ್ಕಾಗಿದೆ. ನವ ಭಾರತದಲ್ಲಿ ಉದಯೋನ್ಮುಖ ಪ್ರತಿಭೆಗಳಾದ ವಿದ್ಯಾರ್ಥಿಗಳು ಹೊಸ ರೀತಿಯ ಅನ್ವೇಷಣೆಗಳಲ್ಲಿ ತೊಡಗಿಕೊಳ್ಳಲು ಇದೊಂದು ಸುವರ್ಣಾವಕಾಶ ಎಂದರು. ಕಾರ್ಯಕ್ರಮದ ಅಧ್ಯಕ್ಷರಾದ ರಂಗನಾಥ ರೈ ಗುತ್ತು ಇವರು ಮಾತನಾಡುತ್ತಾ ನಮ್ಮ ಬಹುದಿನಗಳ ಕನಸು ಇಂದು ನನಸಾಗಿದೆ.

ಈ ಯಶಸ್ಸಿಗೆ ಕಾರಣಕರ್ತರಾದ ಸರ್ವರಿಗೂ ಅಭಿನಂದನೆಗಳು ಎಂಬುದಾಗಿ ಕೃತಜ್ಞತಾ ಮಾತುಗಳನ್ನಾಡಿದರು. ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ ಅಧ್ಯಕ್ಷರಾದ ರೋ. ರವಿಕುಮಾರ್ ರೈ, ಐಪಿಸಿ ರೋ. ಜಯಂತ್ ಬಾಯಾರು, ಕೋಶಾಧಿಕಾರಿ ರೋ.ಪ್ರಕಾಶ್ ರೈ ಮನವಳಿಕೆ, ರೋ. ಶರತ್ ಕುಮಾರ್ ರೈ, ರೊ.ಸುರೇಶ್ ಕೆಯು, ರೋ.ವಿಶ್ವಾಸ್ ಶೆಣೈ, ರೋ. ಡಾ.ಸೂರ್ಯನಾರಾಯಣ ಹಾಗೂ ಶಾಲಾ ಸಂಚಾಲಕರಾದ ಡಾ.ಸತೀಶ್ ರಾವ್, ಕೋಶಾಧಿಕಾರಿಗಳಾದ ಕರುಣಾಕರ ಶೆಟ್ಟಿ ಕೊಮ್ಮಂಡ, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಕನ್ನಡ್ಕ, ಡಾ.ಶ್ರೀ ಪ್ರಕಾಶ್ ರೈ ಬೈಲಾಡಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯಗುರು ರಾಜೇಶ್ ಎನ್ ಸ್ವಾಗತಿಸಿ ಸಹ ಶಿಕ್ಷಕಿ ಸಂಧ್ಯಾ ವಂದಿಸಿದರು. ವಿದ್ಯಾರ್ಥಿನಿಯರಾದ ವೃದ್ಧಿ ಸಿ ಕೃತಿ ಕೆ ಎಸ್ ಹಾಗೂ ಸಾತ್ವಿಕ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here