ಸವಣೂರಿನಲ್ಲಿ ಅಕ್ಷೋಭ್ಯ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಶುಭಾರಂಭ

0


ಪುತ್ತೂರು: ಸವಣೂರಿನ ಪದ್ಮಾಂಭ ವಾಣಿಜ್ಯ ಸಂಕೀರ್ಣದಲ್ಲಿ ಅಕ್ಷೋಭ್ಯ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಜು.9ರಂದು ಶುಭಾರಂಭಗೊಂಡಿತು

ಜನರಿಗೆ ಉತ್ತಮವಾದ ಸೇವೆಯನ್ನು ನೀಡಲಿ- ಸೀತಾರಾಮ ರೈ
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸಹಕಾರರತ್ನ ಸವಣೂರು ಸೀತಾರಾಮ ರೈ ಅವರು ದೀಪ ಬೆಳಗಿಸಿ, ಡೆಂಟಲ್ ಕ್ಲಿನಿಕ್ ಅನ್ನು ಉದ್ಘಾಟಿಸಿ, ಮಾತನಾಡಿ ಸವಣೂರಿನಲ್ಲಿ 25 ವರ್ಷಗಳ ಹಿಂದೆ ನಾನು ಪದ್ಮಾಂಭ ವಾಣಿಜ್ಯ ಸಂಕೀರ್ಣವನ್ನು ಕಟ್ಟಿದ್ದೆ, ಇಲ್ಲಿ ಸುಮಾರು 20 ಅಂಗಡಿ ಕೋಣೆಗಳು ಇದ್ದು, ಈ ಭಾಗದಲ್ಲಿ ಉತ್ತಮ ವ್ಯವಹಾರ ಕೇಂದ್ರವಾಗಿ ಬೆಳೆದು ನಿಂತಿದೆ. ಇದೀಗ ಡಾ.ಸ್ವಸ್ತಿಕ್ ಕಲ್ಲೂರಾಯರವರು ಡೆಂಟಲ್ ಕ್ಲಿನಿಕ್ ಅನ್ನು ಪ್ರಾರಂಭ ಮಾಡಿರುವುದು ತುಂಬಾ ಸಂತೋಷ ತಂದಿದೆ. ಈ ಸಂಸ್ಥೆಯು ಸವಣೂರು ಸುತ್ತುಮತ್ತಲಿನ ಜನರಿಗೆ ಉತ್ತಮವಾದ ಸೇವೆಯನ್ನು ನೀಡಲಿ ಎಂದು ಶುಭಹಾರೈಸಿದರು.

ಸಂತೋಷದ ವಿಷಯವಾಗಿದೆ- ನಳಿನ್ ಕುಮಾರ್
ಅಕ್ಷೆಭ್ಯ ಲೋಗೋ ಉದ್ಘಾಟನೆಗೈದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ ಸಮಾಜಮುಖಿ ಚಿಂತೆನೆಯ ಕಲ್ಲೂರಾಯ ಕುಟುಂಬದಿಂದ ಇದೀಗ ಸವಣೂರಿನಲ್ಲಿ ಡೆಂಟಲ್ ಕ್ಲಿನಿಕ್ ಪ್ರಾರಂಭವಾಗಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಕೇಶವ ಕಲ್ಲೂರಾಯ ಮತ್ತು ಇಂದಿರಾ ಕಲ್ಲೂರಾಯ ಅವರ ಮಗ ಡಾ. ಸ್ವಸ್ತಿಕ್ ಕಲ್ಲೂರಾಯರವರ ಡೆಂಟಲ್ ಕ್ಲಿನಿಕ್ ಉತ್ತಮವಾಗಿ ಸೇವೆಯನ್ನು ನೀಡಲಿ ಎಂದು ಶುಭಹಾರೈಸಿದರು.

ಸೌಂದರ್‍ಯ ಹೆಚ್ಚುತ್ತದೆ- ಭಾಗೀರಥಿ
ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ ಬೆಳಿಗ್ಗೆ ಎದ್ದ ತಕ್ಷಣ ನಾವು ಹಲ್ಲು ಉಜ್ಜಿ, ಹಲ್ಲಿನ ರಕ್ಷಣೆಯನ್ನು ಮಾಡುತ್ತೇವೆ, ಇದರಿಂದ ನಮ್ಮ ಸೌಂದರ್‍ಯ ಹೆಚ್ಚುತ್ತದೆ, ಹಲ್ಲಿನ ಸಮಸ್ಯೆಗಳು ಕಂಡು ಬಂದಾಗ ಡೆಂಟಲ್ ವೈದ್ಯರನ್ನು ಕಾಣುತ್ತೇವೆ. ಇದೀಗ ಸವಣೂರಿನಲ್ಲಿ ಡೆಂಟಲ್ ಕ್ಲಿನಿಕ್ ಆರಂಭವಾಗಿರುವುದು ತುಂಬಾ ಸಂತೋಷದ ವಿಚಾರವಾಗಿದೆ ಎಂದು ಹೇಳಿ ಸಂಸ್ಥೆಗೆ ಶುಭಹಾರೈಸಿದರು.
ಹಿರಿಯ ಸಾಮಾಜಿಕ ಮುಂದಾಳು ಬಿ.ಕೆ.ರಮೇಶ್ ಕಲ್ಲೂರಾಯ, ಪುತ್ತೂರು ವಿವೇಕಾನಂದ ಪಿಯು ಕಾಲೇಜ್ ಅಧ್ಯಕ್ಷ ರವೀಂದ್ರ ಪಿ, ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ಗೌರಿ ಬನ್ನೂರು, ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಕೃಷ್ಣ ರೈ ಪುಣ್ಚಪ್ಪಾಡಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಆಢಳಿತಾಧಿಕಾರಿ ಆಶ್ವಿನ್ ಎಲ್ ಶೆಟ್ಟಿ, ಪ್ರಮುಖರಾದ ಗಣೇಶ್ ಶೆಟ್ಟಿ ಕುಂಜಾಡಿ, ಸುಧಾಕರ್ ರೈ ಕುಂಜಾಡಿ, ರಾಜಾರಾಮ್ ಪ್ರಭು ಆಶ್ವಿನ್ ಫಾರ್ಮ, ಸುರೇಶ್ ರೈ ಸೂಡಿಮುಳ್ಳು, ಸುಪ್ರೀತ್ ರೈ ಖಂಡಿಗ, ಹರೀಶ್ ಕಂಜಿಪಿಲಿ, ಪ್ರದೀಪ್ ರೈ ಮನವಳಿಕೆ, ಗಣೇಶ್ ಉದನಡ್ಕ, ಚಂದ್ರಶೇಖರ್ ಪಿ, ಸವಣೂರು, ಡಾ, ಶ್ಯಾಮ್‌ಸುಂದರ್, ಡಾ. ಸುಬ್ರಹ್ಮಣ್ಯ ಭಟ್, ರಪೀಕ್ ಅರ್ತಿಕರೆ, ಸುಂದರಿ ಬಂಬಿಲ, ರಾಜೀವಿ ಶೆಟ್ಟಿ ಕಡೆಂಜಿ, ಮೋಹನ್ ರೈ ಕೆರೆಕ್ಕೋಡಿ, ಪ್ರಭಾಕರ್ ಶೆಟ್ಟಿ ನಡುಬೈಲು, ಸತೀಶ್ ಬಲ್ಯಾಯ, ಸತೀಶ್ ಅಂಗಡಿಮೂಲೆ, ಭರತ್ ರೈ ಪಾಲ್ತಾಡು, ತಾರಾನಾಥ ಬೊಳಿಯಾಲ, ಸರ್ವೇಶ್ವರ ಕೇಕುಣ್ಣಾಯ, ವಿನೋದ ರೈ ಪಾಲ್ತಾಡು, ಹರಿಕಲಾ ರೈ ಕುಂಜಾಡಿ, ತೀರ್ಥರಾಮ್ ಕೆಡೆಂಜಿ, ಡಾ. ಅವಿನಾಶ್ ಬೆಳ್ಳಾರೆ, ವಿವೇಕ್ ಕಾಳಿಕಾಂಬಾ ಸರ್ವಿಸ್‌ಸ್, ಬಾಳಪ್ಪ ಪೂಜಾರಿ ಬಂಬಿಲದೋಳ, ವಿಠಲ ಶೆಟ್ಟಿ, ನಿತ್ಯಾಪ್ರಸಾದ್, ಸತ್ಯಪ್ರಕಾಶ್, ಅನ್ನಪೂರ್ಣಪ್ರಸಾದ್ ರೈ ಬೈಲಾಡಿ, ಚಂದ್ರಾವತಿ ಸುಣ್ಣಾಜೆ, ಆಶಾ ರೈ ಕಲಾಯಿ, ಸಂತೋಷ್ ಶೆಟ್ಟಿ ಕಲಾಯಿ, ಗೋಪಾಲಕೃಷ್ಣ ರೈ ಸವಣೂರು, ನ್ಯಾಯವಾದಿ ಪ್ರವೀಣ್ ಬಂಬಿಲದೋಳ, ಚಂದ್ರಶೇಖರ್ ಕುಂಜತ್ತಾಯ, ರಾಮಕೃಷ್ಣ ಪ್ರಭು ಸವಣೂರು, ಶೀನಪ್ಪ ಶೆಟ್ಟಿ ನೆಕ್ರಾಜೆ, ಹರೀಸ್ ಪುತ್ತೂರಾಯ, ಹರೀಶ್ ರಾವ್, ಗಿರಿಶಂಕರ್ ಸುಲಾಯ ದೇವಸ್ಯ ಸೇರಿದಂತೆ ನೂರಾರು ಮಂದಿ ಭಾಗವಹಿಸಿದರು.


ಕೇಶವ ಕಲ್ಲೂರಾಯ ಅತಿಥಿಗಳನ್ನು ಗೌರವಿಸಿದರು, ಇಂದಿರಾ ಬಿ.ಕೆ. ಸ್ವಾಗತಿಸಿ, ಡಾ. ಸ್ವಸ್ತಿಕ್ ಕಲ್ಲೂರಾಯ ವಂದಿಸಿದರು. ನ್ಯಾಯವಾದಿ ಮಹೇಶ್ ಕೆ.ಸವಣೂರು ಕಾರ್‍ಯಕ್ರಮ ನಿರೂಪಿಸಿದರು. ರಕ್ಷಾ ಸುಣ್ಣಾಜೆ ಪ್ರಾರ್ಥನೆಗೈದರು. ಸ್ಪೂರ್ತಿ ಕಲ್ಲೂರಾಯ ಸಹಕರಿಸಿದರು.

LEAVE A REPLY

Please enter your comment!
Please enter your name here