







ನೆಲ್ಯಾಡಿ: ರಾಮಕುಂಜ-ಗೋಳಿತ್ತೊಟ್ಟು ರಸ್ತೆಯ ಬಜತ್ತೂರು ಗ್ರಾಮದ ಮೇಲೂರು-ಬೈಲಂಗಡಿ ಎಂಬಲ್ಲಿ ರಸ್ತೆ ಬದಿ ಇದ್ದ ಅಪಾಯಕಾರಿ ಮರಗಳನ್ನು ಬಜತ್ತೂರು ಗ್ರಾ.ಪಂ.ವತಿಯಿಂದ ತೆರವುಗೊಳಿಸಲಾಗಿದೆ.


ಮೇಲೂರು ಸಮೀಪದ ಬೈಲಂಗಡಿಯಲ್ಲಿ ಎರಡ್ಮೂರು ಮರಗಳು ರಸ್ತೆಗೆ ಬಾಗಿಕೊಂಡು ಅಪಾಯಕಾರಿ ಸ್ಥಿತಿಯಲ್ಲಿತ್ತು. ಈ ಬಗ್ಗೆ ಗ್ರಾಮಸ್ಥರು ಬಜತ್ತೂರು ಗ್ರಾ.ಪಂ.ಹಾಗೂ ಸಂಬಂಧಪಟ್ಟ ಇಲಾಖೆಯವರಿಗೆ ಮನವಿ ಮಾಡಿದ್ದರು. ಮಳೆಗಾಲ ಆರಂಭಗೊಂಡಿದ್ದು ಈ ಮರಗಳು ಗಾಳಿ ಮಳೆಗೆ ಬೀಳುವ ಸ್ಥಿತಿಯಲ್ಲಿತ್ತು. ಈ ಮರಗಳ ಪಕ್ಕದಲ್ಲೇ ವಿದ್ಯುತ್ ತಂತಿಯೂ ಹಾದು ಹೋಗಿತ್ತು. ಇದೀಗ ಅಪಾಯಕಾರಿ ಮರಗಳನ್ನು ಬಜತ್ತೂರು ಗ್ರಾ.ಪಂ.ವತಿಯಿಂದ ತೆರವುಗೊಳಿಸಲಾಗಿದೆ. ಬಜತ್ತೂರು ಗ್ರಾ.ಪಂ.ಮಾಜಿ ಸದಸ್ಯ ಗಂಗಾಧರ ಕೆ.ಎಸ್.ಮೇಲೂರು ಹಾಗೂ ಗ್ರಾಮಸ್ಥರು ಈ ವೇಳೆ ಉಪಸ್ಥಿತರಿದ್ದರು.













