







ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರಿ ಸಂಘ ನೆಲ್ಯಾಡಿ ಇದರ ಸಹಯೋಗದೊಂದಿಗೆ ಕಾಮಧೇನು ಶ್ರೀ ವರಮಹಾಲಕ್ಷ್ಮೀ ಸೇವಾ ಸಮಿತಿ ವತಿಯಿಂದ ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶಬರೀಶ ಕಲಾ ಮಂದಿರದಲ್ಲಿ ನಡೆಯುವ 2ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಜು.7ರಂದು ಕಾಮಧೇನು ಮಹಿಳಾ ಸಹಕಾರಿ ಸಂಘದ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.



44ನೇ ವರ್ಷದ ನೆಲ್ಯಾಡಿ-ಕೌಕ್ರಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಪ್ರಹ್ಲಾದ ಶೆಟ್ಟಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭಹಾರೈಸಿದರು. ಕಾಮಧೇನು ಶ್ರೀ ವರಮಹಾಲಕ್ಷ್ಮೀ ಸೇವಾ ಸಮಿತಿ ಅಧ್ಯಕ್ಷೆ ಉಷಾ ಅಂಚನ್, ಉಪಾಧ್ಯಕ್ಷೆ ಸಂಪಾವತಿ, ಕಾರ್ಯದರ್ಶಿ ದಿವ್ಯಾ, ಜೊತೆ ಕಾರ್ಯದರ್ಶಿ ವಾರಿಜಾಕ್ಷಿ, ಕೋಶಾಧಿಕಾರಿ ರಶ್ಮಿತಾ, ಸಂಚಾಲಕಿ ಚೈತನ್ಯ, ಸದಸ್ಯರಾದ ರತಿ, ಪ್ರವೀಣಿ, ಮೈತ್ರಿ, ಮೇಘನಾ ಶೈನ್ ಜಯಂತಿ, ಶಾಲಿನಿ, ಶ್ರೀಲತಾ, ಶ್ವೇತಾ, ಕುಸುಮಾವತಿ, ಆದರ್ಶ, ಸವಿತಾ, ಗಣೇಶ್, ಹೇಮಚಂದ್ರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಮಧೇನು ಶ್ರೀ ವರಮಹಾಲಕ್ಷ್ಮೀ ಸೇವಾ ಸಮಿತಿಗೆ ಸವಿತಾ ಸರ್ವೋತ್ತಮ ಗೌಡ, ಹೇಮಾವತಿ ಸದಾನಂದ ಕುಂದರ್, ಗಾಯತ್ರಿ ಗಣೇಶ್ ನೆಲ್ಯಾಡಿ, ಭಾರತಿ ಹೊಸಮಜಲು, ಸಂಧ್ಯಾ ಸುಧೀರ್, ಅಶ್ವಿತಾ ಹೊಸಮಜಲು, ಶೈಲ ದೋಂತಿಲ, ಪ್ರಿಯಾಂಕ ರಜನೀಶ ಪುತ್ಯ, ನಮಿತ ಹೊಸಮಜಲು, ಕಲಾವತಿ ತೋಟ, ಪವಿತ್ರ ಮಹೇಶ್, ಅಶ್ವಿನಿ ಗೋಳಿತೊಟ್ಟು, ರಮ್ಯ ಗುರುಂಪು, ಶ್ವೇತಾ ಸಂತೋಷ ಕಲಾಯಿ, ಅನಿತಾ ಪ್ರಶಾಂತ, ಸುನಿತಾ ಟೈಲರ್, ಪ್ರಜನಿ ಕಡೆಂಬಿಲ, ಪೂರ್ಣಿಮಾ ಕಡೆಂಬಿಲ, ರಂಜಿತ ಕೊಲ್ಯುಟ್ಟು, ಸುಜಾತ ಮಾದೇರಿ, ರಕ್ಷಿತಾ ಕೊಲ್ಯೊಟ್ಟು, ವಿಜಯ ಕೊಲ್ಯೊಟ್ಟು, ಸವಿತಾ ಕಲಾಯಿ, ಅನಿತ ಕಲಾಯಿ, ಹೇಮಲತಾ ಹೊಸಮಜಲು, ನಿತ್ಯ ಕೊಕ್ಕಡ, ಆಶಾ ಸೋನಿತ್ ಹೊಸಮಜಲು, ಯಶೋಧ ಆಶಾಕಾರ್ಯಕರ್ತೆ ಕೊಕ್ಕಡ, ಪರಮೇಶ್ವರಿ ಶಿವಾರು ಹಾಗೂ ವೇದಾವತಿ ಜನಾರ್ದನ ಬಾಣಜಾಲು ಇವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.












