ಪುರುಷರಕಟ್ಟೆ ಪ್ರಕರಣ: ಬಿಜೆಪಿ ಪ್ರಮುಖರಿಂದ ಯುವತಿ ಮನೆಗೆ ಭೇಟಿ-ಪ್ರತಿಭಟನೆಗೆ ಸಿದ್ಧತೆ

0

ಬಿಜೆಪುತ್ತೂರು:ಯುವಕನೋರ್ವ ಚಾಕು ಹಿಡಿದುಕೊಂಡು ತನ್ನ ಮುಂದೆ ಹೋದ ಮತ್ತು ತಂಡದ ಜೊತೆ ವಾಹನವೊಂದರಲ್ಲಿ ತೆರಳಿರುವುದನ್ನು ಗಮನಿಸಿದ ಯುವತಿ, ಚಾಕು ತೋರಿಸಿ ವಾಹನವೊಂದರಲ್ಲಿ ಹಿಂಬಾಲಿಸಿರುವುದಾಗಿ ಆರೋಪಿಸಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿದ್ದರೂ ಘಟನೆಗೆ ಸಂಬಂಧಿಸಿ ಯುವಕರು ನೀಡಿದ ದೂರನ್ನು ಸ್ವೀಕರಿಸಿರುವ ಪೊಲೀಸರು ದೂರು ನೀಡಿದ ಯುವತಿಯ ಮೇಲೆಯೂ ಪ್ರಕರಣ ದಾಖಲಿಸಿಕೊಂಡಿರುವುದನ್ನು ಖಂಡಿಸಿ ಬಿಜೆಪಿ ಮತ್ತು ಹಿಂದು ಸಂಘಟನೆಯವರು ಪ್ರತಿಭಟನೆಗೆ ಸಿದ್ಧತೆ ನಡೆಸಿರುವ ಕುರಿತು ಮಾಹಿತಿ ಲಭ್ಯವಾಗಿದೆ.


ಜು.9ರಂದು ಬಿಜೆಪಿ ಮುಖಂಡರು ಮತ್ತು ಹಿಂದೂ ಸಂಘಟನೆಗಳ ಪ್ರಮುಖರು ಯುವತಿಯ ಮನೆಗೆ ಭೇಟಿ ನೀಡಿ ಯುವತಿಯ ತಂದೆ ಶಾಂತಪ್ಪ ಗೌಡ ಅವರಲ್ಲಿ ಮಾತುಕತೆ ನಡೆಸಿದ್ದಾರೆ.ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ಮುರಳಿಕೃಷ್ಣ ಹಸಂತಡ್ಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಶಶಿಧರ್ ನಾಯಕ್, ಸತೀಶ್ ನಾಕ್ ಪರ್ಲಡ್ಕ, ಸಂತೋಷ್ ಕೈಕಾರ, ರಾಜೇಶ್ ಬನ್ನೂರು, ವಿದ್ಯಾಧರ ಜೈನ್, ನಿತೀಶ್ ಕುಮಾರ್ ಶಾಂತಿವನ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.


ಪುರುಷರಕಟ್ಟೆ ಎಂಬಲ್ಲಿ ಜು.8ರಂದು ಬೆಳಗ್ಗೆ ಸುಮಾರು 6.45ಕ್ಕೆ ಆನಡ್ಕದಲ್ಲಿರುವ ತನ್ನ ಮನೆಯಿಂದ ದೂರುದಾರೆ ಯುವತಿ ಪುರುಷರಕಟ್ಟೆಗೆ ಸ್ಕೂಟಿಯಲ್ಲಿ ಬಂದು ನರಿಮೊಗರು ಸಹಕಾರಿ ಬ್ಯಾಂಕ್‌ನ ಬಳಿ ಪಾರ್ಕ್ ಮಾಡಿ ಪುತ್ತೂರಿಗೆ ತೆರಳಲು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಯುವಕನೋರ್ವ ಕೈಯಲ್ಲಿ ಚೂರಿ ಹಿಡಿದು ಯುವತಿಯ ಮುಂದಿನಿಂದ ಹೋದ ಘಟನೆಗೆ ಸಂಬಂಧಿಸಿದಂತೆ ಯುವತಿ ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಯುವಕರನ್ನು ಪೊಲೀಸರು ವಿಚಾರಣೆ ನಡೆಸಿದ್ದರು.ತಾವು ಯಾವುದೇ ಅಪರಾಧಿಕ ಕೃತ್ಯದಲ್ಲಿ ತೊಡಗಿಲ್ಲ.ಪಕ್ಕದಲ್ಲಿದ್ದ ಅಂಗಡಿಯೊಂದರಿಂದ ಬ್ರೆಡ್‌ಗೆ ಚೀಸ್ ಹಾಕಲು ಚೂರಿಯನ್ನು ತಂದಿದ್ದಾಗಿಯೂ,ಅದನ್ನು ಬೇಕರಿಗೆ ಹಿಂತಿರುಗಿಸಲು ಹೋಗಿದ್ದಾಗಿಯೂ ವಿಚಾರಣೆ ವೇಳೆ ಯುವಕರು ಪೊಲೀಸರಿಗೆ ತಿಳಿಸಿದ್ದರಲ್ಲದೆ ಈ ವಿಚಾರ ತಿಳಿದಿದ್ದರೂ ಧಾರ್ಮಿಕ ದ್ವೇಷಭಾವನೆಯಿಂದ ದುರುದ್ದೇಶಪೂರ್ವಕವಾಗಿ ತಮ್ಮ ವಿರುದ್ಧ ಪ್ರಕರಣ ದಾಖಲಿಸಲು ಯತ್ನಿಸಿರುವುದಾಗಿ ಆರೋಪಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ದೂರಿನಡಿ ಯುವತಿ,ಯುವತಿಯ ತಂದೆ ಹಾಗೂ ಬಿಜೆಪಿ,ಹಿಂದೂ ಸಂಘಟನೆ ಮುಖಂಡರ ಸಹಿತ ಕೆಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಈ ರೀತಿಯಾದರೆ,ಹೆಣ್ಣು ಮಗಳೊಬ್ಬಳು ತನಗಾದ ನೋವನ್ನು ಪೊಲೀಸರ ಬಳಿ ತಿಳಿಸಿದ್ದೇ ತಪ್ಪಾ ?ಈ ಸಂಬಂಧ ಪೋಲೀಸ್ ಠಾಣಾ ಇನ್ಸ್‌ಪೆಕ್ಟರ್ ಮತ್ತು ದಕ್ಷಿಣ ಕನ್ನಡ ಎಸ್ಪಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮತ್ತು ತಾರತಮ್ಯ ನೀತಿ ಅನುಸರಿಸಿದ ಸರಕಾರ ಮತ್ತು ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here